ಬೆಂಗಳೂರು: ರಾಜ್ಯದ ೯೫ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಉನ್ನತೀಕರಿಸಲು ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಅದರೆ, ರಾಜ್ಯದ ೯೫ ಕಡೆಗಳಲ್ಲಿ ಹೊಸ ಪ್ರೌಢ ಶಾಲೆಗಳು ಸ್ಥಾಪನೆಯಾಗಲಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಎಲ್ಲೆಲ್ಲಿ ಹೊಸ ಪ್ರೌಢ ಶಾಲೆಗಳು?
ಸರ್ಕಾರದ ಆದೇಶದಂತೆ ಬಾಗಲಕೋಟೆಯ ಎರಡು, ಬಳ್ಳಾರಿಯ 11, ಬೆಂಗಳೂರು ಸೌಥ್ ನ 3 ಶಾಲೆ, ಬೆಳಗಾವಿಯ ಐದು ಶಾಲೆಗಳು, ಬೆಳಗಾವಿ ಚಿಕ್ಕೋಡಿ ವಿಭಾಗದಿಂದ 7, ಬೆಂಗಳೂರು ನಾರ್ಥ್ ನ 2, ಚಾಮರಾಜನಗರ ಒಂದು, ಚಿತ್ರದುರ್ಗ ಒಂದು, ದಾವಣಗೆರೆ ಒಂದು, ಧಾರವಾಡ ಮೂರು, ಗದಗ ಎರಡು, ಹಾವೇರಿಯ 16 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯಾಗಿ ಉನ್ನತೀಕರಿಸಲಾಗುತ್ತದೆ.
ಕಲಬುರ್ಗಿ ಜಿಲ್ಲೆಯ ನಾಲ್ಕು, ಕೊಪ್ಪಳದ 6, ಮಂಡ್ಯ 1, ರಾಯಚೂರು 6, ಉತ್ತರ ಕನ್ನಡ ಸಿರಸಿ 1, ವಿಜಯಪುರ 5 ಮತ್ತು ಯಾದಗಿರಿಯ 18 ಶಾಲೆಗಳನ್ನು ಪ್ರೌಢ ಶಾಲೆಯಾಗಿ ಉನ್ನತೀಕರಿಸಲಾಗಿದೆ.
ಯಾಕೆ ಈ ಕ್ರಮ?
ರಾಜ್ಯದ ಕೆಲವು ಪ್ರದೇಶಗಳಲ್ಲಿ ಪ್ರೌಢ ಶಾಲೆಗಳು ಇಲ್ಲದೆ ಮಕ್ಕಳ ಶಿಕ್ಷಣ ಪ್ರಾಥಮಿಕ ಹಂತಕ್ಕೇ ನಿಂತುಹೋಗುತ್ತಿರುವುದನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಯಾವ ಯಾವ ಪ್ರಾಥಮಿಕ ಶಾಲೆಗಳಲ್ಲಿ ಸೂಕ್ತವಾದ ವಿದ್ಯಾರ್ಥಿ ಬಲ ಮತ್ತು ಮೂಲಭೂತ ಸೌಕರ್ಯಗಳಿವೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ವರದಿಯನ್ನು ತರಿಸಿಕೊಂಡು ಸರಕಾರ ಈ ಕ್ರಮ ಕೈಗೊಂಡಿದೆ.