ದಾವಣಗೆರೆ: ಕರ್ನಾಟಕದ ಇಂದಿರಾ ಗಾಂಧಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ (90) (Nagamma Keshavamurthy) ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ಸಂಜೆ ನಗರದ ಪಿ.ಜೆ.ಬಡಾವಣೆಯಲ್ಲಿಯ ನಿವಾಸದಲ್ಲಿ ನಿಧನರಾದರು. ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ನಾಗಮ್ಮ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ ಹಾಗೂ ವಿಧಾನಸಭೆ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದ
ಅವರು, 1 ರಿಂದ 4 ನೇ ತರಗತಿವರೆಗೂ ಕನ್ನಡ ಮಾಧ್ಯಮ ಕಡ್ಡಾಯ ಮಾಡಿದ್ದರು. ಪ್ರಾಥಮಿಕ
ಶಾಲಾ ಹಂತದಲ್ಲಿ ಬಾಲಕಿಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಲು ಕ್ರಮವಹಿಸಿದ್ದರು. ರಾಜ್ಯಮಟ್ಟದ, ವಲಯ ಮಟ್ಟದ ಹತ್ತಾರು ಬೊಧಕ ಮಂಡಳಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ | Nikhil Kumaraswamy: ಎಚ್‌ಡಿಕೆ ಆರೋಗ್ಯ ನೆನೆದು ಮಂಡ್ಯ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾವುಕ