Site icon Vistara News

Medical Negligence : ಹುಟ್ಟಿದ ಮರುಕ್ಷಣವೇ ಜೀವ ಬಿಟ್ಟ ಅವಳಿ ಮಕ್ಕಳು; ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯೂ ಸಾವು

Mother dies with twins Negligence on the part of doctors

ಗದಗ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ, ಅವಳಿ ಕಂದಮ್ಮಗಳು ಮೃತಪಟ್ಟಿವೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿರುವ ಕಾರೊಡಗಿಮಠ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಕೇಳಿ (Medical Negligence) ಬಂದಿದೆ. ಆಸ್ಪತ್ರೆ ಎದುರು ಮೃತಳ ಸಂಬಂಧಿಕರು, ಸ್ನೇಹಿತರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಕುಟುಂಬಸ್ಥರ ಪ್ರತಿಭಟನೆ

ಕೊಪ್ಪಳದ ಕುಕನೂರ ತಾಲೂಕಿನ ವಿರುಪಾಪೂರ ಗ್ರಾಮದ‌ ನಂದಿನಿ ಎಂಬಾಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ನಂದಿನಿಗೆ ಫೆಬ್ರವರಿ 2ರಂದು ಸಿ-ಸೆಕ್ಷನ್‌ ಮಾಡಿ ಹೆರಿಗೆ ಮಾಡಿಸಿದ್ದರು. ಆದರೆ ದುರಾದೃಷ್ಟ ಎಂಬಂತೆ ಹೆರಿಗೆ ಬಳಿಕ ಅವಳಿ -ಜವಳಿ ಮಕ್ಕಳು ಮೃತಪಟ್ಟಿದ್ದವು. ಇದರಿಂದ ನಂದಿನಿ ಹಾಗೂ ಕುಟುಂಬಸ್ಥರು ತೀವ್ರ ನೊಂದಿದ್ದರು.

ಇದನ್ನೂ ಓದಿ: Fraud Case : ಸ್ನೇಹಿತರೇ ಸುಲಿಗೆಕೋರರು; ಖಾಸಗಿ ಫೋಟೊ ಇದೆಯೆಂದು ಟೆಕ್ಕಿಯಿಂದ ಲಕ್ಷ ಲಕ್ಷ ಲೂಟಿ!

ಆದರೆ ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿ ನಂದಿನಿಗೆ ಲೋ ಬಿಪಿ ಆಗಿತ್ತು. ಹೀಗಾಗಿ ಕುಟುಂಬಸ್ಥರು ಬಾಗಲಕೋಟೆಯ ಬಾದಾಮಿ ಖಾಸಗಿ ಆಸ್ಪತ್ರೆಗೆ ರವಾಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ (ಫೆ.5) ನಂದಿನಿ ಮೃತಪಟ್ಟಿದ್ದಾರೆ. ಸಿಜೆರಿಯನ್ ವೇಳೆ ರಕ್ತದ ವ್ಯವಸ್ಥೆ ಮಾಡದೇ ಹೆರಿಗೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ರಕ್ತ ಕೊರತೆಯಿಂದಲೇ ಬಾಣಂತಿ ಮೃತಪಟ್ಟಿದ್ದಾಗಿ ಆಕ್ರೋಶಿಸಿದ್ದಾರೆ. ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Children Care: ನಿಮ್ಮ ಮಕ್ಕಳಿಗೆ ಈ ಎಲ್ಲ ರುಚಿಕರ ತಿನಿಸುಗಳನ್ನು ಕೊಡುತ್ತಿದ್ದೀರಾ? ಹುಷಾರು!

