Site icon Vistara News

Ganesh Chaturthi | ಬೆಂಗಳೂರಿನಲ್ಲಿ 2 ದಿನದಲ್ಲಿ 8 ಸಾವಿರ ಟನ್ ಹಸಿ ತ್ಯಾಜ್ಯ; ಈಗ ವಿಲೇವಾರಿ ವರಿ!

ತ್ಯಾಜ್ಯ ಉತ್ಪಾದನೆ

ಬೆಂಗಳೂರು: ಮಳೆ ಹಾಗೂ ಗಣೇಶ ಹಬ್ಬದ ಪರಿಣಾಮ ನಗರದಲ್ಲಿ ಟನ್‌ಗಟ್ಟಲೇ ತ್ಯಾಜ್ಯ ಉತ್ಪಾದನೆಯಾಗಿದೆ. ಬುಧವಾರ ಮತ್ತು ಗುರುವಾರ ನಗರದಲ್ಲಿ ಎಂದಿಗಿಂತಲೂ ಸುಮಾರು 500 ಟನ್‌ ಹಸಿ ತ್ಯಾಜ್ಯ ಹೆಚ್ಚುವರಿಯಾಗಿ ಉತ್ಪಾದನೆಯಾಗಿದ್ದು, ಒಟ್ಟು 8 ಸಾವಿರ ಟನ್‌ ತ್ಯಾಜ್ಯ ಸಂಗ್ರಹಣೆಯಾಗಿದೆ.

ಸಾಮಾನ್ಯ ದಿನಗಳಲ್ಲಿ 3,500 ಟನ್‌ಗೂ ಹೆಚ್ಚಿನ ಹಸಿ ತ್ಯಾಜ್ಯ ನಿತ್ಯ ಉತ್ಪಾದನೆಯಾಗುತ್ತದೆ. ಆದರೆ, ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಕೆ.ಆರ್.ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ, ವಿವಿಧ ಮಾರುಕಟ್ಟೆ ಸೇರಿ ಮನೆಗಳಲ್ಲಿ ಹೆಚ್ಚುವರಿಯಾಗಿ 500 ಟನ್ ತ್ಯಾಜ್ಯ ಉತ್ಪಾದನೆಯಾಗಿದ್ದು, ಒಟ್ಟು 6 ಸಾವಿರ ಟನ್ ಹಸಿ ತ್ಯಾಜ್ಯ ಸಂಗ್ರಹಣೆಯಾಗಿದೆ.

ಗಣೇಶ ವಿಸರ್ಜನೆ ಸ್ಥಳ, ಕಲ್ಯಾಣಿ, ಸಂಚಾರಿ ಟ್ಯಾಂಕ್‌ಗಳ ಬಳಿ ಗಣೇಶ ಪೂಜೆಗೆಂದು ಬಳಸಿದ ಹೂವು, ಬಾಳೆ ದಿಂಡು, ಮಾವಿನ ಎಲೆ ಮತ್ತಿತರ ಸಾಮಗ್ರಿಗಳನ್ನು ಬಿಸಾಡಿರುವುದರಿಂದ ಹೆಚ್ಚಿನ ತ್ಯಾಜ್ಯ ಉತ್ಪಾದನೆಯಾಗಿದೆ. ಕಳೆದೆರಡು ದಿನಗಳಿಂದ ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ತ್ಯಾಜ್ಯ ಸಂಗ್ರಹದಲ್ಲೂ ವ್ಯತ್ಯಯವಾಗಿದೆ. ಬಹುತೇಕರು ಪೌರ ಕಾರ್ಮಿಕರು ಬುಧವಾರ ಹಬ್ಬಕ್ಕಾಗಿ ರಜೆಯಲ್ಲಿದ್ದ ಕಾರಣ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಲ್ಲಿ ವ್ಯತ್ಯಯವಾಗಿದೆ.

೨ ದಿನದಲ್ಲಿ ಒಂದೇ ಬಾರಿಗೆ ೮ ಸಾವಿರ ಟನ್‌ಗೂ ಹೆಚ್ಚಿನ ಹಸಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಬೇಕಾಗಿದೆ. ಇದರಿಂದ ಬಿಬಿಎಂಪಿ ಪೌರಕಾರ್ಮಿಕರ ಮೇಲೂ ಹೆಚ್ಚಿನ ಒತ್ತಡ ಬಿದ್ದಂತಾಗಿದೆ.

ಇದನ್ನೂ ಓದಿ | Ambedkar Ganesh | ಅಂಬೇಡ್ಕರ್‌ ಹೋಲುವ ಗಣೇಶ ಮೂರ್ತಿ; ಪ್ರತಿಷ್ಠಾಪಿಸಿದವರ ಮೇಲೆ ಪ್ರಕರಣ ದಾಖಲು

Exit mobile version