1. ಕೇಂದ್ರದ ಪಿಎಂ ಗರೀಬ್ ಕಲ್ಯಾಣ್ ಅನ್ನ ಸ್ಕೀಂ 5 ವರ್ಷದವರೆಗೆ ವಿಸ್ತರಣೆ!
ನವದೆಹಲಿ: ಕೇಂದ್ರ ಸರ್ಕಾರದ (Central Government) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (Pradhan Mantri Garib Kalyan Anna Yojana) ಮುಂದಿನ ಐದು ವರ್ಷಗಳವರೆಗೆ ವಿಸ್ತರಣೆ ಮಾಡಲಾಗಿದೆ(Scheme Extended). ಈ ಯೋಜನೆಯಡಿ ಬಡವರು ಎಂದು ಗುರುತಿಸಲಾದ ಜನರು (Poor People) ಪ್ರತಿ ತಿಂಗಳು 5 ಕೆಜಿ ಆಹಾರಧಾನ್ಯಗಳನ್ನು ಪಡೆಯಲಿದ್ದಾರೆ. ಹಾಗೆಯೇ, ಅಂತ್ಯೋದಯ ಕುಟುಂಬಗಳು (Antyodaya households) ತಿಂಗಳಿಗೆ 35 ಆಹಾರ ಧಾನ್ಯ ಪಡೆಯಲಿದ್ದಾರೆ. ಒಟ್ಟಾರೆಯಾಗಿ 81 ಕೋಟಿ ಜನರಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
2. Pneumonia Outbreak: ಚೀನಾ ವೈರಸ್; ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಹೈ ಅಲರ್ಟ್
ಹೊಸದಿಲ್ಲಿ: ಚೀನಾದಲ್ಲಿ ಹಬ್ಬಿರುವ ನ್ಯುಮೋನಿಯಾ ವೈರಸ್ (Pneumonia Outbreak, China influenza 2023) ಭಾರತಕ್ಕೂ ಹಬ್ಬುವ ಆತಂಕ ತಲೆದೋರಿದ್ದು, ಆರು ರಾಜ್ಯಗಳು ಹೈ ಅಲರ್ಟ್ ಘೋಷಿಸಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. ಸಿಬಿಐ ಕೇಸ್ ವಾಪಸ್; ಡಿ.ಕೆ ಶಿವಕುಮಾರ್‌ಗೆ ಹೈಕೋರ್ಟ್ ಬಿಗ್ ರಿಲೀಫ್
ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನಡೆಸುತ್ತಿರುವ ತನಿಖೆಗೆ (CBI Investigation) ಸಂಬಂಧಿಸಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ರಾಜ್ಯ ಹೈಕೋರ್ಟ್ (Karnataka High court) ಬಿಗ್ ರಿಲೀಫ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ಸಿಎಂಗೆ 5 ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿ? ಡಿಸಿಎಂಗೂ ನೇಮಕ?
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ನಿಗಮ-ಮಂಡಳಿ ನೇಮಕ (Appointment of Corporation Board) ವಿಚಾರ ಅಂತಿಮಗೊಂಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರ ಜತೆಗೂಡಿ ಸಿಎಂ ಸಿದ್ದರಾಮಯ್ಯ (CM Siddaramaiah), ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಆದರೆ, ಹಲವು ಹಿರಿಯ ಶಾಸಕರು ಪ್ರಬಲ ಬೋರ್ಡ್‌ಗಳಿಗೆ ಬೇಡಿಕೆ ಇಟ್ಟಿದ್ದು, ಸರ್ಕಾರಕ್ಕೆ ತಲೆನೋವು