ಬೆಂಗಳೂರು: ಜ್ಞಾನಸೇತು ಸಮಿತಿ ಹಾಗೂ ವಿಸ್ತಾರ ನ್ಯೂಸ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆಯ ಶಿಬಿರ (Free health camp) ನಡೆಯಲಿದೆ. ನಗರದ ಚಾಮರಾಜಪೇಟೆಯ ರಾಯ ರಾಯ ಕೊಲ್ಲಂ ವೆಂಕಟರಾವ್ ಛತ್ರದಲ್ಲಿ ಆಯೋಜಿಸಲಾಗಿದೆ.
ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಮಟ್ಟ, ಕೊಬ್ಬಿನ ಅಂಶ, ಮೂತ್ರಪಿಂಡ ಸಮಸ್ಯೆ ಹಾಗೂ ಮೂತ್ರದಲ್ಲಿ ಆಲ್ಬಮಿನ್, ಮೂತ್ರದಲ್ಲಿ ಸಕ್ಕರೆ ಮಟ್ಟ ಮತ್ತು ಕಾಮಾಲೆ ರೋಗ ತಪಾಸಣೆಯನ್ನು ಮಾಡಲಾಗುತ್ತದೆ. ಏ.28ರ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಈ ತಪಾಸಣೆಯನ್ನು ಉಚಿತವಾಗಿ ಪರೀಕ್ಷಿಸಲಾಗುತ್ತದೆ.
ಇದನ್ನೂ ಓದಿ: Karnataka Election 2023: ಮೋದಿ ವಿಷದ ಹಾವು ಎಂದ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಲಿ: ಶೋಭಾ ಕರಂದ್ಲಾಜೆ
ಶೇಖರ್ ಕಣ್ಣಿನ ಆಸ್ಪತ್ರೆ, ಮುತ್ತೂಟ್ ಸ್ನೇಹಶ್ರಯ, ಮಿಲನ್ ದಿ ಫರ್ಟಿಲಿಟಿ ಸೆಂಟರ್, ಮುತ್ತೂಟ್ ಫೈನಾನ್ಸ್, ಆಸ್ಟರ್ ಆರ್‌ವಿ ಆಸ್ಪತ್ರೆ ಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡಿ, ಉತ್ತೇಜನ ಕೊಡುವ ಸಲುವಾಗಿ ಜ್ಞಾನಸೇತು ಎಂಬ ಸಮಿತಿಯನ್ನು ರಚಿಸಲಾಗಿದೆ. ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಅಂಗವಾಗಿ ಈ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.