Site icon Vistara News

ಬಸ್‌ ರಶ್‌ ಇದ್ದಿದ್ದರಿಂದ ಬಾಗಿಲಲ್ಲಿ ನೇತಾಡುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು ಸಾವು; ಛೆ, ಬಸ್ ಹತ್ತಬಾರದಿತ್ತು ಎಂದ ಜನ

Girl dies after falling off bus in Hanagal

ಹಾವೇರಿ: ಬಸ್‌ ತುಂಬಾ ರಶ್‌ ಇದ್ದ ಕಾರಣ ಬಾಗಿಲ ಬಳಿ ನೇತಾಡುತ್ತಾ ನಿಂತಿದ್ದ ವಿದ್ಯಾರ್ಥಿನಿಯೊಬ್ಬಳು ಆಯತಪ್ಪಿ ಬಿದ್ದು (Accident News) ಮೃತಪಟ್ಟಿದ್ದಾಳೆ. ಹಾನಗಲ್ ತಾಲೂಕಿನ ಕುಸನೂರು ಗ್ರಾಮದ ಬಳಿ ಈ ಘಟನೆ ನಡೆದಿದೆ.

ಮಧು ಕುಂಬಾರ (14) ಮೃತ ಶಾಲಾ ಬಾಲಕಿ ಎಂದು ಗುರುತಿಸಲಾಗಿದೆ. ಬಸ್‌ನಲ್ಲಿ ಜನ ತುಂಬಿದ್ದಾರೆಂದು ಬಸ್ ಬಾಗಿಲ ಬಳಿ ವಿದ್ಯಾರ್ಥಿನಿ ಮಧು ನಿಂತಿದ್ದಳು. ಬಸ್ ಟರ್ನ್ ಆಗುವಾಗ ಆಕೆ ಹಿಡಿದುಕೊಂಡಿದ್ದ ಸರಳಿನ ಮೇಲೆ ಹಿಡಿತ ತಪ್ಪಿದೆ. ಹೀಗಾಗಿ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದಾಳೆ. ಹೀಗೆ ನೆಲಕ್ಕೆ ಬಿದ್ದಿದ್ದರಿಂದ ತೀವ್ರ ಪೆಟ್ಟಾಗಿದ್ದು, ಮೃತಪಟ್ಟಿದ್ದಾಳೆ.

ಹಾನಗಲ್ ತಾಲೂಕು ವಾಸನ ಗ್ರಾಮದಿಂದ ಕುಸನೂರು ಗ್ರಾಮದಲ್ಲಿರುವ ಪ್ರೌಢಶಾಲೆಗೆ ಬಾಲಕಿ ತೆರಳುತ್ತಿದ್ದಳು. ಈ ವೇಳೆ ದುರ್ಘಟನೆ ಸಂಭವಿಸಿದೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಾಲಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಲೋಕಸಭೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ; ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ

ಈ ಬಗ್ಗೆ ಸ್ಥಳೀಯರು ಪ್ರತಿಕ್ರಿಯೆ ನೀಡಿದ್ದು, ಈ ಭಾಗದಲ್ಲಿ ಇದೊಂದು ಸಮಸ್ಯೆ ಸದಾ ಇದೆ. ಬಸ್‌ ಸಮಯ ಸೂಕ್ತವಾಗಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ಇರುವ ಬಸ್‌ನಲ್ಲಿ ಎಲ್ಲರೂ ಹೋಗಬೇಕು. ರಶ್‌ ಇದ್ದರೂ ಅನಿವಾರ್ಯ ಇದ್ದಾಗ ಹೋಗಲೇಬೇಕು. ಅಲ್ಲದೆ, ಆ ಬಸ್‌ ಅನ್ನು ಬಿಟ್ಟರೆ, ಮತ್ತೊಂದು ಬಸ್‌ಗಾಗಿ ತುಂಬಾ ಸಮಯ ಕಾಯಬೇಕು. ಹೀಗಾಗಿ ರಶ್‌ ಇರಲಿ, ಇಲ್ಲದೇ ಇರಲಿ ಎಲ್ಲರೂ ಹೋಗಲೇಬೇಕಾಗುತ್ತದೆ. ಪಾಪ ಈ ಬಾಲಕಿಗೆ ಶಾಲೆಗೆ ಹೋಗುವ ದಾವಂತದಲ್ಲಿ ಹೀಗಾಗಿದೆ. ಆಕೆ ಈ ಬಸ್‌ ಹತ್ತಲೇಬಾರದಿತ್ತು ಎಂದು ಕಂಬನಿ ಮಿಡಿದಿದ್ದಾರೆ.

ಮಕ್ಕಳೂ ಸೇರಿ 7 ಪಾದಚಾರಿಗಳ ಮೇಲೆ ಹರಿದ ಟಂಟಂ; ಕುಡಿದ ಅಮಲಿನಲ್ಲಿ ಘೋರ ಅವಘಡ!

ಚಿಕ್ಕಬಳ್ಳಾಪುರ: ಚಿಂತಾಮಣಿ-ಬಾಗೇಪಲ್ಲಿ ರಸ್ತೆಯ ಮಾರ್ಗದಲ್ಲಿ ಟಂಟಂ ಆಟೊವೊಂದು ಪಾದಚಾರಿಗಳ ಮೇಲೆ ಹರಿದಿದೆ. ಈ ರಸ್ತೆ ಅಪಘಾತದಲ್ಲಿ (Road Accident) ವಿದ್ಯಾರ್ಥಿಗಳು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ. ಚಾಲಕ ಕುಡಿದ ಅಮಲಿನಲ್ಲಿ ವಾಹನವನ್ನು ಚಲಾಯಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.

ವೇಗವಾಗಿ ಬಂದ ಟಂಟಂ ಆಟೊ ಪಾದಚಾರಿಗಳಿಗೆ ಗುದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸಾರ್ವಜನಿಕರು ರಕ್ಷಣೆಗೆ ದಾವಿಸಿದ್ದು, ಆಟೊ ಕೆಳಗೆ‌ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: Free Electricity: ಹೊಸ ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೂ ಫ್ರೀ ಕರೆಂಟ್‌: ಏನಿದು ಸರ್ಕಾರದ 53 ಯುನಿಟ್‌ ಸೂತ್ರ?

ಸದ್ಯ ಏಳು ಮಂದಿ ಗಾಯಾಳುಗಳಿಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗುತ್ತಿದೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Exit mobile version