ಬೆಂಗಳೂರು: ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ವಿಕಾಸ ಸಂಕಲ್ಪ ಭಾರತ ಯಾತ್ರೆ (Viksit Bharat Sankalp Yatra) ರಾಜ್ಯದ ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಜಿಲ್ಲೆಗಳಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಜನಜಾಗೃತಿ ವಾಹನ ಪ್ರಚಾರ ಕಾರ್ಯಕ್ರಮ ನಡೆದಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಯೋಜನೆಗಳ ಮಾಹಿತಿ ನೀಡುವ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಗುತ್ತಿದೆ.
ಬಹುತೇಕ ಎಲ್ಲೆಡೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಹಿತಿ ನೀಡಲು ಆಗಮಿಸಿದ ಪ್ರಚಾರ ವಾಹನಕ್ಕೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರಕಿದೆ. ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೋಜನೆಗಳ ಅನುಕೂಲತೆಗಳ ಕುರಿತು ಮಾಹಿತಿ ಹಂಚಿ ಕೊಂಡಿದ್ದಾರೆ. ಸ್ಥಳೀಯ ಸ್ವ ಸಹಾಯ ಗುಂಪಿನ ಸದಸ್ಯರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯೋಜನೆಗಳ ಮಾಹಿತಿ ಪಡೆಯುತ್ತಿದ್ದಾರೆ.
ವಿಕಾಸ ಸಂಕಲ್ಪ ಯಾತ್ರೆಯ ಮುಖಾಂತರ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಗ್ರಾಮೀಣ ಭಾಗದ ಜನರಿಗೆ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ, ಗ್ರಾಮೀಣ ಭಾಗದ ಮಹಿಳೆಯರು ಸೇರಿ ಎಲ್ಲರಿಗೂ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಲಾಗುತ್ತಿದೆ.
ಇದನ್ನೂ ಓದಿ | Halal Products: ಸಿಎಂ ಯೋಗಿ ದಿಟ್ಟ ನಿರ್ಧಾರ ’ಹಲಾಲ್’ ಉತ್ಪನ್ನಗಳ ಮಾರಾಟ ನಿಷೇಧ!
ಬುಡಕಟ್ಟು ಜನರಿಗೆ ಕೇಂದ್ರ ಸರ್ಕಾರದ ವತಿಯಿಂದ ನೀಡುತ್ತಿರುವ ಸೌಲಭ್ಯ ಹಾಗೂ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರದ ವತಿಯಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಜಿಲ್ಲೆಗಳ ಬುಡಕಟ್ಟು ಜನಾಂಗದವರು ಹೆಚ್ಚಾಗಿ ಇರುವ ಗ್ರಾಮಪಂಚಾಯತಿಗಳಿಗೆ ತೆರಳುತ್ತಿದೆ. ಲೀಡ್ ಬ್ಯಾಂಕ್ ಸಹಯೋಗದಲ್ಲಿ ಜನಧನ ಯೋಜನೆ, ಸ್ವ ನಿಧಿ ಯೋಜನೆಗಳ ಕುರಿತು ಮಾಹಿತಿ ಶಿಬಿರಗಳನ್ನು ಕೂಡಾ ಆಯೋಜಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ವಿಶೇಷ
ಚಿಕ್ಕಮಗಳೂರು ಜಿಲ್ಲೆಯ ನಂದಿಪುರ ಕೆಳಗೂರು, ಸತ್ತಿಹಳ್ಳಿ, ಬಿದರ ಹಳ್ಳಿ, ಕಾಮನಕೆರೆ, ಗೋಣಿ ಬೀಡು, ಹಳೆ ಮೂಡಿಗೆರೆ ಸೇರಿದಂತೆ ಇದುವರೆಗೆ ಒಟ್ಟು ಹತ್ತಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರಿನ ಕಾಮನಕೆರೆ ಬಿದರಹಳ್ಳಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲು ಶಿಬಿರಗಳನ್ನು ಇಂದು ಆಯೋಜಿಸಲಾಯಿತು.
ಚಾಮರಾಜನಗರ ಜಿಲ್ಲೆಯ ವಿಶೇಷ
ಬುಡಕಟ್ಟು ಜನರಿಗೆ ಕೇಂದ್ರ ಸರ್ಕಾರದ ವತಿಯಿಂದ ನೀಡುತ್ತಿರುವ ಸೌಲಭ್ಯ ಹಾಗೂ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಪಂಚಾಯತಿಗಳಿಗೆ ತೆರಳುತ್ತಿದೆ. ಯಳಂದೂರು ತಾಲೂಕಿನ ಯರಗಂಬಳ್ಳಿ ಹಾಗೂ ಗುಂಬಳ್ಳಿ ಮತ್ತು ಚಾಮರಾಜನಗರ ತಾಲೂಕಿನ ಅಂಚವಾಡಿ ಹಾಗೂ ಬಿಸಲವಾಡಿಗೆ ಇಂದು ಭೇಟಿ ಕೊಟ್ಟಿತು. ಏಕಲವ್ ಯೋಜನೆ, ಸಿಕಲ್ ಸೆಲ್ ಅನೀಮಿಯಾ ವಿರುದ್ಧ ಹೋರಾಡಲು ಇರುವ ಯೋಜನೆಗಳ ಬಗ್ಗೆ ವೀಡಿಯೊ ಪ್ರಸಾರ ಮಾಡಲಾಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಮಾಹಿತಿ ಪಡೆದುಕೊಂಡರು.
