Site icon Vistara News

Ganja Seized : 12 ಕೋಟಿ ರೂ. ಗಾಂಜಾ ಸೀಜ್‌! ಇದು ಪುಷ್ಪ ಸಿನಿಮಾ ರಿಮೇಕ್‌

Ganja Seized By CCB Police

ಬೆಂಗಳೂರು: ಪುಷ್ಪ ಸಿನಿಮಾ (Pushpa Film) ಮಾದರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಖತರ್ನಾಕ್‌ ಗ್ಯಾಂಗ್‌ ಬಂಧಿಯಾಗಿದ್ದು, ಸುಮಾರು 12 ಕೋಟಿ ಮೌಲ್ಯದ ಗಾಂಜಾ ಜಪ್ತಿ (Ganja Seized) ಮಾಡಲಾಗಿದೆ. ಗೂಡ್ಸ್ ಗಾಡಿಯ ಸೀಕ್ರೇಟ್ ಕಂಪಾರ್ಟ್ಮೆಂಟ್ ಮೂಲಕ ಬೆಂಗಳೂರಿಗೆ ಬರುತ್ತಿದ್ದ 1,500 ಕೆ.ಜಿ ಗಾಂಜಾವನ್ನು ಸಿಸಿಬಿ (CCB) ಮಹಿಳಾ ರಕ್ಷಣಾ ದಳ ವಶಪಡಿಸಿಕೊಂಡಿದೆ.

ಬೆಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಪ್ಲೈ ಆಗುತ್ತಿದ್ದು, ಇದಕ್ಕೆ ಚಾಮರಾಜಪೇಟೆಯ ಚಾಂದ್ ಪೆಡ್ಲರ್‌ ಆಗಿದ್ದ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಮಹಿಳಾ ರಕ್ಷಣಾ ದಳ ಸಲ್ಮಾನ್ ಪಾಷಾ ಎಂಬಾತನನ್ನು ಬಂಧಿಸಿದ್ದರು.

ವಿಚಾರಣೆ ವೇಳೆ ಆಂಧ್ರದ ವಿಶಾಖಪಟ್ಟಣದಿಂದ ಗಾಂಜಾ ಸರಬರಾಜು ಆಗುತ್ತಿದೆ ಎಂದು ಬಾಯಿಬಿಟ್ಟಿದ್ದ. ಇದರ ಬೆನ್ನತ್ತಿ ಹೊರಟ ಸಿಸಿಬಿ ಪೊಲೀಸರು ಮೂರು ವಾರಗಳ ಕಾಲ‌ ಮಾರುವೇಷದಲ್ಲಿ ವಿಶಾಖಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು. ಗಾಂಜಾ ಸರಬರಾಜು ಮಾಡುವಾಗಲೇ ರೆಡ್‌ ಹ್ಯಾಂಡ್‌ ಆಗಿ ಇಂಟರ್ ಸ್ಟೇಟ್ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಚಂದ್ರು ಭಾನು ಬಿಷ್ಣೋಯ್ ಹಾಗೂ ಲಕ್ಷ್ಮಿ ಮೋಹನ್ ದಾಸ್ ಬಂಧಿತ ಆರೋಪಿ ಆಗಿದ್ದಾರೆ.

ಈ ಖತರ್ನಾಕ್‌ಗಳು ಆಂದ್ರಪ್ರದೇಶ ಹಾಗೂ ಒಡಿಶಾ ಗಡಿಭಾಗಗಳಲ್ಲಿ ಸ್ಥಳೀಯರಿಂದ ಗಾಂಜಾ ಖರೀದಿ ಮಾಡುತ್ತಿದ್ದರು. ಬಳಿಕ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದರು. ಅದರಲ್ಲೂ ಬೆಂಗಳೂರನ್ನು ಪ್ರಮುಖ ಗಾಂಜಾ ಸೇಲ್ ಹಬ್ ಮಾಡಿಕೊಂಡಿದ್ದರು. ಬೇಡಿಕೆಗೆ ತಕ್ಕಂತೆ ಸಾವಿರಾರು ಕೆ.ಜಿ ಗಾಂಜಾ ಸಪ್ಲೈ ಮಾಡುತ್ತಿದ್ದರು.

1,500 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು

ಇದನ್ನೂ ಓದಿ:Road Accident : ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ; ಕಾಲ್ಕಿತ್ತ ಚಾಲಕ

ಇದಕ್ಕಾಗಿಯೇ ಈ ಗೂಡ್ಸ್ ವಾಹನದ ಚಾರ್ಸಿಯನ್ನು ಅಲ್ಟ್ರೇಷನ್ ಮಾಡಿಸಿ ಇದರಲ್ಲಿ ಪ್ಲಿಪ್‌ಕಾರ್ಟ್ ಪಾರ್ಸೆಲ್ ಬಾಕ್ಸ್‌ಗಳಲ್ಲಿ ಸಾವಿರಾರು ಕೆ.ಜಿ ಗಾಂಜಾ ಸಪ್ಲೈ ಮಾಡುತ್ತಿದ್ದರು. ಇನ್ನು ಸೀಕ್ರೇಟ್ ಕಂಪಾರ್ಟ್ಮೆಂಟ್‌ನಲ್ಲಿ ಗಾಂಜಾ ಲೋಡ್ ಮಾಡಿ ಖಾಲಿ ಕಾಟನ್ ಬಾಕ್ಸ್‌ಗಳನ್ನು ಸ್ಕ್ರಾಪ್ ರೀತಿ ತುಂಬಿ, ಆ ರಾಜ್ಯದ ನಂಬರ್ ಪ್ಲೇಟ್ ಹಾಕಿಕೊಂಡು ಹೋಗುತ್ತಿದ್ದರು.

ಭಂಧಿತ ಆರೋಪಿಗಳು

ಗಾಂಜಾ ದಂಧೆಯಲ್ಲಿ ಬಂಧಿತರಾಗಿರುವ ಚಂದ್ರಭಾನ್ ಬಿಷ್ಣೋಯಿ ಎಂ.ಬಿ.ಎ, ಲಕ್ಷ್ಮಿ ಮೋಹನ್ ದಾಸ್ ಬಿ.ಎ ಪದವೀಧರರಾಗಿದ್ದಾರೆ. ಇಬ್ಬರು ಸಹ ಅಂತರ್ ರಾಜ್ಯ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version