Site icon Vistara News

Karnataka Election: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲೆಸೆತ; ತಲೆಗೆ ಗಂಭೀರ ಗಾಯ

Former Deputy CM Dr G Parameshwara pelted with stones, Head injury

Former Deputy CM Dr G Parameshwara pelted with stones, Head injury

ತುಮಕೂರು: ನಾಮಪತ್ರ ಸಲ್ಲಿಕೆ ವೇಳೆ ಕಲ್ಲೆಸೆತ ಪ್ರಕರಣ ನಡೆದ ಬೆನ್ನಲ್ಲೇ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಮೇಲೆ ಮತ್ತೊಮ್ಮೆ ಕಲ್ಲೆಸೆದಿರುವ ಘಟನೆ ನಡೆದಿದೆ. ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಚುನಾವಣಾ ಪ್ರಚಾರದ (Karnataka Election) ವೇಳೆ ಕಿಡಿಗೇಡಿಯೊಬ್ಬ ಕಲ್ಲೆಸೆದ ಕಾರಣ ಪರಮೇಶ್ವರ್‌ ಅವರ ತಲೆಗೆ ಗಂಭೀರ ಗಾಯವಾಗಿದೆ.

ಭೈರೇನಹಳ್ಳಿಯಲ್ಲಿಯಲ್ಲಿ ಪರಮೇಶ್ವರ್ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಅವರನ್ನು ಕಾರ್ಯಕರ್ತರು ಮೇಲೆತ್ತಿ ಕುಣಿಯುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದ ಕಿಡಿಗೇಡಿ ಕಲ್ಲೆಸೆದಿದ್ದಾನೆ. ಕಲ್ಲೇಟು ಬಿದ್ದ ನಂತರ ತಲೆ ಹಿಡಿದು ಪರಮೇಶ್ವರ್ ಕೆಳಗಿಳಿದಿದ್ದಾರೆ. ಬಳಿಕ ನೋಡಿದಾಗ ತಲೆ ಭಾಗಕ್ಕೆ ಗಾಯವಾಗಿತ್ತು. ಹೀಗಾಗಿ ಅವರಿಗೆ ಅಕ್ಕಿರಾಂಪುರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ‌ ಸಿದ್ದಾರ್ಥ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಪ್ರಚಾರದ ವೇಳೆ ಕಲ್ಲೆಸೆತದಿಂದ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಮತ್ತೊಂದೆಡೆ ಕಾರ್ಯಕರ್ತರು ಪರಮೇಶ್ವರ್‌ ಅವರನ್ನು ಮೇಲೆತ್ತಿ ಕುಣಿಯುತ್ತಿದ್ದಾಗ ಯಾವುದೋ ರಾಡ್‌ ತಗುಲಿ ಗಾಯವಾಗಿದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಘಟನೆಗೆ ಕಾರಣವೇನು ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಾಯಗೊಂಡ ಡಾ.ಜಿ. ಪರಮೇಶ್ವರ್‌ ಅವರನ್ನು ಕಾರ್ಯಕರ್ತರು ಆಸ್ಪತ್ರೆಗೆ ಕರೆದೊಯ್ದರು.

ಏ.19ರಂದು ಪರಮೇಶ್ವರ್‌ ಅವರು ಕೊರಟಗೆರೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವಾಗ ಕಿಡಿಗೇಡಿತೊಬ್ಬ ಕಲ್ಲೆಸೆದಿದ್ದ. ಆಗ ಗೇಟ್‌ ಬಳಿ ಇದ್ದ ಮಹಿಳಾ ಪೇದೆಗೆ ಪೆಟ್ಟು ಬಿದ್ದು ಅವರು ಸ್ಥಳದಲ್ಲೇ ಕುಸಿದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಕಾಂಗ್ರೆಸ್‌ ನಾಯಕನ ಮೇಲೆ ಕಲ್ಲೆಸೆತ ಪ್ರಕರಣ ನಡೆದಿದೆ.

ಇದನ್ನೂ ಓದಿ | Bike Accident: ಚಿಕ್ಕಮಗಳೂರಿನಲ್ಲಿ ಬೈಕ್-ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

ಸೆಕ್ಯೂರಿಟಿ ಗಾರ್ಡ್‌ ಮೇಲೆ Blink it ಡೆಲಿವರಿ ಬಾಯ್‌ ದರ್ಪ; ಸಹಿ ಮಾಡಿ ಒಳಗೆ ಹೋಗಿ ಎಂದಿದ್ದಕ್ಕೆ ಹಲ್ಲೆ

ಬೆಂಗಳೂರು: ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ (Sampigehalli Police Station) ಚೊಕ್ಕನಹಳ್ಳಿ ಸಮೀಪದಲ್ಲಿರುವ ನಕ್ಷತ್ರ ಅಪಾರ್ಟ್‌ಮೆಂಟ್‌ನಲ್ಲಿರುವ (Nakshatra Apartment) ಸೆಕ್ಯೂರಿಟ್‌ ಗಾರ್ಡ್‌ ಮೇಲೆ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌ (Blink It Delivery Boy) ಹಲ್ಲೆ ನಡೆಸಿದ್ದಾನೆ.

ಕಳೆದ ಏಪ್ರಿಲ್ 26ರ ಮಧ್ಯಾಹ್ನದ ಹೊತ್ತು ಈ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಬಂದಿದ್ದ ಯುವಕರಿಬ್ಬರು ಏಕಾಏಕಿ ಅಪಾರ್ಟ್‌ಮೆಂಟ್‌ ಆವರಣದ ಒಳಗೆ ನುಗ್ಗಿದ್ದಾರೆ. ಅಲ್ಲೆ ಇದ್ದ ಸೆಕ್ಯೂರಿಟ್‌ ಗಾರ್ಡ್‌ ತಡೆದು, ಹೀಗೆಲ್ಲ ಅನುಮತಿಯಿಲ್ಲದೆ ಒಳಗೆ ಹೋಗುವಂತಿಲ್ಲ ಎಂದಿದ್ದಾರೆ. ಬಳಿಕ ಬುಕ್‌ನಲ್ಲಿ ಹೆಸರು ಬರೆದು ಸಹಿ ಮಾಡಿ ಒಳಗೆ ಹೋಗುವಂತೆ ಹೇಳಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌ ಗಾಡಿಯಿಂದ ಇಳಿದವನೇ, ಸೆಕ್ಯೂರಿಟಿ ಗಾರ್ಡ್‌ ಜತೆಗೆ ಮಾತಿಗೆ ಮಾತು ಬೆಳೆಸಿದ್ದಾನೆ. ಮಾತಿನ ಚಕಮಕಿ ವೇಳೆ ಸೆಕ್ಯೂರಿಟ್‌ ಗಾರ್ಡ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಅಲ್ಲಿದ್ದ ಅಪಾರ್ಟೆಮೆಂಟ್‌ ನಿವಾಸಿಗಳು ಗಲಾಟೆಯನ್ನು ಬಿಡಿಸಿದ್ದಾರೆ.

ಇದನ್ನೂ ಓದಿ: Road Accident: ಚಿಕ್ಕಮಗಳೂರಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದ ಯುವತಿ ಮೃತ್ಯು

ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡೆಲಿವರಿ ಬಾಯ್‌ ದರ್ಪವನ್ನು ಖಂಡಿಸಿ, ಬೆಂಗಳೂರು ಪೊಲೀಸರಿಗೆ ವಿಡಿಯೊ ಸಮೇತ ಟ್ಯಾಗ್‌ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Exit mobile version