ಮಕ್ಕಳಿಗೆ ನಿತ್ಯವೂ (Children Care) ಶಾಲೆಗೆ ಟಿಫಿನ್‌ ಬಾಕ್ಸಿಗೆ ಏನನ್ನು ಮಾಡಿಕೊಡಲಿ ಎಂಬುದು ಪ್ರತಿ ಅಮ್ಮಂದಿರ ಮಿಲಿಯನ್‌ ಡಾಲರ್‌ ಪ್ರಶ್ನೆ. ಮಕ್ಕಳಿಗೆ ನಿತ್ಯವೂ ಬಗೆಬಗೆಯ ತಿನಿಸುಗಳೇ ಬೇಕು. ಮಕ್ಕಳು ಆರೋಗ್ಯಕರವಾಗಿಯೂ ರುಚಿಕರವಾಗಿಯೂ ತಿನ್ನಬೇಕು ಎಂಬ ಉದ್ದೇಶದಿಂದ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರಗಳನ್ನು ನೀಡುತ್ತಿದ್ದೇವೆಂಬ ಯೋಚನೆಯಲ್ಲಿ ಅದನ್ನು ರುಚಿಯಾಗಿಸುವ ಭರದಲ್ಲಿ ಸಂಸ್ಕರಿಸಿದ ಆಹಾರಗಳನ್ನು ಮಕ್ಕಳಿಗೆ ಎಳವೆಯಲ್ಲಿಯೇ ತಿನ್ನಿಸಲು ಆರಂಭಿಸುತ್ತೇವೆ. ಪರಿಣಾಮ ಈ ರುಚಿಯಿಂದ ಮಕ್ಕಳೂ ಬೇರೆ ಆಹಾರದ ರುಚಿಗೆ ಒಗ್ಗುವುದಿಲ್ಲ.

ಪಚನಕ್ರಿಯೆ ಸೂಕ್ಷ್ಮ

ಮಕ್ಕಳ ಪಚನಕ್ರಿಯೆ ಬಹಳ ಸೂಕ್ಷ್ಮವಾದುದ್ದು. ಇಂಥ ಸಮಯದಲ್ಲಿ ಅವರಿಗೆ ಉತ್ತಮ ಆಹಾರ ನೀಡುವುದು ಸೂಕ್ತ. ಬೆಳವಣಿಗೆಗೆ ಪೂರಕವಾಗಿರುವ, ಮಕ್ಕಳ ಮೂಳೆ, ಮಿದುಳು ಮತ್ತಿತರ ಅಂಗಗಳನ್ನು ಆರೋಗ್ಯಕರವಾಗಿಸುವ ಆಹಾರ ಅತ್ಯಂತ ಅಗತ್ಯ. ಆದರೆ, ಮಕ್ಕಳನ್ನು ಆರೋಗ್ಯವಾಗಿಸುವ ಭರದಲ್ಲಿ, ಮಕ್ಕಳ ಈ ಪಚನಕ್ರಿಯೆಯನ್ನೇ ದುರ್ಬಲವಾಗಿಸುವ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆಹಾರವನ್ನು ನೀಡುವುದು ಸಾಮಾನ್ಯವಾಗಿದೆ. ಬನ್ನಿ, ಮಕ್ಕಳಿಗೆ ಯಾವೆಲ್ಲ ಆಹಾರವನ್ನು ನೀಡುವುದನ್ನು ಪೋಷಕರು ನಿಲ್ಲಿಸಬೇಕು ಅಥವಾ ಆದಷ್ಟೂ ಕಡಿಮೆ ಮಾಡಬೇಕು ಎಂಬುದನ್ನು ನೋಡೋಣ.

ಚಾಕೋಲೇಟ್‌ ಮಿಲ್ಕ್

ಡೈರಿ ಉತ್ಪನ್ನದ ಜೊತೆಗೆ ಸಕ್ಕರೆಯೂ ಬೆರೆತರೆ ಜೀರ್ಣವಾಗುವುದು ನಿಧಾನ. ಜೊತೆಗೆ ಇದು ಅಸಿಡಿಟಿಯನ್ನೂ ತರುವಂಥದ್ದು. ವಿವಿಧ ಪೇಯಗಳ ಹೆಸರಿನಲ್ಲಿ ನೀಡುವ ಚಾಕೋಲೇಟ್‌ ಹಾಲಿಗಿಂತ ಬರೀ ಹಾಲೇ ಉತ್ತಮ.

