Site icon Vistara News

Ganesh Chaturthi 2022 | ಬೆಂಗಳೂರಿನ ಗೊಲ್ಲಹಳ್ಳಿಯ ಸಿದ್ದಿ ವಿನಾಯಕನಿಗೆ ಅದ್ಧೂರಿ ಪೂಜೆ

Ganesh Chaturthi 2022

ಬೆಂಗಳೂರು: ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬವನ್ನು (Ganesh Chaturthi 2022) ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಅದರಂತೆಯೇ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೊಲ್ಲಹಳ್ಳಿಯ ಬಾಲಾಜಿ ನಗರದಲ್ಲಿನ ಶ್ರೀ ಸಿದ್ದಿಮಹಾಗಣಪತಿ ದೇವಾಲಯದಲ್ಲಿ ಬುಧವಾರ ಮುಂಜಾನೆಯಿಂದಲೇ ವಿಶೇಷ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.

ಗಣೇಶೋತ್ಸವ ಹಿನ್ನೆಲೆ ದೇವಾಲಯವನ್ನು ಹೂವು ಹಾಗೂ ದ್ರಾಕ್ಷಿಯಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಜತೆಗೆ ವಿಶೇಷ ಅಭಿಷೇಕ ಸಹಿತ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. 17 ವರ್ಷಗಳ ಹಿಂದೆ ಶ್ರೀಧರ್ ರೆಡ್ಡಿ ಎಂಬುವವರು ದೇವಾಲಯವನ್ನು ನಿರ್ಮಾಣ ಮಾಡಿದ್ದು, ಪ್ರತಿ ವರ್ಷ ಗಣೇಶ ಚತುರ್ಥಿಯಂದು ಕುಟುಂಬದವರು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

ಶ್ರೀ ಸಿದ್ದಿಮಹಾಗಣಪತಿ ದೇವಾಲಯಕ್ಕೆ ಎಲೆಕ್ಟ್ರಾನಿಕ್ ಸಿಟಿ, ವೀರಸಂದ್ರ, ಹೆಬ್ಬಗೋಡಿ, ದೊಡ್ಡತೋಗೂರು ಸೇರಿದಂತೆ ಹತ್ತಾರು ಊರುಗಳಿಂದ ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ.‌ ಬಂದಂತಹ ಭಕ್ತಾಧಿಗಳಿಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರಸಾದ ವಿನಿಯೋಗವನ್ನು ಹಮ್ಮಿಕೊಳ್ಳಲಾಗುತ್ತದೆ.

17 ವರ್ಷದ ಹಿಂದೆ ವೀರಸಂದ್ರ, ಎಲೆಕ್ಟ್ರಾನಿಕ್‌ ಸಿಟಿ ಸುತ್ತಮುತ್ತ ದೇವಸ್ಥಾನ ಮಂದಿರ ಇರಲಿಲ್ಲ. ಹೀಗಾಗಿ ಕುಟುಂಬಸ್ಥರು, ಸಂಗಡಿಗರು ಸೇರಿ ಸಂಕಲ್ಪ ಮಾಡಿಕೊಂಡು ಗಣೇಶನ ಪ್ರತಿಷ್ಠಾಪನೆಯೊಂದಿಗೆ ದೇವಸ್ಥಾನ ನಿರ್ಮಾಣಕ್ಕೆ ಕೈ ಹಾಕಿದೆವು. ಅಂದಿನಿಂದ ಈವರೆಗೂ ಭಗವಂತನ ಅನುಗ್ರಹದೊಂದಿಗೆ ದೇವಸ್ಥಾನ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಮೊದಮೊದಲು 200 ಜನಕ್ಕೆ ವಿತರಿಸುತ್ತಿದ್ದ ಪ್ರಸಾದ ಈಗ 10 ಸಾವಿರ ಜನರಿಗೆ ನೀಡುವಷ್ಟು ಬೆಳೆದುನಿಂತಿದೆ. ಅಲ್ಲದೆ, ಸಾವಿರಾರು ಜನ ಮಹಾಗಣಪತಿಯ ಅನುಗ್ರಹಕ್ಕಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಲೇ ಇದ್ದು, ಭಕ್ತಿಯೊಂದಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
| ಶ್ರೀಧರ್‌ರೆಡ್ಡಿ, ದೇವಸ್ಥಾನ ನಿರ್ಮಾತೃ

ಇದನ್ನೂ ಓದಿ | Ganesh Chaturthi 2022 | ಮಂಡ್ಯದಲ್ಲಿ ಮುಸ್ಲಿಂರಿಂದ ಭಾವೈಕ್ಯತೆಯ ಗಣೇಶ ಹಬ್ಬ ಆಚರಣೆ

Exit mobile version