Site icon Vistara News

RSS ಮೂಲ ಕೆದಕುವ ಸಿದ್ದರಾಮಯ್ಯ ಅವರ ರಾಜಕೀಯ ಮೂಲ ಪ್ರಶ್ನಿಸಿದ ಸಿ.ಸಿ ಪಾಟೀಲ್‌

ಗದಗ: ಸಿದ್ದರಾಮಯ್ಯ ಅವರು ಆರೆಸ್ಸೆಸ್‌ನ್ನು ಟೀಕೆ ಮಾಡುವಷ್ಟು ದೊಡ್ಡವರೇನಲ್ಲ. ಇಷ್ಟೆಲ್ಲ ಆರೆಸ್ಸೆಸ್‌ ಮೂಲ ಕೆದಕುವ ಅವರ ರಾಜಕೀಯ ಮೂಲ ಯಾವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್‌ ಪ್ರಶ್ನಿಸಿದ್ದಾರೆ.

ʻʻಆರ್‌.ಎಸ್‌.ಎಸ್‌ ಬಿಜೆಪಿಗೆ ಸಲಹೆ‌ ಸೂಚನೆ ನೀಡುತ್ತದೆ. ನ್ಯಾಯಾಧಾರಿತ ರಾಜಕಾರಣ ಮಾಡಲು ಹೇಳುತ್ತದೆ,ʼʼ ಎಂದ ಸಿ.ಸಿ. ಪಾಟೀಲ್‌, ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕರಾದ ನಿತಿನ್ ಗಡ್ಕರಿ, ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಎಲ್ಲರೂ ಆರೆಸ್ಸೆಸ್‌ ಸ್ವಯಂಸೇವಕರೆ. ಅಮಿತ್ ಶಾ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಕೂಡ ಆರ್‌.ಎಸ್‌.ಎಸ್‌ ಸಂಘದವರುʼ ಎಂದು ಹೇಳಿದರು.

ʻʻಸಿದ್ದರಾಮಯ್ಯನವರು ಹಿರಿಯರು. ಹಿರಿಯರ ಬಾಯಲ್ಲಿ ಇಂತಹ ಮಾತು ಬರಬಾರದು. ಅವರ ಮಾತಿಗೆ ಒಂದು ಗೌರವ ಇರಬೇಕು. ಎಲ್ಲರಂತೆ ಅವರೂ ಮಾತನಾಡುವುದು ಅವರ ಘನತೆಗೆ ಶೋಭೆ ತರುವುದಿಲ್ಲʼʼ ಎಂದು ಸಿ.ಸಿ.ಪಾಟೀಲ್‌ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ ಸಿ.ಸಿ ಪಾಟೀಲ್‌, ʻʻʻಪ್ರಸ್ತುತ ಕಾಂಗೆಸ್‌ ಪಕ್ಷದಲ್ಲಿ ಎರಡು ಬಣಗಳಿವೆ. ಒಂದರಲ್ಲಿ ಡಿ.ಕೆ.ಶಿವಕುಮಾರ್‌ ಅವರ ರಾಜ್ಯಭಾರ. ಅವರು ಸೊನಿಯಾ ಗಾಂಧಿ ಅವರಿಗೆ ಹತ್ತಿರವಿದ್ದಾರೆ. ಆದರೆ ಮತ್ತೊಂದು ಬಣದಲ್ಲಿ ಸಿದ್ದರಾಮಯ್ಯ ಇದ್ದಾರೆ. ಅವರು ಸೊನಿಯಾ ಗಾಂಧಿಯವರಿಗೆ ಹತ್ತಿರವಾಗುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಅವರು ಆರ್‌ಎಸ್‌ಎಸ್‌ ಸಂಸ್ಥೆಯ ಬಗ್ಗೆ ಮಾತನಾಡುತ್ತಾರೆ. ಹೀಗೆ ಮಾತನಾಡುವುದರಿಂದ ಸಿದ್ದರಾಮಯ್ಯನವರು ಸೋನಿಯಾ ಗಾಂಧಿ ಅವರಿಗೆ ಹತ್ತಿರವಾಗಬಹುದು ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ,ಎಂದು ಸಿ.ಸಿ ಪಾಟೀಲ್‌ ಹೇಳಿದ್ದಾರೆ.

Exit mobile version