ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಂಡಾಪುರ ಗ್ರಾಮದಲ್ಲಿ ನಿಧಿ ಆಸೆ ತೋರಿಸಿ ಮಕ್ಕಳೇ ತಂದೆ ಹಾಗೂ ಸಹೋದರನಿಗೆ ಮೋಸ (Fraud Case) ಮಾಡಿದ್ದಾರೆ. ತಿಮ್ಮರಾಯಪ್ಪ ಎಂಬುವವರು ಮಗಳು- ಅಳಿಯನಿಂದಲೇ ಮೋಸ ಹೋಗಿದ್ದಾರೆ.
ಮಗಳು ಮಂಜುಳ ಹಾಗೂ ಅಳಿಯ ಮಂಜುನಾಥ್‌ನೊಟ್ಟಿಗೆ ಕಳ್ಳ ಪೂಜಾರಿ ನವೀನ್ ವಂಚಕರು. ಈ ಕಿರಾತಕರು ನಿಧಿ ಆಸೆ ತೋರಿಸಿ ವೃದ್ಧ ದಂಪತಿ ಹಾಗೂ ಸಹೋರನಿಗೆ ವಂಚನೆ ಮಾಡಿದ್ದಾರೆ. ತಿಮ್ಮರಾಯಪ್ಪನವರಿಗೆ ಇಬ್ಬರು ಹೆಣ್ಣು, ಒಬ್ಬ ಗಂಡು ಮಗನಿದ್ದ. ಎಲ್ಲಿ ಆಸ್ತಿ ಎಲ್ಲ ಅಣ್ಣನ ಪಾಲಾಗುತ್ತೋ ಎಂಬ ಭೀತಿಗೆ ಈ ಹೆಣ್ಮಕ್ಕಳು ಖತರ್ನಾಕ್ ಪ್ಲ್ಯಾನ್ ಮಾಡಿದ್ದರು.
ಇದನ್ನೂ ಓದಿ: Weather Report : ಸೆ.10ರವರೆಗೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ಈ ವಂಚಕ ಮಗಳು- ಅಳಿಯ ಜಮೀನು ಲಪಟಾಯಿಸಲು ನಿಧಿ ಆಸೆ ಹುಟ್ಟಿಸಿದ್ದರು. ನಿಧಿಗಾಗಿ ಜಮೀನು ಮಾರಾಟ ಮಾಡಲು ಅಳಿಯ ಮತ್ತು ಇಬ್ಬರ ಹೆಣ್ಣುಮಕ್ಕಳು ಪ್ಲ್ಯಾನ್ ಮಾಡಿದ್ದರು. ಜಮೀನು ಮಾರಾಟ ಮಾಡಿ ಹಣ ಹೊಡೆಯಲು ನಿಧಿ ಇದೆ ಎಂದು ನಾಟಕವಾಡಿದ್ದರು.
ಇದಕ್ಕಾಗಿ ತಮಿಳುನಾಡು ಮೂಲದ ನವೀನ್ ಎಂಬ ಕಳ್ಳ ಪೂಜಾರಿಯನ್ನು ಕರೆಸಿದ್ದರು. ಈ ಮನೆಯಲ್ಲಿ ನಿಧಿ ಇದೆ ಎಂದು ನವೀನ್ ಎಲ್ಲರನ್ನೂ ನಂಬಿಸಿದ್ದ. ಬಂಡಾಪುರದ ಒಂಟಿ ಮನೆಯಲ್ಲಿ ರಾತ್ರಿ ಎಲ್ಲಾ ಹೋಮ-ಹವನ ಪೂಜೆ ಮಾಡಿಸಿದ್ದ. ಹೋಮ ಹಮನ ಮಾಡಿ ಬಳಿಕ ಎರಡು ಮೇಕೆ ಬಲಿ ಕೊಟ್ಟಿದ್ದ. ಆರು ಅಡಿ ಹಳ್ಳ ತೋಡಿ, ಏನು ಸಿಗದಿದ್ದಾಗ ತೋಡಿದ್ದ ಗುಂಡಿಯನ್ನು ಮುಚ್ಚಿದ್ದರು. ಮಾತ್ರವಲ್ಲದೆ ಅಲ್ಲೆಎಣ್ಣೆ ಪಾರ್ಟಿ ಮಾಡಿ ಬಂದಿದ್ದರು.
ಇತ್ತ ಹೆಣ್ಮಕ್ಕಳ ಪ್ಲ್ಯಾನ್ ತಿಳಿದು ಮನೆಯಲ್ಲಿ ಇರಲು ಭಯಪಟ್ಟು ವೃದ್ದ ತಿಮ್ಮರಾಯಪ್ಪ ದಂಪತಿ ಹಾಗೂ ಪುತ್ರ ಪ್ರದೀಪ್ ಕುಮಾರ್ ಮನೆ ಬಿಟ್ಟು ಹೋಗಿದ್ದಾರೆ. ಸದ್ಯ ನಿಧಿ ಆಸೆಗೆ ಇಡೀ ಕುಟುಂಬ ಬೀದಿಗೆ ಬಿದ್ದಿದ್ದು, 50 ಲಕ್ಷ ಪಂಗನಾಮ ಹಾಕಿಸಿಕೊಂಡಿದ್ದಾರೆ. ಹಣ, ಜಮೀನು ಕಳೆದುಕೊಂಡ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