ನವ ದೆಹಲಿ: ಗದಗ ಮೂಲದ ಹೋಟೆಲ್ ಉದ್ಯಮಿ ಕಾವೇಂಶ್ರೀ ಅವರ ಕಲಾ ಪೋಷಣೆಯ ತಪಸ್ಸು ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ (Mann Ki Baat) ಮೆಚ್ಚುಗೆ ವ್ಯಕ್ತಪಡಿಸಿದರು.
ಕಾವೇಂಶ್ರಿ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ) ಅವರು ಈ ಹಿಂದೆ ಗದಗ ರೆಸ್ಟೋರೆಂಟ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಕಾವೇಂಶ್ರೀ ಅವರು ಕಳೆದ 1996ರಲ್ಲಿ ಕಲಾ ಪೋಷಣೆಯ ಸಲುವಾಗಿ ಕಲಾ ಚೇತನ ವೇದಿಕೆಯನ್ನು ಸ್ಥಾಪಿಸಿದರು. ಇದು ಕಲೆ ಮತ್ತು ಸಂಸ್ಕೃತಿಯ ರಕ್ಷಣೆಗೋಸ್ಕರ ಕಳೆದ 26 ವರ್ಷಗಳಿಂದ ಕಲಾ ಚೇತನ ವೇದಿಕೆಯ ಮೂಲಕ ತಪೋ ಸದೃಶ ಕೊಡುಗೆ ನೀಡಿದ್ದಾರೆ. ಅನೇಕ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಪೋಷಣೆಯ ಕೆಲಸ ಮಾಡಿದ್ದಾರೆ. ಸ್ಥಳೀಯವಾಗಿ ಸಂಸ್ಕೃತಿಯ ರಕ್ಷಣೆಗೆ ಅವರ ಕೊಡುಗೆ ದೊಡ್ಡದು ಎನ್ನುತ್ತಾರೆ ಮೋದಿ ಎಂದು ಶ್ಲಾಘಿಸಿದರು.
1995ರಲ್ಲಿ ಧಾರವಾಡದಲ್ಲಿ ಹೊಸ ಸಾಂಸ್ಕೃತಿಕ ಸಂಘಟನೆಯನ್ನು ಸ್ಥಾಪಿಸುವ ಚಿಂತನೆ ನಡೆದಾಗ, ಕಾವೇಂಶ್ರಿ ಅವರು ಉತ್ಸಾಹದಿಂದ ಕಲಾ ಚೇತನ ವೇದಿಕೆಯನ್ನು ರಚಿಸಿದರು. ಸಾಂಸ್ಕೃತಿಕ ವಿದ್ಯಮಾನಗಳ ಬಗ್ಗೆ ನಿರಂತರ ಲೇಖನಗಳನ್ನೂ ಬರೆದಿದ್ದರು.