ಬೆಂಗಳೂರು: ಕಂಪ್ಯೂಟರ್ ಪೂರೈಕೆಯಲ್ಲಿ ಖಾಸಗಿ ಸಂಸ್ಥೆಯೊಂದು ಕಾರಾಗೃಹ ಇಲಾಖೆಗೆ ಗೋಲ್ ಮಾಲ್ (Fraud Case) ಮಾಡಿದೆ. ಈ ಸಂಬಂಧ ಕಾರಾಗೃಹ ಅಧೀಕ್ಷಕರು ಠಾಣಾ ಮೆಟ್ಟಿಲೇರಿದ್ದು, ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಜ್ಯದ ಹಲವು ಕಾರಾಗ್ರಹದಲ್ಲಿ ವಿವಿಧ ಉಪಕರಣಗಳ ಅವಶ್ಯಕತೆ ಇದ್ದ ಕಾರಣಕ್ಕೆ ಜೆಮ್ ಪೋರ್ಟಲ್ (Gem Portal) ನಲ್ಲಿ ಖರೀದಿಸಲು ಟೆಂಡರ್ ಕರೆಯಲಾಗಿತ್ತು. ಈ ವೇಳೆ ವಾಗ್ಮಿನಾ ಕಂಪೆನಿ (Vagmina Enterprises) ಎಂಬ ಕಂಪೆನಿಯು ಕಂಪ್ಯೂಟರ್ ಉಪಕರಣಗಳಿಗೆ ಕಡಿಮೆ ದರ ನೀಡುವ ಮೂಲಕ ಆಯ್ಕೆಗೊಂಡಿತ್ತು.
37 ಕಾರಾಗೃಹಕ್ಕೆ 125 ಕಂಪ್ಯೂಟರ್ ಪೂರೈಕೆ ಮಾಡುವ ಸಲುವಾಗಿ ವಾಗ್ಮಿನಾ ಕಂಪನಿಗೆ ಸುಮಾರು 92,81,250 ರೂ. ನಷ್ಟು ಹಣವನ್ನು ಇಲಾಖೆ ಸಂದಾಯ ಮಾಡಿತ್ತು. ಸರಬರಾಜು ಮಾಡಿದ 125 ಕಂಪ್ಯೂಟರ್ ಸಂಬಂಧ ಆಡಿಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಸುಮಾರು ಎಚ್‌ಎಲ್‌ಬಿಎಸ್ ಬ್ರ್ಯಾಂಡ್‌ನ 43 ಸಿಸ್ಟಂಗಳು ನಕಲಿ ಎಂಬುದು ತಿಳಿದು ಬಂದಿದೆ. ಇದರಲ್ಲಿ 7 ಕಂಪ್ಯೂಟರ್ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಕಾರಾಗೃಹ ಇಲಾಖೆಯ ಎಸ್‌ಪಿ ಪ್ರದೀಪ್ ಗುಂಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Road accident : ಸ್ಟೇರಿಂಗ್ ರಾಡ್ ತುಂಡಾಗಿ ಗದ್ದೆಗೆ ನುಗ್ಗಿದ ಕೆಎಸ್ಸಾರ್ಟಿಸಿ ಬಸ್; ಬಸ್‌ನಲ್ಲಿದವರಿಗೆ ಏನಾಯಿತು?
ಸಂಸ್ಥೆಯ ಅಕ್ರಮ ಸಂಬಂಧ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆಯನ್ನು ಕೈಕೊಂಡಿದ್ದಾರೆ. ನಕಲಿ ನವೀಕರಣಗೊಂಡ ಕಂಪ್ಯೂಟರ್‌ಗಳನ್ನು ಪೂರೈಕೆ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಪ್ರದೀಪ್ ಗುಂಟಿ ದೂರು ನೀಡಿದ್ದಾರೆ.