1. ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಮಧ್ಯಂತರ ವರದಿ ಶಿಫಾರಸು ಜಾರಿಗೆ ಕ್ರಮ ಎಂದು ಘೋಷಿಸಿದ ಸಿಎಂ
ವಿಧಾನಸಭೆ (ಬೆಂಗಳೂರು): ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗದ (7th Pay Commission) ಮಧ್ಯಂತರ ವರದಿ ಬಂದ ಕೂಡಲೇ ಅದರ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಮಹಿಳಾ ಕಾರ್ಮಿಕರ ಸಹಾಯಧನ 500ರಿಂದ 1000 ರೂ.ಗೆ ಹೆಚ್ಚಳ, ಸ್ಕೂಲ್ ಬಸ್ 1000ದಿಂದ 2000: ಸಿಎಂ
ರಾಜ್ಯ ಭೂರಹಿತ ಮಹಿಳಾ ಕಾರ್ಮಿಕರಿಗೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ 500 ರೂ. ಮಾಸಿಕ ಸಹಾಯಧನವನ್ನು 1000 ರೂ.ಗಳಿಗೆ ಏರಿಸಲಾಗಿದೆ (Assembly session) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದೇ ವೇಳೆ ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗುವಂತೆ 1000 ಬಸ್ ಆರಂಭಿಸಲು ಮಾಡಿದ್ದ ಪ್ಲ್ಯಾನ್‌ನ್ನು 2000 ಬಸ್‌ಗಳಿಗೆ ವಿಸ್ತರಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಮೋದಿ, ಯಡಿಯೂರಪ್ಪ ಮೇಲೆ ಭರವಸೆ ಇಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದ ಅಮಿತ್ ಶಾ; ಬಿಎಸ್‌ವೈ ಅನಿವಾರ್ಯವಾದರಾ?
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಭರವಸೆ ಇಟ್ಟು ಬಿಜೆಪಿಗೆ ಮತ ಹಾಕಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ಕರ್ನಾಟಕವನ್ನು ನಾವು ದಕ್ಷಿಣ ಭಾರತದಲ್ಲಿಯೇ ನಂ.1 ರಾಜ್ಯವನ್ನಾಗಿ ಮಾಡುವುದಲ್ಲದೆ, ಭ್ರಷ್ಟಾಚಾರ ಮುಕ್ತ ಕರ್ನಾಟಕವನ್ನು ನಾವು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕರೆ ನೀಡಿದರು. ಈ ಮೂಲಕ ಯಡಿಯೂರಪ್ಪ ಅವರ ಅನಿವಾರ್ಯತೆಯನ್ನು ಶಾ ಪ್ರಸ್ತಾಪಿಸಿದರು ಎಂದೇ ವಿಶ್ಲೇಷಿಸಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಭಾರತ ಜಗತ್ತಿಗೇ ಭರವಸೆ: ಬಿಲ್ ಗೇಟ್ಸ್ ಮುಕ್ತ ಶ್ಲಾಘನೆ
ಭಾರತ ಭವಿಷ್ಯದ ಭರವಸೆ ನೀಡುತ್ತಿರುವ ರಾಷ್ಟ್ರವಾಗಿದೆ ಎಂದು ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ (Microsoft) ಸ್ಥಾಪಕ ಬಿಲ್ ಗೇಟ್ಸ್ (Bill gates) ಹೇಳಿದ್ದಾರೆ. ತಮ್ಮ ಬ್ಲಾಗ್ ʼಗೇಟ್ಸ್ ನೋಟ್ಸ್ʼನಲ್ಲಿ ಅವರು ಈ ಬಗ್ಗೆ ವಿಸ್ತೃತವಾಗಿ ಬರೆದಿದ್ದು, ಭವಿಷ್ಯದ ತಂತ್ರಜ್ಞಾನ ಹಾಗೂ ಉದ್ಯಮ ಕ್ಷೇತ್ರದಲ್ಲಿ ಭಾರತ ವಹಿಸಬಹುದಾದ ಮಹತ್ವದ ಪಾತ್ರದ ಕುರಿತು ಬೆಳಕು ಚೆಲ್ಲಿದ್ದಾರೆ. ಜಗತ್ತಿನ ಎಲ್ಲ ದೇಶಗಳಂತೆಯೇ ಭಾರತದಲ್ಲೂ ಸೀಮಿತ ಸಂಪನ್ಮೂಲಗಳಿವೆ. ಆದರೆ ಅಂಥ ಸೀಮಿತ ಅವಕಾಶದಲ್ಲೂ ಹೇಗೆ ಪ್ರಗತಿ ಸಾಧಿಸಬಹುದು ಎಂದು ಭಾರತ ತೋರಿಸಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲ ಕ್ಲಿಕ್ ಮಾಡಿ.
5. ದೆಹಲಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಆಪ್-ಬಿಜೆಪಿ ಮಾರಾಮಾರಿ; ಗುದ್ದಾಡಿ, ತಳ್ಳಾಡಿಕೊಂಡ ಕೌನ್ಸಿಲರ್ಗಳು
ದೆಹಲಿ ಮಹಾನಗರ ಪಾಲಿಕೆ (Delhi MCD)ಮೇಯರ್ ಆಯ್ಕೆ ಚುನಾವಣೆ ಫೆ.22ರಂದು ನಡೆದು, ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಅವರು 150 ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ. ಡಿಸೆಂಬರ್ನಲ್ಲಿಯೇ ಮಹಾನಗರ ಪಾಲಿಕೆ ಚುನಾವಣೆ ಮುಗಿದಿದ್ದರೂ, ಮೇಯರ್ ಆಯ್ಕೆ ಆಗಿರಲಿಲ್ಲ. ನಾಮನಿರ್ದೇಶನಗೊಂಡ ಸದಸ್ಯರಿಗೂ ಮತದಾನದ ಹಕ್ಕನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಕೊಟ್ಟಿದ್ದೇ ಇದಕ್ಕೆ ಕಾರಣವಾಗಿತ್ತು. ಈ ಕೇಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಮೇಯರ್ ಆಯ್ಕೆ ಚುನಾವಣೆ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ದೆಹಲಿ ಏರ್ಪೋರ್ಟ್ನಲ್ಲಿ ಇಂಡಿಗೋ ವಿಮಾನದ ಎದುರು ಕಾಂಗ್ರೆಸ್ ಪ್ರತಿಭಟನೆ; ಪವನ್ ಖೇರಾರನ್ನು ಕೆಳಗೆ ಇಳಿಸಿದ್ದೇ ಕಾರಣ
ರಾಯ್ಪುರಕ್ಕೆ ಹೊರಟಿದ್ದ ಕಾಂಗ್ರೆಸ್ ಮುಖಂಡರ ನಿಯೋಗ, ದೆಹಲಿ ಏರ್ಪೋರ್ಟ್ನಲ್ಲಿ ಇಂಡಿಗೊ ವಿಮಾನದ ಎದುರಲ್ಲಿ ಕುಳಿತು ಪ್ರತಿಭಟನೆ (Congress Protest) ನಡೆಸಿದೆ. ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಸುಪ್ರಿಯಾ ಶ್ರೀನೇತ್ ಮತ್ತು ಇತರರು ಇಂದು ರಾಯ್ಪುರಕ್ಕೆ ಹೊರಟಿದ್ದರು. ಇಂಡಿಗೊ ವಿಮಾನವನ್ನೂ ಹತ್ತಿದ್ದರು. ಆದರೆ ದೆಹಲಿ ಪೊಲೀಸರ ಸೂಚನೆ ಇದೆ ಎಂಬ ಕಾರಣ ನೀಡಿ, ಕಾಂಗ್ರೆಸ್ ಮುಖಂಡ ಪವನ್ ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಪವನ್ ಖೇರಾರನ್ನು ವಿಮಾನದಿಂದ ಕೆಳಗೆ ಇಳಿಸುತ್ತಿದ್ದಂತೆ ಕಾಂಗ್ರೆಸ್ನ ಉಳಿದ ಮುಖಂಡರೂ ಕೆಳಗೆ ಇಳಿದು, ಅಲ್ಲೇ ಕುಳಿತು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಶುರು ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಮಾಂಸ ತಿಂದು ದೇಗುಲ ಪ್ರವೇಶ ವಿಚಾರದಲ್ಲಿ ನನ್ನನ್ನು ಟೀಕಿಸಿದವರು ಈಗ ಎಲ್ಲಿದ್ದಾರೆ; ಸಿದ್ದರಾಮಯ್ಯ ಪ್ರಶ್ನೆ
ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಬಿಜೆಪಿ ನಾಯಕರ ಸುಳ್ಳು ಸುದ್ದಿ ನಂಬಿ ನನ್ನನ್ನು ಟೀಕಿಸಿದ್ದ ರಾಜ್ಯದ ಕೆಲವು ಮಠಾಧೀಶರು, ಸಿ.ಟಿ.ರವಿ ಅವರು ಮಾಂಸತಿಂದು ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಮೌನವಾಗಿರುವುದು ಯಾಕೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಮಾಂಸ ತಿನ್ನುವುದು, ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು ಎಂಬುದಾಗಿಯೂ ಅವರು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಸಿಂಧೂರಿಗೆ ಬಿಗ್ ರಿಲೀಫ್, ಮಾನಹಾನಿಕರ ಹೇಳಿಕೆ ನೀಡದಂತೆ ರೂಪಾಗೆ ಕೋರ್ಟ್ ಆದೇಶ
ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ವಿರುದ್ಧದ ಕಾನೂನು ಹೋರಾಟದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ಅವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ಡಿ.ರೂಪಾ ಅವರಿಗೆ ನಗರದ ಸಿವಿಲ್ ಕೋರ್ಟ್ ಗುರುವಾರ ನಿರ್ಬಂಧ ವಿಧಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ಕರ್ನಾಟಕದಲ್ಲಿ ನಿತ್ಯ 1 ಕೋಟಿ ರೂ. ಸೈಬರ್ ವಂಚಕರ ಪಾಲು! ಕಳೆದ ವರ್ಷ 363 ಕೋಟಿ ರೂ. ಗುಳಂ
ಸೈಬರ್ ಅಪರಾಧಗಳಿಗಾಗಿ (Cyber Crimes) 2022ರಲ್ಲಿ ಕರ್ನಾಟಕವು ಸುಮಾರು 363 ಕೋಟಿ ರೂಪಾಯಿ ಕಳೆದುಕೊಂಡಿದೆ. ಸರಾಸರಿ ಲೆಕ್ಕ ಹಾಕಿದರೆ, ದಿನಕ್ಕೆ ಒಂದು ಕೋಟಿ ರೂಪಾಯಿ ಸೈಬರ್ ಕಳ್ಳರ ಪಾಲಾಗಿದೆ! 2023 ಜನವರಿ ತಿಂಗಳವೊಂದರಲ್ಲಿ ಗರಿಷ್ಠ 36 ಕೋಟಿ ರೂ. ಸೈಬರ್ ಕಳ್ಳರ ಜೇಬುಪಾಲಾಗಿದೆ! ಈ ಮಾಹಿತಿಯನ್ನು ಸ್ವತ ರಾಜ್ಯ ಸರ್ಕಾರವೇ ಬಹಿರಂಗಪಡಿಸಿದೆ. ವಿಧಾನ ಪರಿಷತ್‌ನಲ್ಲಿ ಕೇಳಲಾದ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದಾರೆ(Karnataka Cyber Crime). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಹೇ ಅಲ್ಲಾ, ನಮಗೆ ಮೋದಿಯನ್ನು ಕೊಡು, ಅವರೇ ಈ ದೇಶವನ್ನು ಸರಿ ಮಾಡಲಿ ಎಂದು ಬೇಡಿಕೊಂಡ ಪಾಕಿಸ್ತಾನಿ ಯುವಕ
