Site icon Vistara News

Darshan Fans : ದರ್ಶನ ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ

darshan fans Writer Nadoja G.R. Channabasappa

ಗದಗ: ಚಿತ್ರನಟ ದರ್ಶನ ಅಭಿಮಾನಿಗಳಿಂದಾಗಿ (Darshan Fans) ಶ್ರವಣ ಶಕ್ತಿ ಕಳೆದುಕೊಂಡೆ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು. ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಮರಣವೇ ಮಹಾನವಮಿ ಆಚರಣೆ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಇಂದು ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಚಲಿತದಲ್ಲಿರುವ ಚಿತ್ರನಟ ದರ್ಶನರ ಜನ್ಮದಿನದ ಸಂದರ್ಭದಲ್ಲಿ ಬೆಂಗಳೂರಿನ ನಿವಾಸದ ಪಕ್ಕದಲ್ಲಿ ಸೇರಿದ್ದ ದರ್ಶನ ಅಭಿಮಾನಿಗಳು ಸಿಡಿಸಿದ ಭಾರಿ ಸಿಡಿಮದ್ದಿನ ಸದ್ದಿನಿಂದ ನಾನು ನನ್ನ ಶ್ರವಣ ಶಕ್ತಿಯನ್ನು ಕಳೆದುಕೊಳ್ಳಬೇಕಾಯಿತು ಎಂದು ಅಸಮಾಧಾನ ಹೊರಹಾಕಿದರು. 97ರ ವಯಸ್ಸಿನಲ್ಲೂ ಸ್ಪಷ್ಟವಾಗಿ ಮಾತನಾಡಬಲ್ಲೆ, ನಡೆದಾಡಬಲ್ಲೆನು. ಆದರೆ, ಇಂದಿನ ಕಾರ್ಯಕ್ರಮದಲ್ಲಿ ತಾವೆಲ್ಲರೂ ಮಾತನಾಡುವ ಪದಗಳನ್ನು ಕೇಳಿಸಿಕೊಳ್ಳಲಾಗದಷ್ಟು ಶ್ರವಣದೋಷವನ್ನು ಅನುಭವಿಸುತ್ತಿದ್ದೇನೆ ಎಂದರು.

Exit mobile version