ಬೆಂಗಳೂರು: ಮಂಗಮ್ಮನಪಾಳ್ಯ ಸಿದ್ಧಿ ವಿನಾಯಕ ದೇವಾಲಯದಲ್ಲಿ ಶಾಸಕ ಸತೀಶ್ ರೆಡ್ಡಿ, ಬಂಡೇಪಾಳ್ಯ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್ ನೇತೃತ್ವದಲ್ಲಿ ಸರ್ವಧರ್ಮ ಮುಖಂಡರಿಂದ ಬುಧವಾರ ಗಣೇಶೋತ್ಸವ (Ganesh Chaturthi) ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಲಾಯಿತು.
ಕಾರ್ಯಕ್ರಮದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸರ್ವಧರ್ಮ ಗುರುಗಳು ಭಾಗಿಯಾಗಿದ್ದರು. ಮಂಗಮ್ಮನಪಾಳ್ಯ ಆಯೇಷ ಮಸೀದಿಯ ಮುಸ್ಲಿಂ ಧರ್ಮಗುರುಗಳಾದ ಚಾಂದ್ ಬಿ, ಮೌಲ, ಅಜರ್, ಸೈಯ್ಯದ್ ಸಲಾಂ, ಕ್ರಿಶ್ಚಿಯನ್ ಸಮುದಾಯದ ಹೋಲಿ ಎನ್ ಕ್ರೈಸ್ತ ಚರ್ಚ್ನ ಫಾದರ್ ಸೆಲ್ವಂ ಹಾಗೂ ಜೋಬಿ ಜಾರ್ಜ್ ಭಾಗಿಯಾಗಿದ್ದರು.
ಇದನ್ನೂ ಓದಿ | Ganesh Chaturthi 2022 | ಮಂಡ್ಯದಲ್ಲಿ ಮುಸ್ಲಿಂರಿಂದ ಭಾವೈಕ್ಯತೆಯ ಗಣೇಶ ಹಬ್ಬ ಆಚರಣೆ