Site icon Vistara News

Heart Attack : ಜಮೀನು ಕೆಲಸ ಮಾಡುತ್ತಿದ್ದ ನರೇಗಾ ಕಾರ್ಮಿಕ ಹೃದಯಾಘಾತದಿಂದ ಸಾವು

heart attack NREGA worker dies of

ಗದಗ: ನರೇಗಾ ಯೋಜನೆ (NAREGA worker) ಕಾಮಗಾರಿಗೆ ತೆರಳಿದ್ದ ಕೂಲಿ ಕಾರ್ಮಿಕ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾನೆ. ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಬಸಪ್ಪ ಯಲ್ಲಪ್ಪ ಕುರಹಟ್ಟಿ (55) ಮೃತ ದುರ್ದೈವಿ.

ಗ್ರಾಮ ಪಂಚಾಯತ್‌ನಿಂದ ನೀಡಿದ ನರೇಗಾ ಯೋಜನೆ ಕಾಮಗಾರಿ ಅಡಿ ರೈತರ ಜಮೀನಲ್ಲಿ ಬದು ನಿರ್ಮಾಣದ ವೇಳೆ ಎದೆನೋವು ಕಾಣಿಸಿಕೊಂಡಿದೆ. ಎದೆ ಹಿಡಿದುಕೊಂಡು ಬಸಪ್ಪ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಬಸಪ್ಪನ ಹೃದಯದ ಬಡಿತ ನಿಂತು ಹೋಗಿತ್ತು. ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಗದಗದ ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Fire Tragedy: ನೈಟ್‌ ಕ್ಲಬ್‌ನಲ್ಲಿ ಬೆಂಕಿ ಅವಘಡ; 29 ಮಂದಿ ಸಜೀವ ದಹನ

ಕಲಬುರಗಿಯಲ್ಲಿ ನರೇಗಾ ಕಾರ್ಮಿಕನ ಬಲಿ ಪಡಿಯಿತಾ ರಣ ಬಿಸಿಲು!

ಕಲಬುರಗಿ: ನರೇಗಾ ಕೂಲಿ ಕೆಲಸ ಮಾಡುವಾಗ (NREGA worker) ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ (Kalaburagi News) ಆಳಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ಸಮಗಾರ (42) ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಮೃತಪಟ್ಟವರು.

ಮೇಲ್ನೋಟಕ್ಕೆ ರಣ ಬಿಸಿಲಿಗೆ (summer heat) ಶರಣಪ್ಪ ಸಮಗಾರ ಬಲಿಯಾದರಾ ಎಂಬ ಅನುಮಾನವಿದೆ. ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶರಣಪ್ಪರ ಪತ್ನಿ ಶಂಕಿಸಿದ್ದಾರೆ. ಸದ್ಯ ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಸಾವನ್ನಪ್ಪಿರಬಹುದು ಶಂಕಿಸಲಾಗಿದೆ. ಸದ್ಯ ನರೋಣಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಶ್ರೀಶೈಲ ಪಾದಯಾತ್ರೆ ವೇಳೆ ನಿಂತು ಹೋಯ್ತು ಯುವಕನ ಹೃದಯದ ಬಡಿತ

ರಾಯಚೂರು: ಶ್ರೀಶೈಲ ಪಾದಯಾತ್ರೆ‌ಗೆ (Srisailam Padayatra) ಹೊರಟ್ಟಿದ್ದ ಯುವಕನೊರ್ವ ದಾರಿ ಮಧ್ಯೆ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ರಾಯಚೂರಿನ ಮಾನ್ವಿ ತಾಲೂಕಿನ ಚಿಕ್ಕ ಕೊಟ್ನೆಕಲ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ 22 ವರ್ಷದ ಪಾದಯಾತ್ರಾರ್ಥಿ ವಿಶ್ರಾಂತಿಗಾಗಿ ತಂಗಿದ್ದಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಮ್ಮಡ ಗ್ರಾಮದ ಶ್ರೀಶೈಲ ದಡೂತಿ ಮೃತ ದುರ್ದೈವಿ.

ಶ್ರೀಶೈಲ ದಡೂತಿ ಪ್ರತಿ ವರ್ಷದಂತೆ ಗ್ರಾಮಸ್ಥರ ಜತೆಗೂಡಿ ಶ್ರೀಶೈಲಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಕಳೆದ ಸೋಮವಾರದಂದು ಮನೆಯಿಂದ ಪಾದಯಾತ್ರೆ ಹೊರಟ ಶ್ರೀಶೈಲ ದಡೂತಿ ಭಾನುವಾರ ಮಾನ್ವಿ ತಾಲೂಕಿನ ಚಿಕ್ಕಕೊಟ್ನೆಕಲ್ ಗ್ರಾಮಕ್ಕೆ ತಲುಪಿದ್ದರು.

ಬಿಸಿಲಿನ ತಾಪಕ್ಕೆ ಸುಸ್ತಾದ ಕಾರಣಕ್ಕೆ ದಾರಿ ಮಧ್ಯೆ ವಿಶ್ರಾಂತಿಗಾಗಿ ಕುಳಿತ್ತಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಳಿದ ಪಾದಯಾತ್ರಾರ್ಥಿಗಳಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ತಾಲೂಕು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version