Site icon Vistara News

Found Dead | ಮೇಕೆ ಮೇಯಿಸಲು ತೆರಳಿದಾಗ ಕಾಲು ಜಾರಿ ಬಾವಿಗೆ ಬಿದ್ದ ಮಹಿಳೆ; ನೇಣು ಬಿಗಿದುಕೊಂಡು ಅಪರಿಚಿತ ವೃದ್ಧ ಸಾವು

ನೆಲಮಂಗಲ/ರಾಮನಗರ: ಇಲ್ಲಿನ ಬೆಂಗಳೂರು ಉತ್ತರ ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಮಹಿಳೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ (Found Dead) ಘಟನೆ ನಡೆದಿದೆ. ವೆಂಕಟಲಕ್ಷ್ಮಮ್ಮ (55) ಮೃತ ದುರ್ದೈವಿ.

ವೆಂಕಲಕ್ಷ್ಮಮ್ಮ ಎಂದಿನಂತೆ ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸಲು ತೆರಳಿದ್ದರು. ಈ ವೇಳೆ ತೆರದ ಹಳೇ ಬಾವಿ ಕಾಣದೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಹಳೇ ಬಸ್‌ ನಿಲ್ದಾಣ ಬಳಿ ನೇಣು ಬಿಗಿದುಕೊಂಡ ವೃದ್ಧ
ರಾಮನಗರದ ಹಳೇ ಬಸ್ ನಿಲ್ದಾಣ ಬಳಿ ನೇಣು ಬಿಗಿದುಕೊಂಡು ಅಪರಿಚಿತ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರಸಭೆ ವಾಣಿಜ್ಯ ಸಂಕೀರ್ಣ ಬಳಿಯ ಮೆಟ್ಟಿಲಿನ ಕಂಬಿಗೆ ನೇಣು ಹಾಕಿಕೊಂಡಿದ್ದಾರೆ. ಸ್ಥಳಕ್ಕೆ ರಾಮನಗರ ಪುರ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Hassan Blast | ಮಿಕ್ಸಿ ಬ್ಲಾಸ್ಟ್‌ ಪ್ರಕರಣ; ಮಹಿಳೆ ಸೇರಿ ಇಬ್ಬರ ತೀವ್ರ ವಿಚಾರಣೆ

Exit mobile version