ಹಾವೇರಿ: ಪ್ರಜಾಪ್ರಭುತ್ವ ದಿನಾಚರಣೆಯ (Democracy Day) ಅಂಗವಾಗಿ ಮಾನವ ಸರಪಳಿ ವೇಳೆ ಇಬ್ಬರು ವಿದ್ಯಾರ್ಥಿಗಳು ಮೂರ್ಛೆ ಹೋಗಿದ್ದಾರೆ. ಹಾವೇರಿ ಜಿಲ್ಲೆಯ ಹಾವನೂರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಮೂರ್ಛೆ ಬಂದು ಅಸ್ವಸ್ಥಗೊಂಡಿದ್ದರು. ಹಾವೇರಿ ತಾಲೂಕಿನ ಗುತ್ತಲದಲ್ಲಿ ರಸ್ತೆಯ ಬಳಿ ಸಾಲಾಗಿ ವಿದ್ಯಾರ್ಥಿಗಳು ನಿಂತಿದ್ದರು. ಈ ವೇಳೆ ದಿಢೀರ್ ಅಸ್ವಸ್ಥಗೊಂಡ ವಿದ್ಯಾರ್ಥಿನಿಗಳನ್ನು ಆಸ್ಪತ್ರೆದ ದಾಖಲು ಮಾಡಲಾಗಿದೆ.
9ನೇ ತರಗತಿಯ ಪ್ರೀತಂ ನಾಗರಾಜ ಪಕ್ಕೆದ ಹಾಗೂ ಜಯಲಕ್ಷ್ಮಿ ಕೇಶವ ಗುಡಿಹಾಳ ಎಂಬ ವಿದ್ಯಾರ್ಥಿನಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರು ಆಸ್ಪತ್ರೆಗೆ ದೌಡಾಯಿಸಿದ್ದು, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಗದಗದಲ್ಲಿ ಶಿಕ್ಷಕರ ಮೇಲೆ ಹೆಜ್ಜೇನು ದಾಳಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನೆಲೆಯಲ್ಲಿ ಮಾನವ ಸರಪಳಿ ವೇಳೆ ಹೆಜ್ಜೇನು ದಾಳಿ ಮಾಡಿದೆ. ಇಬ್ಬರು ಶಿಕ್ಷಕಿಯರ ಮೇಲೆ ಜೇನು ದಾಳಿ ಮಾಡಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಘಟನೆ ನಡೆದಿದೆ. ಮುಖ, ತಲೆ, ಕೈಗೆ ಹೆಜ್ಜೇನು ಕಚ್ಚಿದ್ದು, ಗಾಯವಾಗಿದೆ. ಹೆಜ್ಜೇನು ದಾಳಿ ವೇಳೆ ಜನರೆಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಶಿಗ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸರಸ್ವತಿ ಗುಡಿಸಾಗರ, ಸರೋಜಾ ದಿಂಡೂರು ಅಸ್ವಸ್ಥಗೊಂಡ ಶಿಕ್ಷಕಿಯರು. ಮಾನವೀಯತೆ ತೋರಿದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.