Site icon Vistara News

Girl drowned : ನದಿಗೆ ಸ್ನಾನಕ್ಕೆ ಹೋಗಿದ್ದ 8ನೇ ತರಗತಿ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಮೃತ್ಯು

girl drowned

#image_title

ಶಿರಸಿ: ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಉ.ಕ ಜಿಲ್ಲೆ ಸಿದ್ದಾಪುರ‌ ತಾಲೂಕಿನ ಹರ್ಲಗುಂಡಿ ಗ್ರಾಮದಲ್ಲಿ ನಡೆದಿದೆ.

ಬುಧವಾರ ಸಂಜೆ ಗ್ರಾಮದ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಮೃತ ವಿದ್ಯಾರ್ಥಿನಿಯನ್ನು‌ ಧನ್ಯಾ ಗೌಡ ಕಂಚಾಳ ಎಂದು ಗುರುತಿಸಿಲಾಗಿದೆ‌.

ಎಂಟನೇ ತರಗತಿ ಓದುತ್ತಿದ್ದ‌ ಧನ್ಯ ಸ್ನಾನಕ್ಕೆಂದು ತೆರಳಿದ್ದಳು. ಈಜಲು ಬರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಹೊಳೆ ಆಳವಿದ್ದರಿಂದ‌ ಈಜು ಬಾರದೇ ನೀರಿನಲ್ಲಿ ಸಾವು ಕಂಡಿದ್ದಾಳೆ. ಈ ಸಂಬಂಧ ಸಿದ್ದಾಪುರ ಪೋಲಿಸ್ ಠಾಣಾ ಪ್ರಕರಣ ದಾಖಲಾಗಿದೆ.

ಅಪಘಾತ ಪರಿಹಾರ ವಿಮಾ ಹಣ ನೀಡದ ಸರ್ಕಾರಿ ಬಸ್‌ ಜಪ್ತಿ

ಹೊನ್ನಾವರ: ಅಪಘಾತದಿಂದ ಮೃತಪಟ್ಟವರ ಕುಟುಂಬಕ್ಕೆ ಅಪಘಾತ ಪರಿಹಾರ ವಿಮಾ ಹಣವನ್ನು ನೀಡದೇ ಇದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಿಬ್ಬಂದಿ ಕೆ.ಎಸ್.ಆರ್.ಟಿ.ಸಿ. ಕುಮಟಾ ಡಿಪೋ ಬಸ್ ಒಂದನ್ನು ಜಪ್ತಿ ಮಾಡಿದ್ದಾರೆ. ಸಿಬ್ಬಂದಿ ಬಸ್‌ನ್ನು ವಶಕ್ಕೆ ಪಡೆದು ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ತಾಲೂಕಿನ ಕೆಕ್ಕಾರ ಗ್ರಾಮದ ಶಂಕರ ಗೌಡ ಎಂಬವರು 2019ರ ಆಗಸ್ಟ್‌ನಲ್ಲಿ ಅಂಕೋಲಾದ ಹೊಸೂರ ಕ್ರಾಸ್ ಬಳಿ ಬಸ್ ಹತ್ತಿ ಮನೆಗೆ ಮರಳುತ್ತಿದ್ದರು. ಆ ಸಮಯದಲ್ಲಿ ಅವರು ಬಸ್ಸಿನಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದರು. ಮೃತನ ಪತ್ನಿ ನಾಗರತ್ನ ಗೌಡ ಅಪಘಾತ ಪರಿಹಾರ ಕೋರಿ ಹೊನ್ನಾವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಮಾಡಿದ ನ್ಯಾಯಾಲಯವು ಮೃತನ ಕುಟುಂಬಕ್ಕೆ ಪರಿಹಾರ ಹಣ ನೀಡಲು ಆದೇಶ ನೀಡಿತ್ತು.

ನ್ಯಾಯಾಲಯ ಸಿಬ್ಬಂದಿ ವಶಪಡಿಸಿಕೊಂಡ ಬಸ್‌

ನ್ಯಾಯಾಲಯ ನಿಗದಿ ಪಡಿಸಿದ ಅವಧಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಮೃತನ ಕುಟುಂಬಕ್ಕೆ ಪರಿಹಾರ ನೀಡಿರಲಿಲ್ಲ. ಕೋರ್ಟ್‌ ಹೇಳಿದ ಅವಧಿಯಲ್ಲಿ ಸಂಸ್ಥೆ ಹಣ ನೀಡದೇ ಇದ್ದರಿಂದ ಅರ್ಜಿದಾರರು ಕೆ.ಎಸ್.ಆರ್.ಟಿ.ಸಿ ವಿರುದ್ಧ ಹಣ ವಸೂಲಿಗೆ ಅಮಲ್‌ಜಾರಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯವು ಹೇಳಿದ ಮೊತ್ತ ಹಾಗೂ ಅದರ ಮೇಲಿನ ಬಡ್ಡಿ ಎಲ್ಲಾ ಸೇರಿ, 16,46,388 ರೂ. ಪರಿಹಾರ ನೀಡಬೇಕು ಎಂದು ಕೋರಿ ಕೊಂಡಿದ್ದರು. ಆಗಲೂ ಸಹ ಕೆ.ಎಸ್.ಆರ್.ಟಿ.ಸಿ ಹಣ ಪಾವತಿಸಲು ವಿಫಲ ಆದ ಹಿನ್ನೆಲೆಯಲ್ಲಿ ಹೊನ್ನಾವರ ನ್ಯಾಯಾಧೀಶ ಕುಮಾರ ಜಿ ಅವರು ಬಸ್ ಜಪ್ತಿಪಡಿಸಲು ಆದೇಶ ನೀಡಿದ್ದರು.

ನ್ಯಾಯಾಲಯದ ಆದೇಶದ ಅನ್ವಯ ಹೊನ್ನಾವರ ಸೀವಿಲ್ ಕೋರ್ಟ ಸಿಬ್ಬಂದಿಗಳಾದ ಎಸ್.ಎಸ್ ಗೊಂಡಾ ಹಾಗೂ ಎಸ್ ಎನ್ ಶೆಟ್ಟಿ ಬಸ್ ಜಪ್ತಿ ಪಡಿಸಿಕೊಂಡು ಮಂಗಳವಾರ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದರು. ಅರ್ಜಿದಾರರ ಪರವಾಗಿ ನ್ಯಾಯವಾದಿ ಎಮ್.ಎಲ್ ನಾಯ್ಕ ಪ್ರತಿನಿಧಿಸಿದ್ದರು.

ಇದನ್ನೂ ಓದಿ : Karnataka Election 2023 : ಶಿರಸಿ ಸಿದ್ದಾಪುರದಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ; ಕಣಕ್ಕಿಳಿಯಲು ವೆಂಕಟೇಶ್‌ ಹೆಗಡೆ ಹೊಸಬಾಳೆ ರೆಡಿ

Exit mobile version