Site icon Vistara News

Drowned in water : ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಸಾವು

Drowned in water

ಗದಗ : ನೀರು ಕುಡಿಯಲು ಹೋದ ಮಹಿಳೆ ಕಾಲು ಜಾರಿ‌ ಕೃಷಿ ಹೊಂಡಕ್ಕೆ (Drowned in water) ಬಿದ್ದು ಪ್ರಾಣ‌ ಕಳೆದುಕೊಂಡಿದ್ದಾರೆ. ಗದಗ ಜಿಲ್ಲೆಯ (Gadag News) ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು‌ ಗ್ರಾಮದಲ್ಲಿ ಘಟನೆ ನಡೆದಿದೆ. ಗೌರಮ್ಮ ಕರಿಗಾರ (48) ಮೃತ ದುರ್ದೈವಿ.

ಜಮೀನಿಗೆ ಹೋಗಿದ್ದ ಗೌರಮ್ಮ ಬಿಸಿಲಿನ ತಾಪಕ್ಕೆ ಬಾಯಾರಿಕೆ ಆಗಿದೆ ಎಂದು ನೀರು ಕುಡಿಯಲು ಹೋಗಿದ್ದಾರೆ. ಜಮೀನಿ‌ನಲ್ಲಿದ್ದ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದಿದ್ದಾರೆ. ಕೃಷಿ ಹೊಂಡದಿಂದ ಹೊರಬರಲು ಆಗದೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃಷಿ ಹೊಂಡದಲ್ಲಿದ್ದ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಲಕ್ಷ್ಮೇಶ್ವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ‌ ದಾಖಲಾಗಿದೆ.

ಇದನ್ನೂ ಓದಿ: Dead Body Found : ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

ಕ್ಯಾಂಟರ್‌ ಡಿಕ್ಕಿ; ಟೈಯರ್‌ ಅಡಿ ಸಿಲುಕಿ 4 ವರ್ಷದ ಬಾಲಕ ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕನೊಬ್ಬ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಬೆಂಗಳೂರಿನಲ್ಲಿ (Bengaluru News) ನಡೆದ ಭೀಕರ ಅಪಘಾತದಲ್ಲಿ (Road Accident) 4 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಅಶ್ವಿತ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಊರ್ವಶಿ ಥಿಯೇಟರ್ ಸಮೀಪ ಈ ಅಪಘಾತ ಸಂಭವಿಸಿದೆ. ಕ್ಯಾಂಟರ್ ಚಾಲಕನ ಎಡವಟ್ಟಿಗೆ ಅಶ್ವಿತ್‌ ಜೀವ ಬಿಟ್ಟಿದ್ದಾನೆ. ಟ್ಯಾಂಕರ್‌ ವಾಹನವನ್ನು ರಿವರ್ಸ್‌ ತೆಗೆಯುವಾಗ ಅಶ್ವಿತ್‌ಗೆ ಡಿಕ್ಕಿ ಹೊಡೆದಿದೆ. ನಂತರ ಕೆಳಗೆ ಬಿದ್ದ ಅಶ್ವಿತ್‌ ಟೈಯರ್‌ನಡಿ ಸಿಲುಕಿದ್ದಾನೆ. ಚಾಲಕನ ಅಜಾಗರೂಕತೆಯಿಂದ ಅಶ್ವಿತ್‌ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಬಸ್‌ ಏರುವಾಗ ಕೆಳಗೆ ಬಿದ್ದ ಮಹಿಳೆಯ ಕೈ ಅಪ್ಪಚ್ಚಿ

ರಶ್‌ ಇದ್ದ ಬಸ್‌ನಲ್ಲಿ ಹತ್ತಲು ಹೋಗಿ ಮಹಿಳೆಯೊಬ್ಬರು ಬಸ್‌ ಗಾಲಿಗೆ ಬಿದ್ದ ಘಟನೆ ಕೊಪ್ಪಳ ಬಸ್ ನಿಲ್ದಾಣದಲ್ಲಿ ಭಾನುವಾರ ಸಂಜೆ ನಡೆದಿದೆ. ಸಿಂಧನೂರು ಡಿಪೋಗೆ ಸೇರಿದ ಬಸ್‌ನಲ್ಲಿ ಸಂಜೆ ವಿಪರೀತ ರಶ್‌ ಇತ್ತು. ಆ ರಶ್‌ನಲ್ಲಿ ಬಸ್‌ ಹತ್ತಲು ಹೋದ ಮಹಿಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.

ಈ ವೇಳೆ ಚಕ್ರದಡಿಗೆ ಕೈ ಸಿಲುಕಿ ಅಪ್ಪಚ್ಚಿ ಆಗಿದೆ. ಕೊಪ್ಪಳ ಜಿಲ್ಲೆಯ ಸಿದ್ದಾಪುರದ ಖಾಸಿಂಬಿ ಎಂಬ ಮಹಿಳೆ ಗಂಭೀರ ಗಾಯಗೊಂಡಿದ್ದು, ಕೂಡಲೇ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪಳ ನಗರಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version