ತಂದಿದೆ. ಇದಕ್ಕೆ ಪರಿಹಾರ ಸೂತ್ರವಾಗಿ 4 ರಿಂದ 5 ಹೆಚ್ಚುವರಿ ಸಿಎಂ ರಾಜಕೀಯ ಕಾರ್ಯದರ್ಶಿ (CM Political secretary) ಹುದ್ದೆ ಸೃಷ್ಟಿ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೆ, ಉಪ ಮುಖ್ಯಮಂತ್ರಿಗೂ ನೇಮಕ ಮಾಡಲು ಬರುತ್ತದೆಯೇ ಎಂಬ ವಿಚಾರದ ಬಗ್ಗೆಯೂ ಚಿಂತನೆಗಳು ನಡೆದಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ಝೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಬೆಡ್ ಇಲ್ಲ ಎಂದ ನಿಮ್ಹಾನ್ಸ್; ಎಳೆ ಮಗು ಸಾವು
ಬೆಂಗಳೂರು: ಸಾವು ಬದುಕಿನ ಹೋರಾಟದಲ್ಲಿದ್ದ (Life and death) ಪುಟ್ಟ ಮಗುವಿನ ಬಗೆಗೂ ಕರುಣೆ ತೋರದೆ, ಬೆಡ್ ಇಲ್ಲ ಎಂದು ನಿರ್ಲಕ್ಷ್ಯ ತೋರಿದೆ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆ (Nimhans Hospital). ಹೀಗಾಗಿ ಒಂದುವರೆ ವರ್ಷದ ಪುಟ್ಟ ಮಗುವೊಂದು ಹೆತ್ತವರ ಆಕ್ರಂದನ ನಡುವೆ ಕಣ್ಮುಚ್ಚಿದೆ (Child death). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. Equity Market: 4 ಟ್ರಿಲಿಯನ್ ಡಾಲರ್ ತಲುಪಿದ ಭಾರತೀಯ ಈಕ್ವಿಟಿ ಮಾರುಕಟ್ಟೆ
ಮುಂಬಯಿ: ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್ (stock exchange) ಬಿಎಸ್‌ಇಯಲ್ಲಿ (BSE) ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಮಾಪನವು (Equity Market) ಬುಧವಾರ ಮೊದಲ ಬಾರಿಗೆ 4 ಟ್ರಿಲಿಯನ್ ಅಮೆರಿಕನ್ ಡಾಲರ್ (3.33 ಕೋಟಿ ಕೋಟಿ ರೂ.) ಮೈಲಿಗಲ್ಲನ್ನು ತಲುಪಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ
ಬೆಂಗಳೂರು: ರಾಹುಲ್ ದ್ರಾವಿಡ್ (Rahul Dravid ) ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಅವರ ಸೇರಿದಂತೆ ಇತರ ಕೋಚಿಂಗ್ ಸಿಬ್ಬಂದಿಯ ಒಪ್ಪಂದವನ್ನು ವಿಸ್ತರಿಸಲು ಬಿಸಿಸಿಐ ನಿರ್ಧರಿಸಿದೆ. ವಿಸ್ತರಣೆಯ ಅವಧಿ ಇನ್ನೂ ತಿಳಿದಿಲ್ಲ. ಆದರೆ, ಮುಂದಿನ ಜೂನ್ನಲ್ಲಿ ನಡೆಯಲಿರುವ 2024 ಟಿ20 ವಿಶ್ವಕಪ್ ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ದ್ರಾವಿಡ್ ತಮ್ಮ ಹುದ್ದೆಯಲ್ಲಿ ಮುಂದುವರಿಯಲಾರರು ಎಂಬ ಊಹಾಪೋಹಗಳ ನಡುವೆ ಬಿಸಿಸಿಐ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಡಿ.1ರಿಂದ ಸಿಮ್ ಕಾರ್ಡ್ ಹೊಸ ರೂಲ್ಸ್; ನಿಯಮ ಮೀರಿದ್ರೆ 10 ಲಕ್ಷ ರೂ. ದಂಡ!