ಮಯೋನೀಸ್‌

ಈ ಮಯೋನೀಸ್‌ ಎಂಬ ಆಹಾರವನ್ನು ಸಿಕ್ಕಸಿಕ್ಕಲೆಲ್ಲ ಮಕ್ಕಳ ಆಹಾರಕ್ಕೆ ಸೇರಿಸಿ ನೀಡುವುದು ಖಂಡಿತಾ ಒಳ್ಳೆಯದಲ್ಲ. ಸ್ಯಾಂಟ್‌ವಿಚ್‌ಗಳಲ್ಲಿ ಮಕ್ಕಳಿಗೆ ಇವನ್ನು ಆಗಾಗ ನೀಡುತ್ತಿದ್ದರೆ, ಗಂಭೀರವಾಗಿ ಯೋಚಿಸುವುದು ಅಗತ್ಯ. ಯಾಕೆಂದರೆ ಇದು ಖಂಡಿತ ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ಎಣ್ಣೆ ಇರುವುದರಿಂದ ಮಕ್ಕಳ ಆರೋಗ್ಯಕ್ಕೆ ಖಂಡಿತವಾಗಿ ಒಳ್ಳೆಯದನ್ನು ಮಾಡದು. ಇದರ ಬದಲಾಗಿ ಚೀಸ್‌, ಪನೀರ್‌ ಬಳಸಿ. ಅಥವಾ ಮನೆಯಲ್ಲೇ, ಎಣ್ಣೆಯಿಲ್ಲದೆ ಬೇರೆ ವಿಧಾನಗಳಿಂದ ಮೆಯೋನೀಸ್‌ ಮಾಡಿಕೊಂಡು (ಮೊಸರಿನಿಂದ ಅಥವಾ ಗೋಡಂಬಿ, ಬಾದಾಮಿ ಅಥವಾ ಬೀಜಗಳಿಂದ) ಕೊಡಬಹುದು.

ನಗ್ಗೆಟ್ಸ್‌

ಮಕ್ಕಳಿಗೆ ಆಗಾಗ ಬಾಕ್ಸ್‌ನಲ್ಲಿ ರೆಡಿ ಟು ಈಟ್‌ ವಸ್ತುಗಳನ್ನೂ ನೀಡುವ ಅಭ್ಯಾಸ ಬಹಳ ಹೆತ್ತವರಿಗಿದೆ. ನಗ್ಗೆಟ್ಸ್‌, ಚೀಸ್‌ ಬಾಲ್ಸ್‌ ಮತ್ತತರ ಆಕರ್ಷಕ ತಿನಿಸುಗಳು ಅಂಗಡಿಗಳಲ್ಲಿ ರೆಡಿಯಾಗಿ ಸಿಗುತ್ತಿದ್ದು, ಅವುಗಳನ್ನು ಕೇವಲ ಕರಿಯುವುದಷ್ಟೇ ಬಾಕಿ ಇರುತ್ತದೆ. ಇಂಥದ್ದನ್ನು ತಂದು ಕರಿದು ಮಕ್ಕಳಿಗೆ ತಿನ್ನಿಸುವ ಅಭ್ಯಾಸವಿದ್ದರೆ ಖಂಡಿತ ಬಿಡಿ. ಇದು ಆರೋಗ್ಯಕ್ಕೆ ಹಾನಿಕರ.

