ಹಾಸನ: ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿ ಕುಣಿಕೇರಿ ಗ್ರಾಮದಲ್ಲಿ ನಡೆದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿನಿ ಸಾನಿತ (9) ಮೃತಪಟ್ಟ ಬಾಲಕಿ. ಹೆತ್ತವರು ಸೀರೆಯಲ್ಲಿ ಹಾಕಿಕೊಟ್ಟಿದ್ದ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಅದು ಕುತ್ತಿಗೆಗೆ ಬಿಗಿದುಕೊಂಡಿದೆ.
ಬಸವರಾಜು ಮತ್ತು ಬೇಬಿ ದಂಪತಿಯ ಒಬ್ಬಳೇ ಪುತ್ರಿ ಸಾನಿತಾ. ಮಗಳಿಗೆ ಆಡಲೆಂದು ಮನೆಯೊಳಗೆ ಸೀರೆಯಿಂದ ಜೋಕಾಲಿಯೊಂದನ್ನು ಪೋಷಕರು ಸಿದ್ಧಪಡಿಸಿಕೊಟ್ಟಿದ್ದರು. ಆಂತೆಯೇ ಸಾನಿತಾ ಅದರಲ್ಲಿ ಕುಳಿತು ಆಡುತ್ತಿದ್ದಳು. ಜೋಕಾಲಿ ಆಡುತ್ತಿದಾಗ ಸೀರೆ ಬಿಗಿಯಾಗಲು ಆರಂಭಿಸಿದ್ದು ಸಾನಿತಾಳ ಕುತ್ತಿಗೆಗೆ ಏಕಾಏಕಿ ಬಿಗಿದುಕೊಂಡಿದೆ. ಸಣ್ಣ ಬಾಲಕಿಯಾಗಿರುವ ಆಕೆಗೆ ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಉಸಿರಗಟ್ಟಿ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಪೊಷಕರ ಅಕ್ರಂದನ ಮುಗಿಲುಮುಟ್ಟಿದೆ. ಸಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.
ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು
ಇಲ್ಲಿನ ಸುಂಕದಕಟ್ಟೆಯ ಪಿಳ್ಳಪ್ಪನ ಕಟ್ಟೆ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ (Youth drowned) ಬಾಲಕನೊಬ್ಬ ನೀರು ಪಾಲಾಗಿದ್ದಾನೆ. ಭಾನುವಾರ ಮಧ್ಯಾಹ್ನ (ಜು.29) ಎಂಟು ಜನರಿಂದ ಗುಂಪು ಕೆರೆಯಲ್ಲಿ ಈಜಾಡಲು ತೆರಳಿದ್ದಾರೆ. ಈ ವೇಳೆ ಮೊಯಿನುದ್ದೀನ್ (13) ಎಂಬಾತ ಕೆರೆಯಲ್ಲಿ ಮುಳುಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೋಟ್ ಮೂಲಕ ನದಿಯಲ್ಲಿ ಬಾಲಕನಿಗೆ ಹುಡುಕಾಟ ನಡೆಸಿದ್ದಾರೆ. ಸತತ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ಸಿಬ್ಬಂದಿ ಬಾಲಕನ ಮೃತದೇಹವನ್ನು ಕೆರೆಯಿಂದ ಮೇಲೆಕ್ಕೆ ಎತ್ತಿದ್ದಾರೆ. ಕೆರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : Self Harming :ಖಾಸಗಿ ವಿಡಿಯೊ ವೈರಲ್; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ
8ನೇ ತರಗತಿಯಲ್ಲಿ ಓದುತ್ತಿರುವ ಮೊಯಿನುದ್ದೀನ್, ನಮಾಜ್ ಮಾಡಲು ಮಸೀದಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಹೋಗಿದ್ದ. ಆದರೆ ಮಸೀದಿಗೆ ಹೋಗದೇ ಸ್ನೇಹಿತರೊಂದಿಗೆ ಈಜಲು ಕೆರೆಗೆ ಬಳಿ ಬಂದಿದ್ದಾನೆ. ಆದರೆ ಕೆರೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಈಜಲು ಆಗದೆ ಮುಳುಗಿದ್ದಾನೆ.
ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ
ರಾಯಚೂರಿನ ಶಕ್ತಿನಗರ ಸಮೀಪದ ಕೃಷ್ಣಾ ನದಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನರಸಣ್ಣ(56) ಕೃಷ್ಣಾ ನದಿಗೆ ಹಾರಿದವರು. ಕೃಷ್ಣಾ ನದಿ ಮಧ್ಯಭಾಗದಲ್ಲಿ ನರಸಣ್ಣ ಕೊಚ್ಚಿ ಹೋಗುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ.