Site icon Vistara News

ವಿಸ್ತಾರ TOP 10 NEWS : ಮನೆಯಿಂದಲೇ ಮತದಾನಕ್ಕೆ ಅವಕಾಶ, ಮರೆಯಾದ ಧ್ರುವನಾರಾಯಣ ಮತ್ತಿತರ ಪ್ರಮುಖ ಸುದ್ದಿಗಳಿವು

from-allowing-voting-from-home-to-preparing-for-modis-visit-the-important-news-is-here

#image_title

1. Karnataka Election 2023: 80 ವರ್ಷ ಮೇಲ್ಪಟ್ಟ ನಾಗರಿಕರು, ವಿಶೇಷಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ; ಹೇಗಿರಲಿದೆ ಪ್ರಕ್ರಿಯೆ?
ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೂತ್‌ಗೆ ಬಂದು ಮತದಾನ ಮಾಡಲು ಆಗದ 80 ವರ್ಷ ದಾಟಿದ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತ ಚಲಾಯಿಸಲು ಈ ಬಾರಿಯ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ದೇಶದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ ಈ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್‌ ಕುಮಾರ್‌ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಹೆಚ್ಚಿನ ಸುದ್ದಿಗಾಗಿ:

2. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೃದಯಾಘಾತದಿಂದ ನಿಧನ
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ತೀವ್ರ ಹೃದಯಾಘಾತದಿಂದ ಮೈಸೂರಿನ ಡಿಆರ್‌ಎಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವ ಉಮೇದು ಹೊಂದಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

3. ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ 5, 8ನೇ ತರಗತಿ ಪರೀಕ್ಷೆ ಮುಂದೂಡಿಕೆ

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆ (Public Exam) ನಡೆಸುವ ರಾಜ್ಯ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಹೀಗಾಗಿ ಮಾರ್ಚ್‌ 13ರಿಂದ ಆರಂಭವಾಗಬೇಕಾಗಿದ್ದ ಪರೀಕ್ಷೆ ರದ್ದಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

4. ಭಾನುವಾರ ರಾಜ್ಯಕ್ಕೆ ಮೋದಿ; ಮಂಡ್ಯ, ಧಾರವಾಡದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಮೋಡಿ
ಪ್ರಧಾನಿ ನರೇಂದ್ರ ಮೋದಿ (Modi in Karnataka) ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಾರಿಯೂ ಕಮಲ ಅರಳಿಸುವ ಪ್ರಯತ್ನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಸರಣಿ ಭೇಟಿಯನ್ನು ನೀಡುತ್ತಲೇ ಬಂದಿದ್ದಾರೆ. ಈಗ ಮಾರ್ಚ್‌ 12ರ ಭಾನುವಾರ ರಾಜ್ಯದ ಮಂಡ್ಯ ಹಾಗೂ ಧಾರವಾಡಕ್ಕೆ ಭೇಟಿ ನೀಡಲಿರುವ ಅವರು ಸಾವಿರಾರು ಕೋಟಿ ರೂಪಾಯಿಯ ಕಾಮಗಾರಿಗಳು ಹಾಗೂ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಮತದಾರನ ಮನಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ. ಮಂಡ್ಯದಲ್ಲಿ ರೋಡ್‌ ಶೋವನ್ನು ಸಹ ಆಯೋಜಿಸಲಾಗಿದೆ. ಹಳೇ ಮೈಸೂರು ಭಾಗವನ್ನು ಕೇಂದ್ರ ಬಿಜೆಪಿ ಈ ಬಾರಿ ವಿಶೇಷವಾಗಿ ಪರಿಗಣಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಹೆಚ್ಚಿನ ಓದಿಗಾಗಿ: ನಾಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್; ಪರ್ಯಾಯ ಮಾರ್ಗಗಳು ಯಾವುವು?

5. ಎಚ್‌3ಎನ್‌2 ಸೋಂಕಿನ ಬೆನ್ನಲ್ಲೇ ಕೊರೊನಾ ಕೇಸ್‌ ಹೆಚ್ಚಳ, ರಾಜ್ಯಗಳಿಗೆ ಕೇಂದ್ರ ಹಲವು ಸೂಚನೆ
ದೇಶಾದ್ಯಂತ ಎಚ್‌3ಎನ್‌2 ಸೋಂಕಿನ (H3N2 Virus) ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಕೊರೊನಾ ಪಾಸಿಟಿವಿಟಿ ದರವೂ ಜಾಸ್ತಿಯಾಗಿದೆ. ಹಾಗಾಗಿ, ಎರಡೂ ಸೋಂಕಿನ ನಿಯಂತ್ರಣಕ್ಕಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ರಾಜಧಾನಿ ಬೆಂಗಳೂರಿನಲ್ಲಿ ಸೀಸನಲ್ ಫ್ಲೂಗೆ ಸಿಗ್ತಿಲ್ಲ ಮೆಡಿಸಿನ್ಸ್‌! ರೋಗಿಗಳ ಪರದಾಟ

