ಬೆಂಗಳೂರು: ಲೊಕ್ಯಾಂಟೋ ಆ್ಯಪ್ (Locanto App) ಬಳಸುವವರನ್ನೇ ಟಾರ್ಗೆಟ್ ಮಾಡಿ ಸುಲಿಗೆ (Fraud case) ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನದೀಂ ಪಾಷ ಹಾಗೂ ನಾಗೇಶ್ ಬಂಧಿತರು.
ಈ ಖದೀಮರು ಹುಡುಗಿ ಹೆಸರಲ್ಲಿ ಲೊಕ್ಯಾಂಟೋ ಆ್ಯಪ್‌ನಲ್ಲಿ ಚೆಂದದ ಫೋಟೊ ಹಾಕಿ ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡುತ್ತಿದ್ದರು. ಬಳಿಕ ಆ ಅಕೌಂಟ್‌ನಿಂದ ತಾವೇ ಮೊದಲು ಮೆಸೇಜ್ ಮಾಡುತ್ತಿದ್ದರು. ಸಲುಗೆಯಿಂದ ಮಾತಾಡುತ್ತಾ ನಂಬಿಕೆಯನ್ನು ಗಿಟ್ಟಿಸಿಕೊಂಡು ಮರುಳು ಮಾಡುತ್ತಿದ್ದರು.
ಹುಡುಗ ಮೋಸದ ಜಾಲಕ್ಕೆ ಬಿದ್ದ ಎಂದು ತಿಳಿದರೆ ಸಾಕು ಲೊಕೇಷನ್ ಕಳಿಸಿ, ಭೇಟಿ ಮಾಡುವ ಪ್ಲ್ಯಾನ್ ಮಾಡುತ್ತಾರೆ. ಹುಡುಗಿ ಸಿಗ್ತಾಳೆ ಎಂದು ನಂಬಿ ಆ ಲೊಕೇಷನ್‌ಗೆ ಹೋದರೆ ಮುಗಿತು. ಆಟೋದಲ್ಲಿ ಇವರಿಬ್ಬರು ಪ್ರತ್ಯಕ್ಷರಾಗಿ, ಚಾಕು ತೋರಿಸಿ ಕಿಡ್ನ್ಯಾಪ್ ಮಾಡುತ್ತಿದ್ದರು.
ಇದನ್ನೂ ಓದಿ: Physical Abuse : ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ; ತೆಲಂಗಾಣ ಕಾಂಗ್ರೆಸ್ ನಾಯಕನ ವಿರುದ್ಧ ಎಫ್‌ಐಆರ್
ಹುಡುಗನ ಬಳಿ ಇರುವ ಹಣ, ಚಿನ್ನ ಸುಲಿಗೆ ಮಾಡಿ ಬಳಿಕ ಅಕೌಂಟ್‌ನಿಂದಲೂ ಹಣ ಡ್ರಾ ಮಾಡಿಸುತ್ತಿದ್ದರು. ಒಂದು ವೇಳೆ ಈತನ ಬಳಿ ಹಣ ಇಲ್ಲ ಎಂದರೆ ಸ್ನೇಹಿತರಿಗೆ ಕರೆ ಮಾಡಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು. ರಾತ್ರಿಯಿಡೀ ಬಂಧನದಲ್ಲಿ ಇಟ್ಟುಕೊಂಡು ಇರುವುದೆಲ್ಲ ದೋಚಿ ನಂತರ ಬಿಟ್ಟು ಕಳುಹಿಸುತ್ತಿದ್ದರು.
15ಕ್ಕೂ ಜನರಿಗೆ ಗಾಳ ಹಾಕಿದ್ದ ಖದೀಮರು
ಇತ್ತೀಚೆಗೆ ಎಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲೂ ವ್ಯಕ್ತಿಯೊಬ್ಬನನ್ನು ಕರೆಸಿ 60 ಸಾವಿರ ಹಣ ಸುಲಿಗೆ ಮಾಡಿದ್ದರು. ಈ ಸಂಬಂಧ ಮೋಸ ಹೋದ ವ್ಯಕ್ತಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಇಬ್ಬರನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