Site icon Vistara News

Missing Case: ತುಮಕೂರಲ್ಲಿ ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ; ಆತಂಕದಲ್ಲಿ ಪೋಷಕರು

Four children missing in tumkur Missing Case

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ (Missing Case) ಆಗಿದ್ದು, ಪೋಷಕರು ತೀವ್ರ ಆತಂಕದಲ್ಲಿದ್ದಾರೆ.

ಗ್ರಾಮದ ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ನಾಪತ್ತೆಯಾದ ಮಕ್ಕಳು ಎಂದು ಹೇಳಲಾಗಿದೆ. ಶನಿವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿಲ್ಲ. ಎಲ್ಲ ಕಡೆ ಹುಡುಕಿದರೂ ಸಿಗದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿಗೆ ಫಿಜಿ, ಪಪುವಾ ನ್ಯೂಗಿನಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಪ್ರದಾನ

ಪೋಷಕರಿಂದ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೋಷಕರೂ ಸಹ ಎಲ್ಲ ಕಡೆ ಹುಡುಕಾಟವನ್ನು ನಡೆಸಿದ್ದಾರೆ. ಇವರೆಲ್ಲರೂ ಸರಿಸುಮಾರು 15-16 ವರ್ಷ ವಯಸ್ಸಿನವರು ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ, ಈ ಮಕ್ಕಳು ಏಕೆ ಮನೆ ಬಿಟ್ಟು ಹೋದರು? ಯಾರಾದರೂ ಅಪಹರಣ ಮಾಡಿದ್ದಾರಾ? ಇಲ್ಲವೇ ಇವರೇ ಎಲ್ಲಿಯಾದರೂ ಹೇಳದೇ, ಕೇಳದೇ ಹೋಗಿದ್ದಾರಾ ಎಂಬುದು ತಿಳಿಯುತ್ತಿಲ್ಲ. ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದು, ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಎಲ್ಲ ಕಡೆ ಶೋಧ

ಎಲ್ಲ ಮಕ್ಕಳ ಫೋಟೋಗಳನ್ನು ರಾಜ್ಯದ ಎಲ್ಲ ಕಡೆ ಪೊಲೀಸ್‌ ಠಾಣೆಗಳಿಗೂ ಕಳುಹಿಸಲಾಗಿದ್ದು, ಮಕ್ಕಳ ಪತ್ತೆಗೆ ಮುಂದಾಗಲಾಗಿದೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಸೇರಿದಂತೆ ನಾಗರಿಕರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೆಲಮಂಗಲದಲ್ಲಿ ಟರ್ಪೆಂಟೈನ್ ಆಯಿಲ್ ಕುಡಿದು 2 ವರ್ಷದ ಮಗು ಸಾವು‌

ಬೆಂಗಳೂರು: ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಉತ್ತಾಸಿಪಾಳ್ಯದಲ್ಲಿ ಭಾನುವಾರ ಟರ್ಪೆಂಟೈನ್ ಆಯಿಲ್ (Turpentine Oil) ಕುಡಿದು ಮಗುವೊಂದು ಮೃತಪಟ್ಟಿದೆ. ಅಂಜು ಫಾತೀಮಾ (2) ಮೃತ ದುರ್ದೈವಿ. ಮನೆಯಲ್ಲಿದ್ದ ಕುರಿಗೆ ಬಣ್ಣ ಬಳಿಯಲು ಟರ್ಪೆಂಟೈನ್ ಆಯಿಲ್ ಅನ್ನು ತಂದಿಡಲಾಗಿತ್ತು. ಈ ವೇಳೆ ಅಂಜು ಆಟ ಆಡುವಾಡುತ್ತಾ ಕೈಗೆ ಸಿಕ್ಕಿದ ಟರ್ಪೆಂಟೈನ್ ಆಯಿಲ್ ಬಾಟೆಲ್‌ ತೆರೆದು ಕುಡಿದು ಬಿಟ್ಟಿದೆ.

ಇದನ್ನೂ ಓದಿ: Murugha Seer: ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ರದ್ದು ಮಾಡಿದ ಹೈಕೋರ್ಟ್‌; ಸರ್ಕಾರಕ್ಕೆ ಚಾಟಿ

ಕೂಡಲೇ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version