Site icon Vistara News

LOVE JIHAD| ಲವ್‌ ಜಿಹಾದ್‌ಗೆ ಕುಂದಾಪುರದ ಹಿಂದೂ ಯುವತಿ ಬಲಿ

ಉಡುಪಿ: ಹಿಜಾಬ್ ವಿವಾದದಿಂದಾಗಿ ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಜಿಲ್ಲೆಯಲ್ಲಿ ಈಗ ಲವ್ ಜಿಹಾದ್ ಸದ್ದು ಕೇಳಿ ಬರುತ್ತಿದೆ. ಕುಂದಾಪುರದ ಹುಡುಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಲವ್ ಜಿಹಾದ್ ಕಾರಣವೆನ್ನುವುದು ಬೆಳಕಿಗೆ ಬಂದಿದೆ.

ಕುಂದಾಪುರ ಸಮೀಪದ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ (25) ಮೃತ ಯುವತಿ. ಸುಂದರ ಬದುಕಿನ ಕನಸು ಕಂಡಿದ್ದ ಸಾಮಾನ್ಯ ಕುಟುಂಬದ ಈ ಹುಡುಗಿ ತಲ್ಲೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ನಾಲ್ಕು ವರ್ಷಗಳ ಹಿಂದೆ ಮೂಡುಗೋಪಾಡಿ ನಿವಾಸಿ ಅಜೀಜ್ (32) ಎಂಬಾತ ಶಿಲ್ಪಾ ಜತೆಗೆ ಸ್ನೇಹ ಬೆಳೆಸಿದ್ದ. ಚಾಲಾಕಿಯಾದ್ದ ಅಜೀಜ್, ಈಕೆಯ ಸ್ನೇಹವನ್ನೇ ದುರ್ಬಳಕೆ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ.

ಆಗಾಗ ಕೋಟೇಶ್ವರದಲ್ಲಿ ತನ್ನ ಫ್ಲಾಟ್‌ಗೆ ಶಿಲ್ಪಾಳನ್ನು ಕರೆಸಿಕೊಂಡು ಮೋಜು ಮಾಡುತ್ತಿದ್ದ ಅಜೀಜ್‌, ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಹೇಳಿದ ಕಡೆ ಬರುವಂತೆ ಒತ್ತಾಯಿಸುತ್ತಿದ್ದ. ಕಳೆದ ಕೆಲವು ದಿನಗಳ ಹಿಂದೆ ಶಿಲ್ಪಾ ತನ್ನನ್ನು ಮದುವೆಯಾಗುವಂತೆ ಅಜೀಜ್‌ ಬಳಿ ಕೇಳಿದಾಗ ಮತಾಂತರವಾಗುವಂತೆ ಒತ್ತಾಯ ಮಾಡಿದ್ದ. ಇದಕ್ಕೆ ಶಿಲ್ಪಾ ಒಪ್ಪದಿದ್ದಾಗ ಆಕೆಯ ಬೆತ್ತಲೆ ಫೋಟೊ, ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ. ಇದರ ಬೆನ್ನಲ್ಲೇ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಿರಂತರವಾಗಿ ಶಿಲ್ಪಾಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ ಅಜೀಜ್‌, ಇದಕ್ಕೂ ಮೊದಲೇ ಹಂಗಳೂರಿನ ಸಲ್ಮಾ (30) ಎಂಬ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ. ಅಲ್ಲದೆ ಧರ್ಮ ಪರಿವರ್ತನೆ ಮಾಡಿಕೊಳ್ಳುವಂತೆ ತನ್ನ ಹೆಂಡತಿಯಿಂದಲೂ ಶಿಲ್ಪಾಳ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ. ಅಜೀಜ್ ಕಪಟ ಪ್ರೀತಿಯ, ಲವ್ ಸೆಕ್ಸ್ ಜಿಹಾದ್ ನ ಕರಾಳ ಮುಖದ ಅರಿವಾದಾಗ ಶಿಲ್ಪಾ ವಿಷ ಸೇವಿಸಿದ್ದಳು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ. ‌

ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಮನೆಯವರು ಕಣ್ಣೀರು ಸುರಿಸುತ್ತಿದ್ದಾರೆ. ಹಿಂದು ಸಂಘಟನೆ ಮುಖಂಡರು ಆರೋಪಿಯನ್ನು ಕೂಡಲೇ ಬಂಧಿಸಿ ಯುವತಿಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಕುಂದಾಪುರ ಠಾಣೆಗೆ ದೂರು
ಈ ಪ್ರಕರಣ ಸಂಬಂಧ ಮೃತ ಯುವತಿಯ ಸಹೋದರ ರಾಘವೇಂದ್ರ, ಕುಂದಾಪುರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅಜೀಜ್‌ ಎಂಬಾತ ಪ್ರೀತಿಸಿ ಮದುವೆಯಾಗುವುದಾಗಿ ಮೋಸ ಮಾಡಿದ್ದರಿಂದ ನನ್ನ ತಂಗಿ ಶಿಲ್ಪಾ ವಿಷ ಸೇವಿಸಿ ಮೇ 23ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ಆಕೆಯನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ 25ರಂದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಹೀಗಾಗಿ ಆರೋಪಿ ಹಾಗೂ ಆತನ ಹೆಂಡತಿ ಸಲ್ಮಾ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಹೋದರಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ | Cyber Crime | ಲಕ್ಷ ಹಣ ಕಳೆದುಕೊಂಡ ಬಿಎಸ್‌ಎಫ್‌ ಯೋಧ

Exit mobile version