ಲಾಲಿಪಾಪ್‌

ಬಣ್ಣಬಣ್ಣದ ಆಕರ್ಷಕವಾದ ಲಾಲಿಪಾಪ್‌ಗಳು ಮಕ್ಕಳಿಗೆ ಅತ್ಯಂತ ಪ್ರಿಯವಾದ ಆಹಾರ. ಆದರೆ, ಇದರಲ್ಲಿ ಮಕ್ಕಳಿಗೆ ಆಕರ್ಷಕವಾಗಿ ಕಾಣಲು ಅತ್ಯಂತ ಹೆಚ್ಚು ಕೃತಕ ಬಣ್ಣಗಳನ್ನೂ, ಅತಿಯಾದ ಸಕ್ಕರೆಯನ್ನೂ ಬಳಸಿರುತ್ತಾರೆ ಎಂಬುದನ್ನು ನೆನಪಿಡಿ. ಇದನ್ನು ಮಕ್ಕಳು ಗಂಟೆಗಟ್ಟಲೆ ಬಾಯೊಳಗೆ ಇಟ್ಟುಕೊಳ್ಳುವುದರಿಂದ ಮಕ್ಕಳ ಹಲ್ಲಿಗೆ ಹಾಗೂ ಆರೋಗ್ಯಕ್ಕೆ ಎರಡಕ್ಕೂ ಹೆಚ್ಚು ಹಾನಿ ಉಂಟುಮಾಡಬಲ್ಲದು. ಹಾಗಾಗಿ, ಇದನ್ನು ನಿತ್ಯವೂ ತಿನಿಸುವ ಅಭ್ಯಾಸ ಮಾಡಬೇಡಿ.

ಹಸಿಹಾಲು

ಕಾಯಿಸದ ಹಾಲು ಮಕ್ಕಳ ಹೊಟ್ಟೆ ಕೆಡಿಸುವ ಪ್ರಮುಖ ಆಹಾರಗಳಲ್ಲಿ ಒಂದು. ಹಾಗಾಗಿ ಕುದಿಸದ ಹಾಲನ್ನು ಮಕ್ಕಳಿಗೆ ನೀಡಬೇಡಿ.

ಸ್ಮೈಲಿಗಳು

ಯಾವ ಮಕ್ಕಳಿಗೆ ಸ್ಮೈಲಿ ಎಂದರೆ ಇಷ್ಟವಿಲ್ಲ ಹೇಳಿ. ನಗುವ ಇಮೋಜಿಯ ಆಲೂಗಡ್ಡೆಯ ಫ್ರೈಗಳೆಂದರೆ ಮಕ್ಕಳಿಗೆ ಇಷ್ಟ. ರೆಡಿ ಟು ಈಟ್‌ ಮಾದರಿಯಲ್ಲಿ ಈ ಸ್ಮೈಲಿಗಳೂ, ಫ್ರೆಂಚ್‌ ಫ್ರೈಸ್‌ಗಳೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ, ಇವು ಖಂಡಿತಾ ಮಕ್ಕಳಿಗೆ ಒಳ್ಳೆಯದಲ್ಲ. ಇದರ ಬದಲು ತಾಜಾ ಆಲೂಗಡ್ಡೆಯಿಂದ ಮನೆಯಲ್ಲೇ ಫ್ರೈಸ್‌ ಮಾಡಿಕೊಡಿ.

ನೂಡಲ್‌ಗಳು

ಮಕ್ಕಳಿಗೆ ಇಷ್ಟವಾಗುವಂತೆ ಐದೇ ನಿಮಿಷದಲ್ಲಿ ಫಟಾಫಟ್‌ ಮಾಡಿ ಕೊಡಿ ಎಂಬ ಲೇಬಲ್‌ ಹೊತ್ತ ಹಲವಾರು ದಿಢೀರ್‌ ನೂಡಲ್‌ಗಳು, ಪಾಸ್ತಾಗಳ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ, ನಿತ್ಯವೂ ಇಂಥ ಆಹಾರಗಳ ಸೇವನೆ ಮಕ್ಕಳು ಮಾಡದಂತೆ ನೀವೇ ಜಾಗ್ರತೆ ವಹಿಸಿ. ಇವುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿ ತರುವ ಬದಲು ನೀವೇ ಮನೆಯಲ್ಲಿ ಮಾಡಿ ಕೊಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version