ವದೆಹಲಿ: ಸೈಬರ್ ವಂಚನೆಯನ್ನು (Cyber Fraud) ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು (Central Government) ಸಿಮ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರೂಪಿಸಿದ್ದು(New SIM Card rules), ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ. ಸಿಮ್ ಮಾರಾಟ (SIM Selling) ಮತ್ತು ಖರೀದಿಗೆ (SIM Buying) ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಕಳೆದ ಆಗಸ್ಟ್ ತಿಂಗಳಲ್ಲಿಯೇ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯು ಘೋಷಣೆ ಮಾಡಿತ್ತು. ವಂಚನೆಯ ಮೂಲಕ ಸಿಮ್ ಕಾರ್ಡ್ ಖರೀದಿ ಮತ್ತು ಬಳಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ನಿಧಾರ್ವನ್ನು ಕೈಗೊಂಡಿದೆ. ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಅವರು, ವಂಚನೆಯ ಮೂಲಕ ಸಕ್ರಿಯವಾಗಿದ್ದ ಸುಮಾರು 52 ಲಕ್ಷ ಸಿಮ್ ಕಾರ್ಡ್‌ಗಳನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ನಿಯಮಗಳ ಘೋಷಣೆ ವೇಳೆ ಹೇಳಿದ್ದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ಸುರಂಗ ಕಾರ್ಯಾಚರಣೆಯ ಹೀರೋ, ರ‍್ಯಾಟ್ ಹೋಲ್ ಮೈನರ್ ಮುನ್ನಾ ಖುರೇಷಿ ಯಾರು?
ಡೆಹ್ರಾಡೂನ್: 17 ದಿನಗಳ ಕಾಲ ಕುಸಿದ ಉತ್ತರಕಾಶಿಯ ಸುರಂಗದಲ್ಲಿ (Uttarkashi tunnel collapse) ಸಿಕ್ಕಿಬಿದ್ದಿದ್ದ ಕಾರ್ಮಿಕರನ್ನು ಮೊದಲು ತಲುಪಿದವನು ರ‍್ಯಾಟ್ ಹೋಲ್ ಮೈನರ್ ಮುನ್ನಾ ಖುರೇಷಿ. ಹತ್ತಾರು ಮೀಟರ್‌ಗಳಷ್ಟು ದೂರದ ಅವಶೇಷಗಳ ಗುಡ್ಡವನ್ನು ಇಲಿಯಂತೆ ಕೊರೆದೂ ಕೊರೆದೂ ಕಡೆಗೂ ಕಾರ್ಮಿಕರನ್ನು ತಲುಪಿದಾತ ಈತ ಹಾಗೂ ಇವನ ಬಳಗ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10| ವಿಶೇಷ ಜ್ಯೂರಿ ಅವಾರ್ಡ್ ತಮ್ಮ ನೆಚ್ಚಿನ ನಟನಿಗೆ ಅರ್ಪಿಸಿದ ರಿಷಬ್ ಶೆಟ್ಟಿ, ಯಾರವರು?
ಬೆಂಗಳೂರು: ಕಳೆದ ವರ್ಷ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ಚಿತ್ರ ‘ಕಾಂತಾರ’ (Kantara). ರಿಷಬ್ ಶೆಟ್ಟಿ (Rishab Shetty) ಈ ಚಿತ್ರವನ್ನು ನಿರ್ದೇಶಿಸಿ, ನಾಯಕನಾಗಿ ಕಾಣಿಸಿಕೊಂಡಿದ್ದರು. ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರ ಬರೋಬ್ಬರಿ 400 ಕೋಟಿ ರೂ. ಗಳಿಸಿತ್ತು. ಈ ಎಲ್ಲ ಹೆಗ್ಗಳಿಕೆ ನಡುವೆ ‘ಕಾಂತಾರ’ ಮುಡಿಗೆ ಇನ್ನೊಂದು ಗರಿ ಸಿಕ್ಕಿದೆ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಿಕ ಕತೆಯನ್ನು ಹೊಂದಿರುವ ʼಕಾಂತಾರʼ ಸಿನಿಮಾ ಚೊಚ್ಚಲ ಆವೃತ್ತಿಯ ʼಸಿಲ್ವರ್ ಪಿಕಾಕ್ ಅವಾರ್ಡ್’ ತನ್ನದಾಗಿಸಿಕೊಂಡಿದೆ. ರಿಷಬ್ ಶೆಟ್ಟಿ ಅವರಿಗೆ ವಿಶೇಷ ಜ್ಯೂರಿ ಅವಾರ್ಡ್ (Special Jury Award) ಲಭಿಸಿದ್ದು, ಅದನ್ನು ಅವರು ಹಿರಿಯ ನಟ ಶಂಕರ್ ನಾಗ್ (Shankar Nag) ಅವರಿಗೆ ಅರ್ಪಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.