Site icon Vistara News

Shakti Scheme: ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್; ಶತ ಕೋಟಿ ದಾಟಿದ ಮಹಿಳಾ ಪ್ರಯಾಣಿಕರ ಸಂಖ್ಯೆ

shakti scheme

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮೊದಲ ಗ್ಯಾರಂಟಿಯಾದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ದೊರಕಿದೆ. ಯೋಜನೆಯಲ್ಲಿ ಅನುಕೂಲ ಪಡೆದಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ 100 ಕೋಟಿ ದಾಟಿದೆ.

ಜೂನ್ 11 ರಿಂದ ನವೆಂಬರ್ 22 ವರೆಗೆ 100.47 ಕೋಟಿ ಮಹಿಳಾ ಪ್ರಯಾಣಿಕರು ನಾಲ್ಕೂ ನಿಗಮಗಳ ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಶಕ್ತಿ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ 2397 ಕೋಟಿ ರೂ. ವ್ಯಯವಾಗಿದ್ದು, ಕೆಲವೇ ದಿನಗಳಲ್ಲಿ 2500 ಕೋಟಿ ರೂ. ತಲುಪಲಿದೆ.

ಪ್ರತಿ‌ನಿತ್ಯ‌ ಲಕ್ಷ ಲಕ್ಷ ಮಹಿಳಾ ಮಣಿಗಳ ಪ್ರಯಾಣದಿಂದ 2397 ಕೋಟಿ ವ್ಯಯವಾಗಿದೆ. ಕಳೆದ 165 ದಿನಗಳಲ್ಲಿ 100,47,56,184 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.

ಮಹಿಳಾ ಪ್ರಯಾಣಿಕರ ವಿವರ

ಕೆಎಸ್‌ಆರ್‌ಟಿಸಿ – 30,12,17,350
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 900,29,21,508

ಬಿಎಂಟಿಸಿ – 32,69,60,082
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 420,82,19,200

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ – 23,37,23,007
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 600,69,91,513

ಕಲ್ಯಾಣ ಕರ್ನಾಟಕ – 14,28,55,745
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 475,98,79,341

ಇದನ್ನೂ ಓದಿ | Cabinet Meeting : ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌; ಯಜಮಾನಿ ಇಲ್ಲದಿದ್ದರೆ ಸೀನಿಯರ್‌ ಖಾತೆಗೆ ಹಣ

ಶಕ್ತಿ ಯೋಜನೆ ಜಾರಿಯಾದ ಬಳಿಕ ಅಂದರೆ ಕಳೆದ ಐದೂವರೆ ತಿಂಗಳಲ್ಲಿ 178 ಕೋಟಿ ಮಂದಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಈ ಪೈಕಿ 78 ಕೋಟಿ ಪುರುಷ ಪ್ರಯಾಣಿಕರಿದ್ದರೆ, 100 ಕೋಟಿ ಮಹಿಳಾ ಪ್ರಯಾಣಿಕರಿದ್ದಾರೆ.

ಇದನ್ನೂ ಓದಿ | Gruha Lakshmi : ವಾರದೊಳಗೆ ಗೃಹಲಕ್ಷ್ಮಿ ಅದಾಲತ್: ದುಡ್ಡು ಬಂದಿಲ್ವಾ? ಕೇಳಿ!

ನ.24ರಂದು ಶಕ್ತಿ ಶತಕೋಟಿ ಸಂಭ್ರಮ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯ ಶತಕೋಟಿ ಸಂಭ್ರಮ ಹಾಗೂ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಸಮಾರಂಭವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನವೆಂಬರ್‌ 24 ರಂದು ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version