Site icon Vistara News

Siddaramaiah CM | ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಬೇಕು, ವರಿಷ್ಠರು ಸಿಎಂ ಮಾಡ್ಲೇಬೇಕು: ರಮೇಶ್‌ ಕುಮಾರ್‌ ವಾದ

Karnataka Election news Siddaramaiah should be next CM says Former Speaker Ramesh Kumar

ಕೋಲಾರ: ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಕಾಂಗ್ರೆಸ್‌ನೊಳಗಿನ ವಾದಕ್ಕೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಧ್ವನಿಗೂಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡುವ ಬುದ್ಧಿ ಬರಲಿ ಎಂದು ಕೋಲಾರದಲ್ಲಿ ಮಾತನಾಡಿದ ರಮೇಶ್‌ ಕುಮಾರ್‌ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಪರ ಒತ್ತಡ ಹೆಚ್ಚುವಂತೆ ಮಾಡಿದೆ. ಕೋಲಾರದ ವಕ್ಕಲೇರಿ ಗ್ರಾಮದ ಕಾಂಗ್ರೆಸ್ ಸಭೆಯಲ್ಲಿ ರಮೇಶ್ ಕುಮಾರ್ ಈ ಹೇಳಿಕೆ ನೀಡಿದರು.

ʻʻಮುಂದಿನ ಚುನಾವಣೆಯಲ್ಲಿ ಗೆಲ್ಲುವ ಶಾಸಕರಿಗೆ, ಪಕ್ಷದ ಅಧ್ಯಕ್ಷ್ಯರಿಗೆ, ಹೈಕಮಾಂಡ್‌ಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ.. ಹೀಗಂತ ಕಾಡುಮಲ್ಲೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡೋಣʼʼ ಎಂದು ರಮೇಶ್‌ ಕುಮಾರ್‌ ಹೇಳಿದರು.

ʻʻರಾಜ್ಯದಲ್ಲಿ ಸಿದ್ದರಾಮಯ್ಯ ಪರವಾಗಿ ದೊಡ್ಡ ಅಲೆಯಿದೆ. ಈ ಹಿಂದೆ ಜನರು ಇಂದಿರಾ ಗಾಂಧಿ ಪರವಾಗಿ ಈ ಮಟ್ಟದ ಬೆಂಬಲ ಸೂಚಿಸಿದ್ದರು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಜನಪ್ರಿಯ ಯೋಜನೆಗಳನ್ನು ನೀಡಿದ್ದರುʼʼ ಎಂದು ನೆನಪಿಸಿದರು.

ʻʻಸಿದ್ದರಾಮಯ್ಯರನ್ನು ಯಾರೂ ಏನೂ ಮಾಡೋಕೆ ಆಗಲ್ಲ. ಕೋಲಾರದಿಂದ ಅವರು ಚುನಾವಣೆಗೆ ನಿಂತರೆ ಯಾರಿಂದಲೂ ಸೋಲಿಸೋಕೆ ಆಗಲ್ಲʼʼ ಎಂದು ಸವಾಲು ಹಾಕಿದರು ರಮೇಶ್‌ ಕುಮಾರ್‌.

ʻʻಬಿಜೆಪಿಯವರಿಗೆ ಸಿದ್ದರಾಮಯ್ಯ ಅವರನ್ನು ಕಂಡರೆ ಆಗಲ್ಲ. ಯಾಕೆಂದರೆ ಸಿದ್ದರಾಮಯ್ಯ ಮಾಸ್‌ ಲೀಡರ್‌. ಅವರನ್ನು ಕೋಲಾರದಿಂದಲೇ ಕಣಕ್ಕಿಳಿಸಲು ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಬೇಕು. ಜನರ ನಾಯಕನಾಗಿರುವ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಬೇಕುʼʼ ಎಂದು ಅವರು ಹಕ್ಕು ಮಂಡಿಸಿದರು.

ಸಭೆಯಲ್ಲಿ ಮಾತನಾಡುತ್ತಿರುವ ರಮೇಶ್‌ ಕುಮಾರ್‌

ಈಗಾಗಲೇ ತುಮಕೂರಿನ ರಾಜಣ್ಣ, ಶಿವರಾಜ ತಂಗಡಗಿ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಆಗಲೇ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ | ಸಿದ್ದರಾಮಯ್ಯ ಸಿಎಂ ಧ್ವನಿ ಎತ್ತಿದ ರಾಜಣ್ಣ: ಹೈಕಮಾಂಡ್‌ ಜನಾಶಯ ಒಪ್ಪುತ್ತದೆ ಎನ್ನುತ್ತಾ ಪರೋಕ್ಷ ಉಲ್ಲೇಖ

Exit mobile version