ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ (Dating App)ನಯವಾಗಿ ಮಾತಾಡಿ ವಂಚಿಸುವವರು (Fraud Case) ಹೆಚ್ಚಾಗಿದ್ದಾರೆ. ಹಿಂದೂ ಯುವಕನ ಹೆಸರಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಯುವತಿಗೆ ಲಕ್ಷಾಂತರ ರೂ. ವಂಚಿಸಿದವನ ಬಂಧನವಾಗಿದೆ. ಮುದಾಸಿರ್ ಅಲಿಯಸ್ ಅನಿರುದ್ಧ್ ಬಂಧಿತ ಆರೋಪಿಯಾಗಿದ್ದಾನೆ.
ಬಂಬಲ್ ಎಂಬ ಡೇಟಿಂಗ್ ಆ್ಯಪ್‌ನಲ್ಲಿ ಸಂಗಾತಿಯನ್ನು ಹುಡುಕುತ್ತಿದ್ದ ಯುವತಿಗೆ ಈ ವಂಚಕ ಮುದಾಸಿರ್ ಪರಿಚಯವಾಗಿದ್ದ. ನಕಲಿ ಹೆಸರಿನೊಂದಿಗೆ ಪ್ರೊಫೈಲ್ ಕ್ರಿಯೇಟ್ ಮಾಡಿ, ಕೆಲ ದಿನಗಳ ಕಾಲ ಚಾಟಿಂಗ್, ಫೋನ್ ಕಾಲ್ ಮೂಲಕ ನಂಬಿಕೆಯನ್ನು ಗಿಟ್ಟಿಸಿಕೊಂಡಿದ್ದ. ನಂತರ ಇಬ್ಬರೂ ಭೇಟಿ ಮಾಡಿ ಪರಸ್ಪರ ಹತ್ತಿರವಾಗಿದ್ದರು. ಯುವತಿಗೆ ಈ ಮುದಾಸಿರ್ ಮದುವೆಯಾಗುವುದಾಗಿ ಹೇಳಿ ಮಾತು ಕೊಟ್ಟು, ದೈಹಿಕ ಸಂಪರ್ಕವನ್ನು ಬೆಳೆಸಿದ್ದ.
ಈ ನಡುವೆ ವಂಚಕ ಮುದಾಸಿರ್ ತನ್ನ ತಾಯಿಗೆ ಅನಾರೋಗ್ಯ ಹದಗೆಟ್ಟಿದೆ. ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದುಕೊಂಡು ಹೋಗಬೇಕು. ಆದರೆ ಹಣದ ಕೊರತೆ ಇದೆ ಎಂದು ಹೇಳಿ ಯುವತಿ ಬಳಿ ಒಂದು ಲಕ್ಷ ರೂ. ಪಡೆದಿದ್ದ. ಬಳಿಕ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಸುಳ್ಳಿನ ಕಥೆಯನ್ನು ಕಟ್ಟಿದ್ದ. ಈ ನಡುವೆ ಸೋದರನನ್ನು ನೋಡಲು ದುಬೈಗೆ ಹೋಗಿ ಬರುವುದಾಗಿ ಹೇಳಿ ಯುವತಿಯೊಂದಿಗೆ ಸಂಪರ್ಕ ಕಡಿತ ಮಾಡಿಕೊಂಡು, ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Viral News: ತೊಪ್ಪೆಯಾಗುವಂತೆ ಮಳೆ ಹೊಯ್ಯಲೆಂದು ಕಪ್ಪೆಗಳ ಕಟ್ಟಿಕೊಂಡು ಬಂದು ತಾಳಿ ಕಟ್ಟಿದ ಗ್ರಾಮಸ್ಥರು!
ಬಳಿಕ ಯುವತಿ ಆತನಿಗಾಗಿ ಹುಡುಕಾಟ ನಡೆಸಿದಾಗ ಶಾಕ್‌ವೊಂದು ಕಾದಿತ್ತು. ಹಿಂದು ಹೆಸರಲ್ಲಿ ಪರಿಚಯವಾಗಿದ್ದ ಆತ ಹಿಂದು ಯುವಕನೇ ಅಲ್ಲ ಎಂಬುದು ತಿಳಿದು ಬಂದಿದೆ. ಮಾತ್ರವಲ್ಲದೆ ಮದುವೆಯಾಗಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿದ್ದಾನೆ ಎಂದು ಗೊತ್ತಾಗಿದೆ. ಮೋಸ ಹೋಗಿದ್ದು ತಿಳಿಯುತ್ತಿದ್ದಂತೆ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