ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ( MLA nayana motamma) ಅವರ ಆಪ್ತ ತೇಜಸ್ ಎಂಬಾತ ಜೂಜಾಟದಲ್ಲಿ (Gambling Case) ಸಿಕ್ಕಿಬಿದ್ದಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮಾಜಿ ಯೂತ್ ಕಾಂಗ್ರೆಸ್ ಮುಖಂಡನಾಗಿರುವ ತೇಜಸ್ ಸಿ.ಆರ್ ಸಿಕ್ಕಿಬಿದ್ದಿದ್ದಾನೆ.
ಆಲ್ದೂರು ಸಮೀಪದ ಕಂಚಿಕಲ್ ದುರ್ಗ ಗ್ರಾಮದ ಬಳಿ ಮಧು ಎಂಬುವರ ಎಸ್ಟೇಟ್ಗೆ ಹೋಗುವ ಸಾರ್ವಜನಿಕ ಪ್ರದೇಶದಲ್ಲಿ ಜೂಜು ಆಡುತ್ತಿದ್ದರು. ತೇಜಸ್ ಸುಮಾರು 15 ಜನರ ಜತೆ ಅಂದರ್-ಬಾಹರ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ಸೆನ್ ಇನ್ಸ್ಪೆಕ್ಟರ್ ಗವಿರಾಜ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಈ ವೇಳೆ ತೇಜಸ್ ಸೇರಿ ಎಲ್ಲರನ್ನೂ ವಶಕ್ಕೆ ಪಡೆದು, 1,53,000 ರೂ. ಹಣ, ಮೂರು ಕಾರು, 10 ಮೊಬೈಲ್ಗಳನ್ನು ಸೀಜ್ ಮಾಡಲಾಗಿದೆ.
ತವರು ಮನೆ ಸೇರಿದ್ದಕ್ಕೆ ಸಿಟ್ಟು; ಪತ್ನಿ ಮನೆಗೆ ಮಾಟ ಮಾಡಿಸಿದ ಅಳಿಯ!
ಚಿಕ್ಕಮಗಳೂರು : ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಚಿಕ್ಕಮಗಳೂರಿನ (Chikkamagaluru News) ದಂಪತಿ ಗಲಾಟೆಯು ಮಾಟ-ಮಂತ್ರಕ್ಕೆ (Black Magic) ತಲುಪಿದೆ. ಸೇಡು ತೀರಿಸಿಕೊಳ್ಳಲು ಪತಿರಾಯನೊಬ್ಬ, ಪತ್ನಿ ಮನೆಗೆ ಮಾಟ ಮಾಡಿಸಿರುವ ಘಟನೆ ಮೂಡಿಗೆರೆಯ ತಾಲೂಕಿನ ಮತ್ತಿ ಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗುರುಮೂರ್ತಿ ಎಂಬಾತ ಈ ಕೃತ್ಯವೆಸಗಿದ್ದಾನೆ. ಮರಸಣಿಗೆ ಗ್ರಾಮದ ಗುರುಮೂರ್ತಿ ಸುಮಿತ್ರಾ ಎಂಬಾಕೆಯನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮದುವೆಯಾದ ದಿನದಿಂದಲ್ಲೂ ಗಂಡ- ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು.
ಇವರಿಬ್ಬರ ಗಲಾಟೆ ಸಂಸಾರವು ರಾಜಿ- ಪಂಚಾಯತಿಗೂ ಹೋಗಿತ್ತು. ಆದರೂ ಯಾವುದೆ ಪ್ರಯೋಜನವಾಗಲಿಲ್ಲ. ದಾಂಪತ್ಯ ಜೀವನಕ್ಕೆ ಬೇಸತ್ತ ಸುಮಿತ್ರಾ ಒಂದು ತಿಂಗಳ ಹಿಂದೆ ಗುರುಮೂರ್ತಿ ಜತೆಗೆ ಮನಸ್ತಾಪವಾಗಿ ಜಗಳವಾಗಿದೆ. ಹೀಗಾಗಿ ಮತ್ತೆ ಜಗಳವಾದ ಕಾರಣ ಸುಮಿತ್ರಾ ಅಣ್ಣನ ಮನೆ ಸೇರಿದ್ದಳು.
ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಕೋಪಗೊಂಡ ಗುರುಮೂರ್ತಿ ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಸುಮಿತ್ರಾಳ ಅಣ್ಣ ಮನೆ ಮುಂದೆ ಬಂದಿದ್ದಾನೆ. ಪತ್ನಿಯೊಂದಿಗೆ ಗಲಾಟೆ ಮಾಡಿ ಬಳಿಕ ಸುಮಿತ್ರಾ ಅಣ್ಣನಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ನಂತರ ಯಾವುದೋ ಪ್ರಾಣಿ ಬಲಿ ಕೊಟ್ಟು ವಾಮಾಚಾರ ಮಾಡಿಸಿದ್ದಾನೆ ಎಂದು ಸುಮಿತ್ರಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಸುಮಿತ್ರಾ ಅಣ್ಣ ಸತೀಶ್ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