6. ತೇಜಸ್ವಿ ಯಾದವ್‌ ಸೇರಿದಂತೆ ಲಾಲು ಮಕ್ಕಳ ಮನೆಯಲ್ಲಿ ಇಡಿ ತಲಾಶೆ
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ತೇಜಸ್ವಿ ಯಾದವ್‌ ಸೇರಿದಂತೆ ಲಾಲು ಪ್ರಸಾದ್‌ ಯಾದವ್‌ ಅವರ ಮಕ್ಕಳ ಮನೆ ಹಾಗೂ ಆಸ್ತಿಪಾಸ್ತಿಗಳ ಶೋಧ ನಡೆಸಿದ್ದಾರೆ. ದೇಶಾದ್ಯಂತ ಇಡಿ ನಡೆಸಿದ ದಾಳಿಗಳಲ್ಲಿ, ಬಿಹಾರದ ಮಾಜಿ ಸಿಎಂಗೆ ಸಂಬಂಧಿಸಿದ ಆಸ್ತಿಗಳು ಇರುವ 24 ಕಡೆ ಶೋಧ ನಡೆಸಲಾಗಿದೆ. ಲಾಲು ಅವರ ಪುತ್ರ ತೇಜಸ್ವಿ ಯಾದವ್‌ ಹಾಗೂ ಇಬ್ಬರು ಹೆಣ್ಣುಮಕ್ಕಳ ಆಸ್ತಿಪಾಸ್ತಿಗಳ ಬಳಿಯೂ ಶೋಧಿಸಲಾಗಿದೆ. Land For Job Scam: ತೇಜಸ್ವಿ ಯಾದವ್‌ ಸೇರಿದಂತೆ ಲಾಲು ಮಕ್ಕಳ ಮನೆಯಲ್ಲಿ ಇಡಿ ತಲಾಶೆ”>ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ತೇಜಸ್ವಿ ನಿವಾಸದಲ್ಲಿ ಬಗೆದಷ್ಟೂ ಹಣ, 600 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

7. 11 ವರ್ಷಗಳ ಬಳಿಕ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ; ಎನ್ಐಎ ವಿಶೇಷ ಕೋರ್ಟ್ ಆದೇಶ
ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ (Terrorists punished) ಮೂವರು ಉಗ್ರರಿಗೆ ಎನ್‌ಐಎ ವಿಶೇಷ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಪಾಕಿಸ್ತಾನ ಮೂಲದ ಸೈಯದ್‌ ಅಬ್ದುಲ್‌ ರೆಹಮಾನ್‌, ಮೊಹಮ್ಮದ್‌ ಫಹಾದ್ ಅಲಿಯಾಸ್‌ ಕೋಯಾ ಮತ್ತು ಭಾರತದವನೇ ಅದ ಅಫ್ಸರ್‌ ಪಾಶಾ ಅವರಿಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

8. ಶುಭಮನ್​ ಗಿಲ್, ವಿರಾಟ್​ ಕೊಹ್ಲಿ ಬೊಂಬಾಟ್​ ಆಟ; 191 ರನ್​ ಹಿನ್ನಡೆ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭಾರತ ಮೂರನೇ ದಿನದಾಟಕ್ಕೆ 3 ವಿಕೆಟ್​ ನಷ್ಟಕ್ಕೆ 289 ರನ್​ ಗಳಿಸಿದೆ. ಆಸ್ಟ್ರೇಲಿಯಾದ ಗುರಿ ಬೆನ್ನಟ್ಟಲು ಭಾರತ ತಂಡ ಇನ್ನೂ 191 ರನ್​ಗಳ ಹಿನ್ನಡೆಯಲ್ಲಿದ್ದು, ಎರಡು ದಿನಗಳ ಆಟ ಬಾಕಿಯಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

