Site icon Vistara News

ಬಸವಣ್ಣನ ಅನುಯಾಯಿ ಎಂದು ಕಲಬುರ್ಗಿ ಹತ್ಯೆ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್

ಕೆ.ಆರ್. ರಮೇಶ್ ಕುಮಾರ್

ವಿಜಯಪುರ: ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಏಕಾಯಿತು? ವಚನಗಳನ್ನೇ ಪ್ರತಿಪಾದಿಸುತ್ತಿದ್ದ ಅವರ ಕೊಲೆ ನಡೆಯಿತು. ಎಂ.ಎಂ. ಕಲಬುರ್ಗಿಯವರನ್ನು ಮುಸ್ಲಿಂ ಅಥವಾ ಕ್ರೈಸ್ತರು ಎಂದು ಕೊಲ್ಲಲಿಲ್ಲ, ಬಸವಣ್ಣನವರ ಅನುಯಾಯಿ ಎಂದು ಕೊಂದಿದ್ದಾರೆ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ಹೇಳಿದರು.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಚಿಂತನ ಸಾಂಸ್ಕೃತಿಕ ಬಳಗದಿಂದ ಬಿ.ಎಲ್.ಡಿ.ಇ ಸಂಸ್ಥೆ ಕಟ್ಟಿ ಬೆಳೆಸಿದ ಡಾ.ಫ.ಗು.ಹಳಕಟ್ಟಿ, ಬಂಥನಾಳ ಶಿವಯೋಗಿಗಳ, ಮಹಾದಾನಿ ಬಂಗಾರಮ್ಮ ಸಜ್ಜನ, ಶಿಕ್ಷಣ ಪ್ರೇಮಿ ದಿ.ಬಿ.ಎಂ.ಪಾಟೀಲರವರ ಸ್ಮರಣಾರ್ಥ ಬುಧವಾರ ಆಯೋಜಿಸಿದ್ದ ʼವರ್ತಮಾನದ ಬದುಕು’ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ | ಕೇರಳದ ಈ ದೇವಾಲಯದಲ್ಲಿ ಸಂವಿಧಾನವೇ ದೇವರು!

ಧರ್ಮಾಧಾರಿತ ವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಳ್ಳುವಾಗ ನಮ್ಮಲ್ಲಿ ಬಸವಣ್ಣ ಜನಿಸಿದರು. ಲಿಂಗ, ಜಾತಿ, ದುಡಿಮೆಗೆ ಬೆಲೆ ಇಲ್ಲದ ಕಾಲಘಟ್ಟದಲ್ಲಿ ಸಿಟ್ಟಿಗೆದ್ದು ಸರಿ ಇಲ್ಲದ್ದನ್ನು ಖಂಡಿಸಿದರು. ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಏಕಾಯಿತು? ವಚನಗಳನ್ನೇ ಪ್ರತಿಪಾದಿಸುತ್ತಿದ್ದ ಅವರ ಕೊಲೆ ನಡೆಯಿತು. ಆದರೆ, ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಅವರ ವಿಚಾರಗಳನ್ನು ಜೀವಂತವಾಗಿರಿಸಿದೆ. ಮನುಸ್ಮೃತಿಯ ವಿಚಾರಧಾರೆಯನ್ನು ಸಂವಿಧಾನದ ಮೂಲಕ ಕಿತ್ತುಕೊಳ್ಳಲಾಗಿದೆ. ಹೀಗಾಗಿ ಮನುಸ್ಮೃತಿಯ ಮರು ಸ್ಥಾಪನೆಗಾಗಿ ಒಂದು ಗುಂಪು ಸಕ್ರಿಯವಾಗಿದೆ ಎಂದರು.

ಸಂವಿಧಾನವನ್ನು ವಿಧಿ ಇಲ್ಲದೇ ಒಪ್ಪಿರುವವವರು ಮತ್ತೆ ಜನರಲ್ಲಿ ಮೌಢ್ಯ ಹಾಗೂ ಮನುಸಂಸ್ಕೃತಿಯನ್ನು ಬಿತ್ತುವ ಮೂಲಕ ಹಳೆಯ ವ್ಯವಸ್ಥೆಯನ್ನು ಮರುಸ್ಥಾಪಿಸುತ್ತಿದ್ದಾರೆ. ಈ ಕಾರ್ಯಕ್ಕೆ ನಾವು ಸಹ ಪ್ರಜ್ಞಾಪೂರ್ವಕವಾಗಿ ಮುಂದೆ ಹೋಗುತ್ತಿದ್ದೇವೆಯೋ ಅಥವಾ ಅನಿವಾರ್ಯವಾಗಿ ಸಿಲುಕಿ ಹಾಕಿಕೊಂಡಿದ್ದೇವೆಯೋ ಎಂಬುದು ಗೊತ್ತಾಗುತ್ತಿಲ್ಲ. ಇದು ವರ್ತಮಾನದ ವಿಪರ್ಯಾಸ ಎಂದು ರಮೇಶ್ ಕುಮಾರ್ ವಿಷಾದಿಸಿದರು.

ಇದನ್ನೂ ಓದಿ | ಸಂವಿಧಾನ ಧ್ವಂಸವೇ ಸಂಘದ ಉದ್ದೇಶ: ʼಆರ್‌ಎಸ್‌ಎಸ್‌ ಆಳ ಮತ್ತು ಅಗಲʼ ಕೃತಿಯಲ್ಲಿ ದೇವನೂರು ಮಹಾದೇವ

Exit mobile version