Site icon Vistara News

Free Bus service: ಶಕ್ತಿ ಹಣ ಬಿಡುಗಡೆ ಇನ್ನೂ ದೂರ, ಸಾರಿಗೆ ನಿಗಮಗಳಿಗೆ ಸಂಕಷ್ಟ

Free bus

ಬೆಂಗಳೂರು: ಜೂನ್‌ ತಿಂಗಳಲ್ಲಿ ಉಚಿತ ಬಸ್‌ ಪ್ರಯಾಣ (Free Bus service) ಶಕ್ತಿ ಯೋಜನೆಯ (shakti scheme) ಹಣ ಸಾರಿಗೆ ನಿಗಮಗಳಿಗೆ ದೊರಕಲು ಸದ್ಯ ಮುಹೂರ್ತ ಬಂದಿಲ್ಲ. ಹೀಗಾಗಿ ಶಕ್ತಿ ಹಣ ಆದಷ್ಟು ಬೇಗನೆ ಬಿಡುಗಡೆ ಮಾಡಿ ಎಂದು ಕೋರಿ ಸರ್ಕಾರಕ್ಕೆ ಸಾರಿಗೆ ನಿಗಮಗಳಿಂದ ಪ್ರಸ್ತಾವನೆಗೆ ತಯಾರಿ ನಡೆದಿದೆ.

ಪ್ರತಿ ತಿಂಗಳ ಅಂತ್ಯದಲ್ಲಿ ಯೋಜನೆಯ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಾ ರಿಗೆ ನಿಗಮಗಳು ತಯಾರಿ ನಡೆಸಿವೆ ಸದ್ಯ ಜೂನ್ ತಿಂಗಳ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕಿದೆ. ಜೂನ್ ತಿಂಗಳಲ್ಲಿ 10 ಕೋಟಿಗೂ ಹೆಚ್ಚು ಮಹಿಳೆಯರು ಯೋಜನೆ ಅಡಿ ಉಚಿತ ಸಂಚಾರ ಮಾಡಿದ್ದು, ಟಿಕೆಟ್ ಮೌಲ್ಯ 250 ಕೋಟಿಯಾಗಿದೆ. ಸದ್ಯ ಈ ಹಣ ಬಿಡುಗಡೆಯಾಗಬೇಕಿದೆ.

ಆದರೆ ಬಜೆಟ್‌ನಲ್ಲಿ ಯೋಜನೆಗಾಗಿ ಅನುದಾನ ನಿಗದಿಯಾಗದ ಕಾರಣ ನಿಗಮಗಳಿಗೆ ಸದ್ಯಕ್ಕೆ ಹಣ ಪಾವತಿ ಸಾಧ್ಯ ಇಲ್ಲ ಎಂದು ತಿಳಿದುಬಂದಿದೆ. ಜೂನ್ 7ರ ಬಜೆಟ್ ಮಂಡನೆಯಲ್ಲಿ ಸರ್ಕಾರ ಅನುದಾನ ನಿಗದಿ ಮಾಡಲಿದೆ. ಜುಲೈ 21ಕ್ಕೆ ಅನುಮೋದನೆ ಸಿಗಲಿದ್ದು, ಅಲ್ಲಿ ತನಕ ಸರ್ಕಾರ ಹಣ ಪಾವತಿಸಲು ಸಾಧ್ಯ ಇಲ್ಲ. ಹೀಗಾಗಿ ಜೂನ್ ತಿಂಗಳ ಮೊತ್ತ ಸರ್ಕಾರದಿಂದ ನಿಗಮಗಳ ಕೈ ಸೇರೋದು ವಿಳಂಬ ಆಗಲಿದೆ‌.

ಇದೇ ರೀತಿ ಪ್ರತಿ ತಿಂಗಳು ಹಣ ಪಾವತಿ ತಡವಾದರೆ ನಿಗಮಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಮುಂದಿನ ತಿಂಗಳಿನಿಂದ ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಆ ತಿಂಗಳ ಹಣವನ್ನ ಆಯಾ ತಿಂಗಳ ಅಂತ್ಯದಲ್ಲೇ ಪಾವತಿ ಮಾಡಿದರೆ ಸಿಬ್ಬಂದಿ ಸಂಬಳ ಸೇರಿದಂತೆ ಖರ್ಚು ವೆಚ್ಚಗಳಿಗೆ ಸಮಸ್ಯೆಯಾಗದೇ ನಿರ್ವಹಿಸಲು ಸಾಧ್ಯವಿದೆ. ಹೀಗಾಗಿ ಸರ್ಕಾರಕ್ಕೆ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಸ್ತಾವನೆ ಸಲ್ಲಿಸಲು ಸಾರಿಗೆ ನಿಗಮಗಳ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Free Bus service : ಫ್ರೀ ಬಸ್‌ನಿಂದ ಹೆಣ್ಮಕ್ಳು ಯಾರ ಮಾತೂ ಕೇಳ್ತಿಲ್ಲ, ಗಂಡಸ್ರಿಗೂ ಫ್ರೀ ಕೊಡಿ; ವಾಟಾಳ್‌ ಡಿಮ್ಯಾಂಡ್‌!

Exit mobile version