Site icon Vistara News

School Teachers : ಸರ್ಕಾರಿ ಶಿಕ್ಷಕರಿಗೆ Good News; ಗಣತಿ, ಚುನಾವಣಾ ಕೆಲಸಕ್ಕೆ ಬಳಸದಂತೆ ಆಯೋಗಕ್ಕೆ ಸೂಚನೆ

school teachers

ಬೆಂಗಳೂರು: ಇದು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ (School Teachers) ಗುಡ್‌ ನ್ಯೂಸ್‌ (Good News). ಅದೇನೆಂದರೆ, ಈ ಆದೇಶ ಜಾರಿಯಾದರೆ ಇನ್ನು ಮುಂದೆ ಸರ್ಕಾರಿ ಶಾಲೆಯ ಶಿಕ್ಷಕರನ್ನು ಇನ್ನು ಮುಂದೆ ಜನಗಣತಿ, ಚುನಾವಣಾ ಕಾರ್ಯಕ್ಕೆ (Election duty) ನಿಯೋಜನೆ ಮಾಡುವಂತಿಲ್ಲ.

ರಾಜ್ಯದಲ್ಲಿರುವ ಶಾಲಾ ಶಿಕ್ಷಕರನ್ನು ಜನಗಣತಿ, ಚುನಾವಣಾ ಕಾರ್ಯ, ಮಕ್ಕಳಗಣತಿ ಶಿಕ್ಷಕರನ್ನ ನಿಯೋಜನೆ ಮಾಡಬೇಡಿ ಎಂದು ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education Department) ಆಯುಕ್ತರಾದ ಬಿ.ಬಿ. ಕಾವೇರಿ (Commissioner BB Kaveri) ಅವರು ಚುನಾವಣಾ ಆಯೋಗಕ್ಕೆ (Election Commission) ಸೂಚನೆ ನೀಡಿದ್ದಾರೆ.

ಶಾಲಾ ಶಿಕ್ಷಕರನ್ನು (Education news) ಯಾಕೆ ನಿಯೋಜನೆ ಮಾಡಬಾರದು ಎಂಬ ಬಗ್ಗೆ ಹಲವು ಕಾರಣ ಮತ್ತು ಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿ ಈ ಸೂಚನೆಯನ್ನು ನೀಡಲಾಗಿದ್ದು, ಇದಕ್ಕೆ ಚುನಾವಣಾ ಆಯೋಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಾಗಿದೆ.

ಜನಗಣತಿ, ಮಕ್ಕಳ ಗಣತಿ, ಚುನಾವಣಾ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. (Education news) ಇವೆಲ್ಲಾ ಚಟುವಟಿಕೆಗಳಿಂದ ಶಾಲೆಯ ಮಕ್ಕಳ ಬೋಧನೆ, ಕಲಿಕೆಗೆ ತೊಂದರೆ ಆಗುತ್ತದೆ. ಅದರಲ್ಲೂ ಪರೀಕ್ಷೆಯ ಸಮಯದಲ್ಲಿ ಬಳಕೆ ಮಾಡುವುದರಿಂದ ದೊಡ್ಡ ಹೊಡೆತ ಬೀಳುತ್ತದೆ. ಹೀಗಾಗಿ ನಿಯೋಜನೆ ಮಾಡಬೇಡಿ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಬಿಬಿಎಂಪಿಗೆ ಹಾಗೂ ಚುನಾವಣೆ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಇದು ಬೆಂಗಳೂರಿನ ಶಿಕ್ಷಕರಿಗೆ ಅನ್ವಯವಾಗಿ ಮಾಡಿದ ಮನವಿಯಾಗಿದ್ದು, ಅದನ್ನು ಎಲ್ಲ ಜಿಲ್ಲೆಗಳಿಗೆ ಅನ್ವಯ ಮಾಡಿ ಎಂದು ರಾಜ್ಯ ಶಾಲಾ ಶಿಕ್ಷಕರ (education news) ಸಂಘ ಮನವಿ ಮಾಡಿದೆ.

ಸುಪ್ರೀಂಕೋರ್ಟ್‌ ಆದೇಶದ ಉಲ್ಲೇಖ

ಶಿಕ್ಷಕರನ್ನು ಅನ್ಯ ಕೆಲಸಗಳಿಗೆ ನಿಯೋಜನೆ ಮಾಡುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ ಎನ್ನುವುದನ್ನು ಮನಗಂಡ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳು ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ನಿಯೋಜಿಸದಂತೆ ಆದೇಶ ಹೊರಡಿಸಿದ ತೀರ್ಪಿನ ಉಲ್ಲೇಖಗಳನ್ನು ಆಯುಕ್ತರು ತಮ್ಮ ಸೂಚನೆಯಲ್ಲಿ ಮಾಡಿದ್ದಾರೆ.

