ಬೆಂಗಳೂರು: ಗ್ಯಾರಂಟಿ ಯೋಜನೆಯ (Congress Guarantee Scheme) ಭಾಗವಾದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ (Shakti Scheme) ಭರಪೂರ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ವೇಳೆ ಮಹಿಳೆಯರು ಸಹ ಉತ್ಸಾಹದಿಂದ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ (Free Bus Service) ಮಾಡುತ್ತಿದ್ದಾರೆ. ಈ ಯೋಜನೆಯು ಜೂನ್ 11ರಂದು ರಾಜ್ಯಾದ್ಯಂತ ಜಾರಿಗೆ ಬಂದಿದ್ದು, ಈಗ 14ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ ಒಟ್ಟು 166 ಕೋಟಿ ಮೌಲ್ಯ ದಾಟಿ ಮಹಿಳಾ ಪ್ರಯಾಣಿಕರು “ಶಕ್ತಿ” ಯೋಜನೆಯಡಿ ಸಂಚಾರ ಮಾಡಿದ್ದಾರೆ.
ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಗಣನೀಯ ಏರಿಕೆ ಕಾಣುತ್ತಿದೆ. ಕಳೆದ ಹದಿನಾಲ್ಕು ದಿನಗಳಲ್ಲಿ 7,15,58,775 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.
ಜೂನ್ 24ರಂದು ಮಹಿಳೆಯರ ಪ್ರಯಾಣದ ವಿವರ
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 17,29,314 ಮಹಿಳಾ ಪ್ರಯಾಣಿಕರು ಸಂಚರಿಸಿದ್ದರೆ, 4,92,92,066 ರೂಪಾಯಿ ಒಟ್ಟು ಮೌಲ್ಯವಾಗಿದೆ. ಬಿಎಂಟಿಸಿಯಲ್ಲಿ 18,95,144 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದು, ಪ್ರಯಾಣದ ಮೌಲ್ಯವು 2,41,94,354 ರೂಪಾಯಿ ಆಗಿದೆ.
ವಾಯವ್ಯ ಸಾರಿಗೆಯಲ್ಲಿ 14,01,910 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಪ್ರಯಾಣದ ಮೌಲ್ಯವು 3,50,40,233 ರೂಪಾಯಿಯಷ್ಟು ಆಗಿದೆ. ಕಲ್ಯಾಣ ಕರ್ನಾಟಕದಲ್ಲಿ 7,88,156 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಪ್ರಯಾಣದ ಮೌಲ್ಯವು 2,55,94,985 ರೂಪಾಯಿ ಆಗಿದೆ.
ಒಟ್ಟಾರೆಯಾಗಿ ಜೂನ್ 24ರಂದು ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ 58,14,524 ಇದ್ದು, ಇದರ ಮೌಲ್ಯ 13,41,21,638 ರೂಪಾಯಿ ಆಗಲಿದೆ.
ಇದನ್ನೂ ಓದಿ: Video Viral: ಸರ್ಕಾರಿ ಬಸ್ಸಲ್ಲಿ ಮಹಿಳೆಯರ ಪಾರುಪಥ್ಯ; ಸೀಟ್ ಹಿಡಿಯೋಕೆ ಡ್ರೈವರ್ ಸೀಟ್‌ನಿಂದ ನುಗ್ಗಿದ ಗಂಡಸರು!
14 ದಿನದ ಲೆಕ್ಕ 16 ಕೋಟಿ ರೂಪಾಯಿ ಮೀರಿದೆ!
ಜೂನ್ 11ರಿಂದ 24ರ ವರೆಗೂ 7,15,58,775 ಮಹಿಳೆಯರು ಪ್ರಯಾಣ ಮಾಡಿದ್ದು, ಒಟ್ಟು ಈ ದಿನಗಳಲ್ಲಿ ಮಹಿಳೆಯರು ಪ್ರಯಾಣ ಮಾಡಿ ಮೌಲ್ಯ 1,66,09,27,526 ರೂಪಾಯಿ ಆಗಿದೆ.