ಬೆಂಗಳೂರು: ನಿಮ್ಮ ವಾಟ್ಸ್ಆ್ಯಪ್‌ಗೆ ಅಪರಿಚಿತ ನಂಬರ್‌ನಿಂದ ಕಾಲ್ ಬಂದರೆ ಎಚ್ಚರವಾಗಿರಿ. ಯಾಕೆಂದರೆ ಅದು ವಂಚಕರ (Fraud Case) ಜಾಲವಾಗಿರಬಹುದು. ವೃದ್ಧೆಯೊಬ್ಬರು ಒಂದೇ ಒಂದು ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಲಕ್ಷ ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚಂದ್ರಕಲಾ (70) ಎಂಬುವವರಿಗೆ ಜಾರ್ಜ್ ವಿಲಿಯಂ ಎಂಬಾತ ವಾಟ್ಸ್ಆ್ಯಪ್ ಕಾಲ್ ಮೂಲಕ ಪಾರ್ಸೆಲ್‌ವೊಂದನ್ನು ಕಳುಹಿಸಿರುವುದಾಗಿ ನಂಬಿಸಿದ್ದಾನೆ. ನಂತರ ಕಸ್ಟಂ ಡಿಪಾರ್ಟೆಂಟ್ ಯುವತಿಯೊಬ್ಬಳು ಕರೆ ಮಾಡಿದ್ದಾಳೆ. ನಿಮಗೆ ಬಂದಿರುವ ಪಾರ್ಸಲ್‌ಗೆ ಕ್ಲಿಯರೆನ್ಸ್ ತೆಗೆದುಕೊಳ್ಳಬೇಕಾಗಿದ್ದು, ಇದಕ್ಕಾಗಿ ಮುಂಗಡವಾಗಿ ಹಣವನ್ನು ಪಾವತಿಸಬೇಕೆಂದು ತಿಳಿಸಿದ್ದಾಳೆ.
ಇದನ್ನೂ ಓದಿ: Honnavar News | ಸೇಂಟ್ ಇಗ್ನೇಶಿಯಸ್ ಆಸ್ಪತ್ರೆ ಸಿಬ್ಬಂದಿಯಿಂದ ಅನಾಥ ವೃದ್ಧೆಯ ಶವ ಸಂಸ್ಕಾರ
ಇದಾದ ಕೆಲವೇ ಕ್ಷಣದಲ್ಲಿ ರಾಯಲ್ ಬ್ಯಾಂಕ್ ಸ್ಕಾಟ್ಲ್ಯಾಂಡ್‌ನ ಸಿಬ್ಬಂದಿ ಎಂದು ಕರೆ ಮಾಡಿದ ಅಪರಿಚಿತನೊಬ್ಬ, 1,34,71,000 ಮೌಲ್ಯದ ಪಾರ್ಸಲ್ ನಿಮಗೆ ಬಂದಿದ್ದು, ಇದನ್ನು ನೀವು ಪಡೆಯಬೇಕಾದರೆ 35,00,000 ರೂ. ಹಣವನ್ನು ಪಾವತಿಸಬೇಕೆಂದು ಹೇಳಿದ್ದಾನೆ. ತಮ್ಮದಲ್ಲದ ಪಾರ್ಸೆಲ್‌ನ ಮೌಲ್ಯ ಕೋಟಿ ರೂಪಾಯಿ ಇದೆ ಎಂದು ಆಸೆ ಪಟ್ಟ ವೃದ್ಧೆ ವಂಚಕರಿಗೆ ಹಂತ ಹಂತವಾಗಿ 35 ಲಕ್ಷ ಹಣವನ್ನು ನೀಡಿದ್ದಾರೆ. ದಿನಗಳು ಕಳೆದರೂ ಪಾರ್ಸೆಲ್ ಬಾರದೇ ಇದ್ದಾಗ ಮೋಸ ಹೋಗಿರುವುದು ತಿಳಿದು ಈ ಸಂಬಂಧ ಠಾಣಾ ಮೆಟ್ಟಿಲೇರಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