ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಎರಡನೇ ಪುತ್ರಿ ಅನಸೂಯಮ್ಮ (88 ವರ್ಷ) ಗುರುವಾರ (ಜು.28) ಬೆಳಗ್ಗೆ ನಿಧನರಾದರು.
ಅವರ ಪತಿ ದಿವಂಗತ ಡಾ. ಚಂದ್ರಶೇಖರ್ ಅವರು ಪ್ರಖ್ಯಾತ ವೈದ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಸಹೋದರನ ಮಗನಾಗಿದ್ದರು. ಅಲ್ಲದೆ, ತಮ್ಮ ಇಬ್ಬರು ಪುತ್ರರನ್ನು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಎಸ್. ನಿಜಲಿಂಗಪ್ಪನವರ ಬಹುತೇಕ ಮಕ್ಕಳು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ನೆರೆಹೊರೆಯವರಿಗೂ ಪರಿಚಿತರಲ್ಲದಷ್ಟು ಸರಳ ಜೀವನವನ್ನು ನಡೆಸುತ್ತಿದ್ದರು. ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಶುಕ್ರವಾರ (ಜುಲೈ ೨೯) ಅಂತ್ಯಕ್ರಿಯೆ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮೋಹನ್‌ಕುಮಾರ್ ಕೊಂಡಜ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ | ಹಿರಿಯ ಚಿಂತಕ, ವಿಮರ್ಶಕ ಜಿ.ರಾಜಶೇಖರ್ ನಿಧನ