ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಿಂಸೆಯ ಬೋವಿ ಕಾಲನಿನಲ್ಲಿ ಅಕ್ರಮವಾಗಿ ನೆಲೆಸಿರುವ ನಾಲ್ವರು ಬಾಂಗ್ಲಾ ವಲಸಿಗರು (Illegal Bangla Immigrants) ಪತ್ತೆಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಸೂಕ್ತ ಪರಿಶೀಲನೆ, ತನಿಖೆ ಮೂಲಕ ಪ್ರಕರಣವನ್ನು ದಾಖಲಿಸಿದ್ದಾರೆ.
3 ವರ್ಷಗಳಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್, ರಹುಲ್, ಮೋಮಿನ್ ಅಲಿ, ಸಲೀಂ ಎಂಬುವವರು ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ನಿವಾಸಿಗಳಾಗಿದ್ದಾರೆ. ಇವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಬಾಂಗ್ಲಾದೇಶದ ಪ್ರಜೆಗಳು ಎನ್ನುವುದು ಖಚಿತವಾಗಿದೆ.
ಪಶ್ಚಿಮ ಬಂಗಾಳದ ಮೂಲಕ ಕೂಲಿಗಾಗಿ ಭಾರತಕ್ಕೆ ಇವರು ಆಗಮಿಸಿದ್ದರು. ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳಿರುವ ಮಾತುಗಳು ಕೇಳಿಬಂದಿದ್ದರಿಂದ ಖಚಿತ ಮಾಹಿತಿಯ ಆಧಾರದ ಮೇಲೆ ಎನ್.ಆರ್.ಪುರ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ | ಚಿಕ್ಕಮಗಳೂರಿನಲ್ಲಿ ಮಗನ ಪಬ್‌ಜೀ ಹುಚ್ಚಾಟ ತಡೆದ ತಾಯಿ ಗುಂಡೇಟಿಗೆ ಬಲಿ