9. ಆಸ್ಕರ್‌ ಪ್ರಶಸ್ತಿಯ ನಾಮ ನಿರ್ದೇಶನ ಇಂದು ಪ್ರಕಟ; ವೀಕ್ಷಿಸುವುದು ಹೇಗೆ? ಎಲ್ಲಿ?
ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತದವರಿಗೆ ಈ ಬಾರಿಯ ಆಸ್ಕರ್‌ ಪ್ರಶಸ್ತಿಗಳ (Oscar Awards) ಬಗ್ಗೆ ಹೆಚ್ಚಿನ ಕುತೂಹಲವಿದೆ. ದಕ್ಷಿಣ ಭಾರತದ ಹಲವು ಸಿನಿಮಾಗಳು ಆಸ್ಕರ್‌ ಅಂಗಳದವರೆಗೂ ತಲುಪಿವೆ. ಒಟ್ಟಾರೆಯಾಗಿ 300ಕ್ಕೂ ಅಧಿಕ ಸಿನಿಮಾಗಳು ಆಸ್ಕರ್‌ ಅಂಗಳದಲ್ಲಿದ್ದು, ಅದರಲ್ಲಿ ಪ್ರಶಸ್ತಿಗೆ ಅರ್ಹವೆನಿಸುವ ಸಿನಿಮಾಗಳನ್ನು ನಾಮ ನಿರ್ದೇಶನ ಮಾಡಲಾಗುವುದು. ಆ ರೀತಿ ನಾಮ ನಿರ್ದೇಶನಗೊಂಡ ಸಿನಿಮಾಗಳ ಹೆಸರು ಇಂದು (ಜ.24) ಪ್ರಕಟವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

10. ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಕೂತಿದ್ದ ಬಾಲಕನ ಚಡ್ಡಿಯೊಳಗೇ ಹೋಗಿ ಕಚ್ಚಿದ ಇಲಿ! ಇಲ್ಲಿದೆ ವೈರಲ್‌ ವಿಡಿಯೊ
ಇಲಿ ಅಪಾಯಕಾರಿ ಪ್ರಾಣಿಯೇನಲ್ಲವಾದರೂ ಅದನ್ನು ಕಂಡರೆ ಹೆದರುವವರು ಬಹಳಷ್ಟು ಮಂದಿಯಿದ್ದಾರೆ. ಇಲಿ ಇಲ್ಲಿ ಬಾಲಕ ಚಡ್ಡಿಯೊಳಗೇ ಹೋಗಿ ಕಚ್ಚಿ ಓಡಿದೆ! ಪ್ರಸಿದ್ಧ ಮ್ಯಾಕ್‌ಡೊನಾಲ್ಡ್ಸ್‌ ಅಂಗಡಿಯಲ್ಲಿ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲೆ ಸೆರೆಯಾಗಿದ್ದು, ವಿಡಿಯೊ ವೈರಲ್‌ (Viral News) ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ತಂದೆಯಿಂದಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಹೇಳಿಕೆ
  2. ಐಡಿಬಿಐ ಬ್ಯಾಂಕ್‌ನಲ್ಲಿ 600 ಹುದ್ದೆ; ಅರ್ಜಿ ಸಲ್ಲಿಕೆಗೆ ನಾಳೆ ಕೊನೆಯ ದಿನ
  3. ಉದ್ಯಮಿ ಮನೆಗೆ ಕನ್ನ ಹಾಕಿ ಒರಿಸ್ಸಾದಲ್ಲಿ ಭವ್ಯ ಬಂಗಲೆ ನಿರ್ಮಾಣ; ಖತರ್ನಾಕ್‌ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?
  4. ಮಕ್ಕಳ ಕಥೆ: ವರ್ತಕ ಮತ್ತು ಜಾಣ ಗಿಳಿ
  5. ಮನಿ ಕಹಾನಿ ಅಂಕಣ: ಗಣಿತ ಅರ್ಥ ಆಗದಿದ್ದರೂ ಅರ್ಥಶಾಸ್ತ್ರ ಗೊತ್ತಿದ್ದರೆ ಸಾಕು!
  6. ಕಾಂಗ್ರೆಸ್‌ ನಾಯಕ ಮಿಥುನ್‌ ರೈ ವಿರುದ್ಧ ರಕ್ಷಿತ್‌ ಶೆಟ್ಟಿ ಗರಂ: ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿದ ನಟ
  7. ಮೋದಿ ಕುರಿತು ಡಾಕ್ಯುಮೆಂಟರಿ, ಬಿಬಿಸಿ ವಿರುದ್ಧ ಗುಜರಾತ್‌ ಸರ್ಕಾರ ನಿರ್ಣಯ
  8. ವಾರಾಣಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಅಸ್ಥಿ ಬ್ಯಾಂಕ್‌ ಸ್ಥಾಪಿಸಲು ಯೋಗಿ ಸರ್ಕಾರ ನಿರ್ಧಾರ, ಏನಿದರ ಉದ್ದೇಶ?
Exit mobile version