ಹಾಸನ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಿಂದ ನಾಪತ್ತೆಯಾಗಿದ್ದ (Missing Case) ಒಂದೇ ಗ್ರಾಮದ ನಾಲ್ವರು ಮಕ್ಕಳು ಹಾಸನ ನಗರದ ಹೊಸ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.
ತುಮಕೂರಿನಿಂದ ಶನಿವಾರವೇ (ಮೇ 20) ಬೆಂಗಳೂರಿಗೆ ಬಂದಿದ್ದ ಈ ಮಕ್ಕಳು ಅಲ್ಲೆಲ್ಲ ಸುತ್ತಾಡಿ ಬಳಿಕ ಹಾಸನದ ಬಸ್ ಹತ್ತಿ ಬಂದಿಳಿದಿದ್ದರು. ಹಾಸನ ನಗರದಲ್ಲಿ ಸುತ್ತಾಡಿ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದ್ದರಿಂದ ಸ್ಥಳೀಯರು ವಿಚಾರಿಸಿದ್ದಾರೆ. ಆಗ ಮಕ್ಕಳ ಬಗ್ಗೆ ಗೊತ್ತಾಗಿದೆ.
ಇದನ್ನೂ ಓದಿ: ಸಹೋದರನಿಂದಲೇ ಗರ್ಭ ಧರಿಸಿದ ಬಾಲಕಿಯ ಗರ್ಭಪಾತಕ್ಕೆ ಕೋರ್ಟ್ ಅನುಮತಿ; ಪರಿಗಣಿಸಿದ ಅಂಶವೇನು?
ಚಿಕ್ಕಬಾಣಗೆರೆ ಗ್ರಾಮದಿಂದ ನಾಪತ್ತೆಯಾಗಿದ್ದ ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ಈಗ ಪತ್ತೆಯಾಗಿದ್ದಾರೆ. ಶನಿವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರಿಲ್ಲ. ಎಲ್ಲ ಕಡೆ ಹುಡುಕಿದರೂ ಸಿಗದ ಕಾರಣ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಎಲ್ಲ ಕಡೆ ಶೋಧ
ಎಲ್ಲ ಮಕ್ಕಳ ಫೋಟೋಗಳನ್ನು ರಾಜ್ಯದ ಎಲ್ಲ ಕಡೆ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿತ್ತು. ಈ ಮೂಲಕ ಮಕ್ಕಳ ಪತ್ತೆಗೆ ಮುಂದಾಗಲಾಗಿತ್ತು. ಅಲ್ಲದೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಸೇರಿದಂತೆ ನಾಗರಿಕರ ಬಳಿಯೂ ತುಮಕೂರು ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಇದೀಗ ಹಾಸನದಲ್ಲಿ ಮಕ್ಕಳು ಪತ್ತೆಯಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಮನೆ ಬಿಟ್ಟು ಬರಲು ತಿಳಿಯದ ಕಾರಣ
ಇವರು ಮನೆಯನ್ನು ಏಕೆ ಬಿಟ್ಟು ಬಂದರು ಎಂಬ ವಿಚಾರ ಇನ್ನೂ ತಿಳಿದುಬಂದಿಲ್ಲ. ಇವರನ್ನು ಪೋಷಕರ ಮಡಿಲಿಗೆ ಸೇರಿಸುವ ಸಂಬಂಧ ಹಾಸನ ಪೊಲೀಸರು ಕ್ರಮವಹಿಸಿದ್ದಾರೆ.
ನೆಲಮಂಗಲದಲ್ಲಿ ಟರ್ಪೆಂಟೈನ್ ಆಯಿಲ್ ಕುಡಿದು 2 ವರ್ಷದ ಮಗು ಸಾವು
ಬೆಂಗಳೂರು: ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಉತ್ತಾಸಿಪಾಳ್ಯದಲ್ಲಿ ಭಾನುವಾರ ಟರ್ಪೆಂಟೈನ್ ಆಯಿಲ್ (Turpentine Oil) ಕುಡಿದು ಮಗುವೊಂದು ಮೃತಪಟ್ಟಿದೆ. ಅಂಜು ಫಾತೀಮಾ (2) ಮೃತ ದುರ್ದೈವಿ. ಮನೆಯಲ್ಲಿದ್ದ ಕುರಿಗೆ ಬಣ್ಣ ಬಳಿಯಲು ಟರ್ಪೆಂಟೈನ್ ಆಯಿಲ್ ಅನ್ನು ತಂದಿಡಲಾಗಿತ್ತು. ಈ ವೇಳೆ ಅಂಜು ಆಟ ಆಡುವಾಡುತ್ತಾ ಕೈಗೆ ಸಿಕ್ಕಿದ ಟರ್ಪೆಂಟೈನ್ ಆಯಿಲ್ ಬಾಟೆಲ್ ತೆರೆದು ಕುಡಿದು ಬಿಟ್ಟಿದೆ.
ಇದನ್ನೂ ಓದಿ: Sharath Babu : ʼಅಮೃತವರ್ಷಿಣಿʼಯಿಂದ ಕನ್ನಡಿಗರ ಮನ ಗೆದ್ದಿದ್ದ ಶರತ್ ಬಾಬು; ಬಹುಭಾಷಾ ನಟನ ನಿಧನಕ್ಕೆ ಕಂಬನಿ
ಕೂಡಲೇ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.