ಚುನಾವಣಾ ಆಯೋಗಕ್ಕೆ ಶಿಕ್ಷಣ ಇಲಾಖೆ ಆಯುಕ್ತರು ಬರೆದಿರುವ ಪತ್ರ

ಆಯುಕ್ತರು ಉಲ್ಲೇಖಿಸಿದ ಪ್ರಮುಖ ಅಂಶಗಳು

  1. ರಾಜ್ಯದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಗುರುತಿಸಲ್ಪಟ್ಟಿರುವ ದಿನಗಳು 244. ಅವುಗಳಲ್ಲಿ ಪರೀಕ್ಷೆಗಳು, ಮೌಲ್ಯಾಂಕನ ಕಾರ್ಯ, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆ ಮತ್ತು ಸ್ಥಳೀಯ ರಜೆಗಳು ಸೇರಿ 64 ದಿನಗಳು ಕಳೆದುಹೋಗುತ್ತವೆ. ಪಾಠಕ್ಕೆ ಎಂದು ಉಳಿಯುವುದು 180 ದಿನ ಮಾತ್ರ.
  2. 180 ದಿನಗಳು ಬೋಧನೆಗೆ ಎಂದು ಗುರುತಿಸಲಾಗಿದ್ದರೂ ಅವುಗಳ ಬಳಕೆಗೆ ಅವಕಾಶ ನೀಡಲಾಗುತ್ತಿಲ್ಲ.
  3. ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ನಿಯೋಜನೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು, ನಿಗಾ ಇಡುವ ಕೆಲಸ ಸಾಧ್ಯವಾಗುತ್ತಿಲ್ಲ.
  4. ಈಗ ರಾಜ್ಯದಲ್ಲಿ 5, 8 ಮತ್ತು 10ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಿಗದಿಯಾಗಿರುವುದರಿಂದ ಇನ್ನಷ್ಟು ಹೆಚ್ಚು ಒತ್ತು ನೀಡಬೇಕಾಗುತ್ತದೆ. ಜತೆಗೆ ಉತ್ತಮ ಫಲಿತಾಂಶದ ಒತ್ತಡವೂ ಇದೆ.
  5. ಹೀಗಿರುವಾಗ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ನ ತೀರ್ಪಿನ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸಬೇಡಿ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಆಯೋಗದ ಮುಂದಿನ ನಡೆ ಏನಿರಬಹುದು?

ರಾಜ್ಯ ಶಿಕ್ಷಣ ಇಲಾಖೆ ಆಯುಕ್ತರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿರುವುದು ನಿಜವಾದರೂ ಚುನಾವಣಾ ಆಯೋಗ ತನ್ನ ಕೆಲಸಕ್ಕೆ ಯಾರನ್ನು ನಿಯೋಜಿಸಿಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವಿಸಲಿದೆ. ಆಯೋಗಕ್ಕೆ ಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಕೆಲಸಗಳು ಇರುತ್ತವೆ. ಇದಕ್ಕೆ ನಿಗದಿ ಮಾಡಿದ ಸಿಬ್ಬಂದಿ ಇಲ್ಲ. ಬೇರೆ ಇಲಾಖೆಗಳಿಂದ ಪಡೆಯಲೇಬೇಕಾಗುತ್ತದೆ. ಶಿಕ್ಷಕರನ್ನು ಬಳಸಿಕೊಳ್ಳಬಾರದು ಎಂದರೆ ಮುಂದೆ ಯಾರು ಎನ್ನುವ ಪ್ರಶ್ನೆಯೂ ಎದ್ದು ನಿಲ್ಲುತ್ತದೆ. ಸರ್ಕಾರ ಇದಕ್ಕೆ ಸೂಚನೆಗಳನ್ನು ಕೊಡಬೇಕಾಗುತ್ತದೆ.

ಇದನ್ನೂ ಓದಿ : Teacher Transfer: ನೆಚ್ಚಿನ ಶಿಕ್ಷಕ ವರ್ಗಾವಣೆ; ಬಿಟ್ಟೋಗ್ಬೇಡಿ ಸರ್ ಎಂದು ಕಣ್ಣೀರಿಟ್ಟ ವಿದ್ಯಾರ್ಥಿಗಳು

Exit mobile version