Site icon Vistara News

Theft case : ಮನೆ ಕೆಲಸದಾಕೆ ಕೈಗೆ ಜವಾಬ್ದಾರಿ ಕೊಟ್ರೆ, ಕೈ ಚಳಕ ತೋರಿಸಿ ಕರಾಮತ್ತು; ವೈದ್ಯರ ಮನೆಯಿಂದ ಹಣ ಕಳವು

Theft case

#image_title

ಗದಗ: ನಂಬಿಕೆ ಮೇಲೆ ಮನೆ ಜವಾಬ್ದಾರಿ ಕೊಟ್ಟು ಹೋದರೆ ಹೀಗಾ ಮಾಡೋದು? ಈಗಿನ ಕಾಲದಲ್ಲಿ ಯಾರನ್ನು ನಂಬಬೇಕು ಬಿಡಬೇಕೋ ಗೊತ್ತೇ ಆಗಲ್ಲ! ಹೀಗೆ ಜನ ಮಾತನಾಡಿಕೊಳ್ಳುವುದಕ್ಕೆ ಪೂರಕವಾದ ಘಟನೆಯೊಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ. ನಂಬಿಕೆ ಇಟ್ಟು ಮನೆ ಬಿಟ್ಟು ಹೋದೆ ಆಕೆ ಮನೆ ತಿಜೋರಿಗೇ ಕನ್ನ ಹಾಕಿದ್ದಾಳೆ. ಇದು ಮನೆ ಕೆಲಸದವಳ ಕರಾಮತ್ತು.

ನರಗುಂದ ಪಟ್ಟಣದ ವೈದ್ಯರೊಬ್ಬರು ತಮ್ಮ ಮನೆಯಲ್ಲಿ ಒಬ್ಬ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆಕೆಯನ್ನು ಮನೆಯವಳಂತೆ ನೋಡಿಕೊಂಡಿದ್ದರು. ಇಡೀ ಮನೆಯಲ್ಲಿ ಓಡಾಡಿಕೊಂಡಿರಲು ಸಲುಗೆ ಕೊಟ್ಟಿದ್ದರು. ಮನೆಯವರು ಯಾರೂ ಇಲ್ಲದಿದ್ದರೂ ಆಕೆ ಮನೆಯಲ್ಲಿ ಇರಬಹುದಾದ ಸ್ವಾತಂತ್ರ್ಯವಿತ್ತು ಆಕೆಗೆ. ಆದರೆ ಆಕೆ ಅದನ್ನೇ ದುರುಪಯೋಗ ಮಾಡಿಕೊಂಡಿದ್ದಾಳೆ.

ಮನೆಯವರೆಲ್ಲರೂ ಆಕೆಯ ಮೇಲೆ ಮನೆ ಜವಾಬ್ದಾರಿ ನೀಡಿ ಕೆಲಸದ ನಿಮಿತ್ತ ಹೊರಗಡೆ ಹೋದಾಗ ಮನೆಯಲ್ಲಿನ ಕಬೋರ್ಡ್ ನಲ್ಲಿದ್ದ ಸುಮಾರು 60-80 ಸಾವಿರ ರೂ. ಕಳ್ಳತನ ಮಾಡಿ ಕೈಚಳಕ ತೋರಿಸಿದ್ದಾಳೆ. ವೈದ್ಯರು ತಮ್ಮ ಮನೆಯಲ್ಲಿ ಪ್ರತಿಯೊಂದು ಕೊಠಡಿಗೆ ಸಿಸಿಟಿವಿಯನ್ನು ಹಾಕಿಸಿದ್ದಾರೆ. ಇದು ಆಕೆಗೂ ಗೊತ್ತಿತ್ತು. ಆದ್ರೆ ಇದೆಲ್ಲ ಏನು ನೋಡೋದಿಲ್ಲ ವೈದ್ಯರಿಗೆ ಕೆಲಸದ ಒತ್ತಡದಲ್ಲಿ ಗಮನಿಸೋದಿಲ್ಲ ಅಂತ ಅಂದುಕೊಂಡು ಸೀದಾ ಕಬೋರ್ಡ್ ಕೀಲಿ ತೆಗೆದು ರಾಜಾರೋಷವಾಗಿ ಕಂತೆ ಕಂತೆ ಹಣವನ್ನು ಎಗರಿಸಿಕೊಂಡು ಹೋಗಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿನ ಲೈವ್ ದೃಶ್ಯಗಳಿಗೆ ವೈದ್ಯರು ತಮ್ಮ ಮೊಬೈಲ್ ಗೆ ಕನೆಕ್ಟ್ ಮಾಡಿಸಿಕೊಂಡಿದ್ದಾರೆ. ಆದರೆ ವೈದ್ಯರು ತಮ್ಮ ಕೆಲಸದ ಒತ್ತಡದ ನಡುವೆಯೂ ಮಹಿಳೆಯ ಕೈಚಳಕ ಗಮನಿಸಿ ಕೊನೆಗೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಬಸ್‌ನಡಿ ಸಿಲುಕಿದರೂ ಬಚಾವಾಗಿದ್ದವರಲ್ಲಿ ಒಬ್ಬ ಮೃತ್ಯು

ಗದಗ: ಕಳೆದ ಭಾನುವಾರ ಗದಗದ ಬನ್ನಿಕಟ್ಟಿ ವೃತ್ತದಲ್ಲಿ ಬಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ, ಬೈಕ್‌ ಸವಾರರಿಬ್ಬರೂ ಬಸ್‌ನಡಿಗೆ ಬಿದ್ದರು ಗಾಯಗೊಂಡಿದ್ದರು. ಬಸನ ಚಕ್ರದಡಿ ಸಿಲುಕಬಹುದಾಗಿದ್ದ ಅವರು ಬಸ್‌ ಚಾಲಕನ ಸಮಯಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾಗಿದ್ದರು. ಇದೀಗ ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಅಕ್ಬರಸಾಬ್ ಅಬ್ದುಲ್ ಸಾಬ ತಹಶೀಲ್ದಾರ (22) ಮೃತ ಸವಾರ. ಅಕ್ಬರ್‌ ಸಾಬ್‌ ಮತ್ತು ಹಜರತ್ ಗೌಸಲಾಜುಮ್ ಮಜ್ಜೂರ‌‌(25) ಬೈಕ್‌ನಲ್ಲಿ ಹೋಗುತ್ತಿದ್ದಾ ಅಪಘಾತ ಸಂಭವಿಸಿತ್ತು. ಗಾಯಾಳುಗಳನ್ನು ಅಂದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಕ್ಬರ್‌ ಸಾಬ್‌ ಈಗ ಚಿಕಿತ್ಸೆ ಫಲಕಾರಿಯಾಗಿ ಮೃತಪಟ್ಟಿದ್ದಾರೆ. ಗದಗದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿತ್ತು.

ಇದನ್ನೂ ಓದಿ : Money For Likes ಎಂಬ ಸೈಬರ್ ವಂಚನೆಗೆ 1 ಕೋಟಿ ರೂ. ಕಳೆದುಕೊಂಡ ಸೇನಾ ನಿವೃತ್ತ ಅಧಿಕಾರಿ; ಈ ಜಾಲದ ಬಗ್ಗೆ ಇರಲಿ ಎಚ್ಚರ

Exit mobile version