Site icon Vistara News

Foxconn issue : ಫಾಕ್ಸ್‌ ಕಾನ್‌ ಒಪ್ಪಂದ ಸುಳ್ಳು ಎಂದ ದಿನೇಶ್‌ ಗುಂಡೂ ರಾವ್‌, ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಆಕ್ರೋಶ

Foxconn Congress

#image_title

ಬೆಂಗಳೂರು: ಫಾಕ್ಸ್‌ ಕಾನ್‌ ಕಂಪನಿಯು (Foxconn issue) ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ ಎಂಬ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬೋಗಸ್‌ ಎಂದು ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಅವರು ಸರಣಿ ಟ್ವೀಟ್‌ ಮಾಡುವ ಮೂಲಕ ಒಪ್ಪಂದದ ವಿಚಾರವನ್ನು ಪ್ರಶ್ನಿಸಿದ್ದಾರೆ.

ಐಫೋನ್‌ ಉತ್ಪಾದಿಸುವ ಪ್ರಮುಖ ಗುತ್ತಿಗೆದಾರ ಫಾಕ್ಸ್‌ಕಾನ್‌, ಬೆಂಗಳೂರಿನಲ್ಲಿ ತನ್ನ ಮುಂಬರುವ ಪ್ರಾಜೆಕ್ಟ್‌ ಎಲಿಫೆಂಟ್‌ (Project Elephant) ಹೂಡಿಕೆ ಯೋಜನೆಯನ್ನು ಜಾರಿಗೊಳಿಸುವುದಾಗಿ ಫಾಕ್ಸ್‌ಕಾನ್‌ ಕಂಪನಿ ಒಪ್ಪಂದ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರವೊಂದನ್ನು ಬಿಡುಗಡೆ ಮಾಡಿದ್ದರು. ಈ ನಡುವೆ, ಕಂಪನಿಯು ಐಫೋನ್‌ ತಯಾರಿಕಾ ಘಟಕವನ್ನು ತೆಲಂಗಾಣದಲ್ಲಿ ಆರಂಭಿಸುವುದಾಗಿ ಘೋಷಿಸಿತ್ತು. ಹೀಗಾಗಿ ಬೆಂಗಳೂರಿನ ಘಟಕದ ಕಥೆ ಏನು ಎನ್ನುವ ಚರ್ಚೆ ಆರಂಭಗೊಂಡಿತ್ತು. ಆಗ ಅದೇ ಬೇರೆ ಇದೇ ಬೇರೆ ಎಂದು ಹೇಳಲಾಗಿತ್ತು.

ಆದರೆ, ಕಾಂಗ್ರೆಸ್‌ ಮಾತ್ರ ಇನ್ನೂ ಕೂಡಾ ಈ ಒಪ್ಪಂದವೇ ಬೊಗಳೆ ಎಂದು ಹೇಳುತ್ತಿದೆ. ಸಿಎಂ ಬೊಮ್ಮಾಯಿ‌ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್ ಅವರು. ಫಾಕ್ಸ್‌ಕಾನ್ ಜೊತೆ ಸುಳ್ಳು ಒಪ್ಪಂದದ ಘೋಷಣೆ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಅವರ ಮರ್ಯಾದೆ ಹರಾಜು ಹಾಕಿಕೊಂಡಿದ್ದಾರೆ ಎಂದಿದ್ದಾರೆ.

ಇದು ಒಪ್ಪಂದ ಪತ್ರವಲ್ಲ, ಲೆಟರ್‌ ಆಫ್‌ ಇಂಟೆಂಟ್‌

ʻʻʻಈಗ ಆ ಸಂಸ್ಥೆ ಜೊತೆಗಿನ ‘ಲೆಟರ್ ಆಫ್ ಇಂಟೆಂಟ್’ ಬಿಡುಗಡೆ ಮಾಡಿ ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಲೆಟರ್ ಆಫ್ ಇಂಟೆಂಟ್ ಎಂದರೆ ಹೂಡಿಕೆಗೆ ಆಸಕ್ತಿ ವಹಿಸಿದ ಉದ್ದೇಶಿತ ಪತ್ರವೇ ಹೊರತು ಅದು ಒಪ್ಪಂದವಲ್ಲ. ಯಾಕೇ ಈ ಸರ್ಕಸ್ ಬೊಮ್ಮಾಯಿಯವರೆ.?ʼʼ ಎಂದು ಟ್ವೀಟ್‌ ಮೂಲಕ ಪ್ರಶ್ನೆ ಮಾಡಿದ್ದಾರೆ ದಿನೇಶ್‌ ಗುಂಡೂರಾವ್‌.

ʻʻಫಾಕ್ಸ್‌ಕಾನ್ ಹಾಗೂ ರಾಜ್ಯ ಸರ್ಕಾರದ ಮಧ್ಯೆ ನಡೆದಿರುವುದು ಕೇವಲ ಲೆಟರ್ ಆಫ್ ಇಂಟೆಂಟ್ ಮಾತ್ರ. ಬೊಮ್ಮಾಯಿಯವರಿಗೆ ಲೆಟರ್ ಆಫ್ ಇಂಟೆಂಟ್‌ಗೂ ಒಪ್ಪಂದಕ್ಕೂ ವ್ಯತ್ಯಾಸ ಗೊತ್ತಿಲ್ಲವೇ.? ಬೊಮ್ಮಾಯಿಯವರು ಯಾರನ್ನು ಮೂರ್ಖರನ್ನಾಗಿ ಮಾಡಲು ಫಾಕ್ಸ್‌ಕಾನ್ ಜೊತೆ 5740 ಕೋಟಿ ಹೂಡಿಕೆಯ ಒಪ್ಪಂದವಾಗಿದೆ ಎಂದು ಡಂಗುರ ಸಾರಿಸಿದರು.?ʼʼ ಎಂದು ಪ್ರಶ್ನಿಸಲಾಗಿದೆ.

ʻʻಬೊಮ್ಮಾಯಿಯವರೇ ಸುಳ್ಳು ಹೇಳುವುದು ಒಂದು ಕಲೆ. ಸುಳ್ಳು ಹೇಳುವ ಮುನ್ನ ನೀವು ‘ಸುಳ್ಳಿನ ವಿಶ್ವಗುರು’ ಮೋದಿಯವರಿಂದ ಸುಳ್ಳು ಹೇಳುವುದು ಹೇಗೆ ಎಂಬ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ಪಡೆಯಿರಿ. ಇಲ್ಲದೆ ಹೋದರೆ ಫಾಕ್ಸ್‌ಕಾನ್ ವಿಚಾರದಲ್ಲಿ ಸುಳ್ಳು ಹೇಳಿ ನಡುಬೀದಿಯಲ್ಲಿ ಬೆತ್ತಲಾದಂತೆ‌ ಪದೇಪದೆ ಬೆತ್ತಲಾಗುವ ಪ್ರಸಂಗ ನಿಮಗೆದುರಾಗಬಹುದು.ʼʼ ಎಂದು ಸಿಎಂ ಬೊಮ್ಮಾಯಿ ಅವರನ್ನು ಕೆಣಕಿದ್ದಾರೆ ದಿನೇಶ್‌ ಗುಂಡೂರಾವ್‌.

ಇದನ್ನೂ ಓದಿ : Lokayukta Raid : ಬೆಂಗಳೂರು, ದಾವಣಗೆರೆಯ ಬೀದಿಗಳಲ್ಲಿ ಮಾಡಾಳ್‌ ನಾಪತ್ತೆ ಪೋಸ್ಟರ್‌, ಹುಡುಕಿಕೊಡಲು ಮನವಿ!

Exit mobile version