ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ಹೆಚ್ಚು ಕಡಿಮೆ 2 ತಿಂಗಳಷ್ಟೇ ಬಾಕಿ ಇದೆ. ಈ ಮಧ್ಯೆ ವಿವಿಧ ಪಕ್ಷಗಳ ಪ್ರಚಾರ ಭರಾಟೆಯೂ ಜೋರಾಗಿಯೇ ಇದೆ. ಅಲ್ಲದೆ, ಪಕ್ಷಾಂತರ ಪರ್ವವೂ ಹೆಚ್ಚುತ್ತಲಿದೆ. ಅರಕಲಗೂಡಿನಲ್ಲಿ ಜೆಡಿಎಸ್ ಶಾಸಕರಾಗಿದ್ದ ಎ.ಟಿ. ರಾಮಸ್ವಾಮಿ (AT Ramaswamy) ಅವರು ಪಕ್ಷ ತೊರೆಯುವ ಸೂಚನೆಯನ್ನು ಈಚೆಗೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಮಾಜಿ ಸಚಿವ ಎ. ಮಂಜು (A Manju) ತಾವು ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ತಾವೇ ಘೋಷಿಸಿಕೊಂಡಿದ್ದಾರೆ.
ಸ್ವಗ್ರಾಮ ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದಲ್ಲಿ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ಎ. ಮಂಜು, ಎಲ್ಲರೊಂದಿಗೆ ಚರ್ಚಿಸಿದರು. ತಮ್ಮ ಮುಂದಿನ ನಿರ್ಧಾರ ಹಾಗೂ ಪಕ್ಷ ಸಂಘಟನೆ, ಪ್ರಚಾರ ಸೇರಿದಂತೆ ರಾಜಕೀಯ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ ಎಲ್ಲರ ಸಮ್ಮುಖದಲ್ಲಿ ತಾವು ಜೆಡಿಎಸ್‌ನಿಂದ ಸ್ಪರ್ಧಿಸುವುದಾಗಿ ಘೋಷಿಸಿದರು.
ಇದನ್ನೂ ಓದಿ: Bengaluru Developement: ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ಕಾರ್ಯಕರ್ತರಿಂದ ಆಣೆ ಪ್ರಮಾಣ
ಇದೇ ವೇಳೆ ರಾಜಕೀಯ ನಾಯಕರಿಂದ ಆಣೆ ಪ್ರಮಾಣ ಪ್ರಕ್ರಿಯೆಯು ಹೆಚ್ಚಾಗ ತೊಡಗಿದೆ. ಜತೆಗಿದ್ದರೂ ಎದುರು ಪಾರ್ಟಿಯವರಿಗೆ ಮತ ಹಾಕುವ, ಇಲ್ಲವೇ ಬೆಂಬಲ ನೀಡುವ ಪ್ರವೃತ್ತಿಯೂ ಹೆಚ್ಚುತ್ತಿರುವುದರಿಂದ ತಮ್ಮ ಬೆಂಬಲಿಗರನ್ನು ಆಣೆ ಪ್ರಮಾಣದ ಮೂಲಕ ಕಟ್ಟಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಇದರ ಭಾಗವಾಗಿ ಎ. ಮಂಜು ಸಹ ತಮ್ಮ ಜತೆಗಾರರಿಗೆ ಸಭೆ ಬಳಿಕ ಆಣೆ ಪ್ರಮಾಣ ಮಾಡಿಸಿದ್ದಾರೆ.
ಇಂದಿನಿಂದ ನಾವು ಎಲ್ಲರೂ ಜೆಡಿಎಸ್ ಪರವಾಗಿ ಪಕ್ಷಕ್ಕೆ ಸೇರಿ ಎ. ಮಂಜು ಅವರನ್ನು ಗೆಲ್ಲಿಸುತ್ತೇವೆ. ಈ ಜವಾಬ್ದಾರಿ ನಮ್ಮದು. ಊರುಗಳಲ್ಲಿ ನಾವೆಲ್ಲರೂ ಕೂಡ ಜೆಡಿಎಸ್ ಪರ ಪ್ರಚಾರ ಮಾಡುತ್ತೇವೆ. ನಾವು ಮಂಜಣ್ಣನನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಇನ್ನು ಮುಂದೆ ನಾವೆಲ್ಲರೂ ಜೆಡಿಎಸ್‌ಗಾಗಿ ಕೆಲಸ ಮಾಡುತ್ತೇವೆ ಎಂದು ನೂರಾರು ಮಂದಿ ಪ್ರಮಾಣ ಮಾಡಿದ್ದಾರೆ.
ಇದನ್ನೂ ಓದಿ: Viral News: ಸ್ಸಾರಿ ಹುಡ್ಗೀರೇ… ನನ್ನ ಹೆಂಡ್ತಿ ಬಹಳಾ ಸ್ಟ್ರಿಕ್ಟು! ವೈರಲ್ ಆಯ್ತು ಆಟೋ ರಿಕ್ಷಾ ಹಿಂಬದಿ ಸಾಲು!
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎ. ಮಂಜುವಿಗೆ ಜೈಕಾರ ಕೂಗಿದ ಕಾರ್ಯಕರ್ತರು, ಈ ಬಾರಿ ಗೆಲುವು ಮಂಜು ಅವರದ್ದೇ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಎ. ಮಂಜುಗೆ ಟಿಕೆಟ್ ಕೊಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದರು.