Site icon Vistara News

Fraud Case: ಈತ ಕೇಸಲ್ಲಿ ಶತಕವೀರ; ಕೊನೆಗೂ ಸೆರೆ ಸಿಕ್ಕ ಕೋಟಿ ಚೋರ!

CCB police arrest a man for creating fake documents and cheating

#image_title

ಬೆಂಗಳೂರು: ಕೋಟಿ ಕೋಟಿ ನುಂಗಿ ಖಾಕಿ ಕಣ್ತಪ್ಪಿಸಿ ಅಡ್ಡಾಡುತ್ತಿದ್ದ ವಂಚಕನೊಬ್ಬನನ್ನು ಸಿಸಿಬಿ ಪೊಲೀಸರು (CCB police) ಬಂಧಿಸಿದ್ದಾರೆ. ಅಶ್ವಾಕ್ ಅಹ್ಮದ್ ಎಂಬಾತ 100ಕ್ಕೂ ಹೆಚ್ಚು ಪ್ರಕರಣದಲ್ಲಿ ಬೇಕಿದ್ದ ಕುಖ್ಯಾತ ಕಳ್ಳನಾಗಿದ್ದ (Fraud Case) ಎಂದು ತಿಳಿದು ಬಂದಿದೆ.

ಈತ 2009-10ರಲ್ಲಿ ಗ್ರ್ಯಾನಿಟಿ ಪ್ರಾಪರ್ಟಿಸ್ ಎಂಬ ಸಂಸ್ಥೆ ಆರಂಭಿಸಿದ್ದ. ಈ ಸಂಸ್ಥೆ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೃಷಿ ಭೂಮಿಯನ್ನು ಕಂದಾಯ ಭೂಮಿಗಳನ್ನಾಗಿ ಮಾರ್ಪಾಡು ಮಾಡಿ ಮಾರಾಟ ಮಾಡಲು ಮುಂದಾಗಿದ್ದ. ಅಲ್ಲದೆ ಕೆಲ ನಿವೇಶನಗಳನ್ನು ಮಾಡಿ ಹಲವರ ಬಳಿ ಹಣ ಪಡೆದು ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದ.

ಹೀಗೆ ಕೋಟಿ ಕೋಟಿ ವಂಚನೆ ಮಾಡಿದ್ದ ಈ ಕ್ರಿಮಿನಲ್‌ ಮೇಲೆ ಅಶೋಕ್ ನಗರ, ಇಂದಿರಾನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಬಂಧಿಸಿದ್ದ ಸಿಸಿಬಿ ನ್ಯಾಯಾಲಯಕ್ಕೂ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು. 2016ರಲ್ಲಿ ಹಳೇ ಪ್ರಕರಣದಲ್ಲಿ ಬೇಲ್ ಪಡೆದು ಹೊರ ಬಂದಿದ್ದ ಅಶ್ವಾಕ್ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರೆಂಟ್‌ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಸ್ಪೇಷಲ್ ಟೀಂ ರೆಡಿ ಮಾಡಿಕೊಂಡ ಸಿಸಿಬಿ ಅಧಿಕಾರಿಗಳು, ತಲೆಮರೆಸಿಕೊಂಡಿದ್ದ ಅಶ್ವಾಕ್‌ನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಬೆಂಗಳೂರು ದಂಡು ರೈಲ್ವೆ ಪೊಲೀಸರ ಕಾರ್ಯಾಚರಣೆ

ರೈಲ್ವೆ ನಿಲ್ದಾಣದ ಕಳ್ಳರ ಬಂಧನ

ರೈಲ್ವೆ ನಿಲ್ದಾಣಗಳಲ್ಲಿ ಚೈನ್ ಸ್ನಾಚ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ದಂಡು ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮುಂಬೈ ಮೂಲದ ಅನ್ಸರ್ ಉಸೇನ್ ಶೇಕ್ ಬಂಧಿತ ಆರೋಪಿ ಆಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ. ಆಗಾಗ ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಈ ಆರೋಪಿ, ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: SSLC Exam 2023: ಮಾ.31ರಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು

ಇನ್ನು ಆರೋಪಿ ಉಸೇನ್ ಕೊಟ್ಟ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ಗುಡ್ಢರಾಮಧಾನಿ ಸೋನಿ ಎಂಬಾತನನ್ನು ಬಂಧಿಸಲಾಗಿದೆ. ಇಬ್ಬರು ಜತೆಯಾಗಿ ನಗರದ ರೈಲ್ವೆ ನಿಲ್ದಾಣಗಳಲ್ಲಿ ಕೈಚಳಕ ತೋರುತ್ತಿದ್ದರು. ಬಂಧಿತರಿಂದ 12 ಪ್ರಕರಣಗಳು ಪತ್ತೆ ಆಗಿದ್ದು, ಸುಮಾರು 23.4 ಲಕ್ಷ ಮೌಲ್ಯದ 536 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

Exit mobile version