ಪಾಕಿಸ್ತಾನದಲ್ಲಿ ಆರ್ಥಿಕತೆ ತೀವ್ರ ಹದಗೆಟ್ಟಿದೆ. ಬಹುತೇಕ ದಿವಾಳಿ ಸ್ಥಿತಿ (Economic Crisis in Pakistan) ತಲುಪಿದ್ದು, ಅಲ್ಲಿನ ಜನರಿಗೆ ಎರಡು ಹೊತ್ತಿನ ಊಟವೂ ಸರಿಯಾಗಿ ಸಿಗುತ್ತಿಲ್ಲ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನದಾಚೆ ತಲುಪಿ, ಕೈಗೆಟುಕದಂತಾಗಿವೆ. ಐಎಂಎಫ್, ವಿಶ್ವ ಬ್ಯಾಂಕ್ಗಳೂ ಕೂಡ ಪಾಕಿಸ್ತಾನಕ್ಕೆ ಸಾಲ ಕೊಡಲು ನಿರಾಕರಿಸಿವೆ. ಹೀಗಿರುವಾಗ ಪಾಕಿಸ್ತಾನದ ಯುವಕನೊಬ್ಬ, ಅಲ್ಲಿನ ಮಾಧ್ಯಮವೊಂದರ ಜತೆ ಮಾತನಾಡುತ್ತ ‘ನಮಗೆ ಪ್ರಧಾನಿ ನರೇಂದ್ರ ಮೋದಿಯವರು ಬೇಕು, ಅವರೊಬ್ಬರೇ ಪಾಕಿಸ್ತಾನವನ್ನು ಉಳಿಸಬಲ್ಲರು’ ಎಂದು ಹೇಳಿದ್ದಾನೆ. ಹಾಗೇ, ಭಾರತದ ಪ್ರಧಾನಿಯನ್ನು ಯುವಕ ಹೊಗಳಿದ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇನ್ನಷ್ಟು ಪ್ರಮುಖ ಸುದ್ದಿಗಳಿವು
- 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ; ಮಾ.13 ರಿಂದ ಎಕ್ಸಾಮ್ ಶುರು
- ಹಿರಿಯ ಸಾಹಿತಿ ವೈದೇಹಿ ಅವರಿಗೆ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ, ಐವರು ಸಾಧಕರಿಗೆ ಮಯೂರವರ್ಮ ಪ್ರಶಸ್ತಿ
- 2024ರ ಚುನಾವಣೆಯಲ್ಲಿ ಮೋದಿ ವಿಜಯಕ್ಕೆ ಶಿವಸೇನೆ, ಜೆಡಿಯು ಅಡ್ಡಗಾಲು? ಹೀಗಿದೆ ಲೆಕ್ಕಾಚಾರ
- ಚಳಿಗಾಲದಲ್ಲಿ ಇನ್ನೊಬ್ಬರನ್ನು ಮುಟ್ಟಿದಾಗ ನಾವೇಕೆ ʻಶಾಕ್ʼ ಹೊಡೆಯುತ್ತೇವೆ?
- ಯುದ್ಧದ ಭೀಕರತೆ ಹೇಗಿರುತ್ತವೆ ಎಂಬುದಕ್ಕೆ ರಷ್ಯಾ- ಉಕ್ರೇನ್ ಕದನದ ಈ ಚಿತ್ರಗಳೇ ಸಾಕ್ಷಿ
- ಎಐಎಡಿಎಂಕೆಗೆ ಪಳನಿಸ್ವಾಮಿಯೇ ನಾಯಕ ಎಂದು ತೀರ್ಪುಕೊಟ್ಟ ಸುಪ್ರೀಂಕೋರ್ಟ್; ಪನ್ನೀರಸೆಲ್ವಂ ಮುಂದಿನ ದಾರಿ ಯಾವುದು?
- ಮಣಿಪಾಲದಲ್ಲಿ ಡ್ರಗ್ಸ್ ವಿರುದ್ಧ ಸಮರ; ಮಾಹೆ ವಿವಿಯ 42 ವಿದ್ಯಾರ್ಥಿಗಳು ಸಸ್ಪೆಂಡ್