ಮೈಸೂರು ಜಿಲ್ಲೆಯ ವಿಶೇಷ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಬಿಳಿಕೆರೆ ತಾಲೂಕಿನ ಮನಗನಹಳ್ಳಿಯಲ್ಲಿ ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಕೇಂದ್ರ ಸರ್ಕಾರದ ವತಿಯಿಂದ ಉಚಿತವಾಗಿ ನೀಡುವ ಉಜ್ವಲ ಯೋಜನೆ ಬಗ್ಗೆ ಮಾಹಿತಿ ನೀಡಿ ಸ್ಥಳದಲ್ಲೇ ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಜಾರಿ ಮಾಡುವ ಕಾರ್ಯ ಇಂದು ನಡೆದಿದೆ.
ಗ್ರಾಮೀಣ ಜನತೆ ಹಾಗೂ ಉಜ್ವಲ ಯೋಜನೆ
ಭಾರತ ಸಂಕಲ್ಪ ಯಾತ್ರೆ ಮೂಲಕ, ಇದುವರೆಗೆ ಉಜ್ವಲ ಯೋಜನೆ ಪಡೆಯದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಉಜ್ವಲ ಯೋಜನೆ ಮುಖಾಂತರ ಗ್ಯಾಸ್ ವಿತರಿಸಲಾಗುತ್ತಿದೆ. ಹಾಗೂ ಈಗಾಗಲೇ ಉಜ್ವಲ ಯೋಜನೆ ಪಡೆದಿರುವವರ ಲೋಪ ದೋಷಗಳನ್ನು ಸರಿಪಡಿಸಲಾಗುತ್ತಿದೆ ಎಂದು ಮೈಸೂರು ಜಿಲ್ಲೆಯ ಉಜ್ವಲ ಯೋಜನೆಯ ಅನುಷ್ಠಾನ ಅಧಿಕಾರಿ ಶ್ರೀ ಹರ್ಷ ತಿಳಿಸಿದ್ದಾರೆ. ಮೊದಲೆಲ್ಲ ಸೌದೆ ಬಳಕೆಯಿಂದ ಆರೋಗ್ಯಕೆ ತೊಂದರೆಯಾಗುತ್ತಿತ್ತು. ಕಳೆದ ಐದು ವರ್ಷಗಳಿಂದ ಉಜ್ವಲ ಯೋಜನೆ ಮುಖಾಂತರ ಗ್ಯಾಸ್ ಪಡೆದು ಈ ಮೂಲಕ ಉತ್ತಮವಾಗಿ ಅಡುಗೆ ಮಾಡಲು ಸಾಧ್ಯವಾಗಿದೆ. ಎಂದು ಮಹಿಳೆ ಕನಕ ತಿಳಿಸಿದ್ದಾರೆ.
ಇದನ್ನೂ ಓದಿ | ಪೆಟ್ರೋಲ್ ಬೆಲೆ ಇಳಿಕೆ, ಉಚಿತ ಅಯೋಧ್ಯೆ ಯಾತ್ರೆ; ತೆಲಂಗಾಣದಲ್ಲಿ ಬಿಜೆಪಿ ‘ಪ್ರಣಾಳಿಕೆ’ ಅಸ್ತ್ರ
ಉಜ್ವಲ ಯೋಜನೆ ಮುಖಾಂತರ ಉಚಿತವಾಗಿ ಗ್ಯಾಸ್ ಪಡೆದು ಅಡುಗೆ ಮಾಡಲು ಆರಂಭಿಸಿದ ನಂತರ ಆರೋಗ್ಯ ಉತ್ತಮವಾಗಿದೆ. ಹಾಗೂ ಈ ಯೋಜನೆ ಮುಖಾಂತರ ಉಚಿತವಾಗಿ ಗ್ಯಾಸ್ ಸಿಗುವುದರಿಂದ ನಮಗೆ ತುಂಬಾ ಅನುಕೂಲಕರವಾಗಿದೆ ಎಂದು ಮೈಸೂರು ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆ ರತ್ನಮ್ಮ ತಿಳಿಸಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಉಜ್ವಲ ಯೋಜನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತದೆ ಹಾಗೂ ಅವರ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಸ್ಥಳದಲ್ಲೇ ಉಜ್ವಲ ಯೋಜನೆಯ ಮುಖಾಂತರ ಗ್ಯಾಸ್ ನೀಡಲಾಗುತ್ತಿದೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕ್ ಮೂಲಕ ಬರುವ ಗ್ಯಾಸ್ ಸಬ್ಸಿಡಿಯ ತೊಂದರೆಗಳಿದ್ದರೆ ಸ್ಥಳದಲ್ಲೇ ಸರಿಪಡಿಸಲಾಗುತ್ತಿದೆ ಎಂದು ಗ್ಯಾಸ್ ವಿತರಕರಾದ ಭಾರತಿ ಶಂಕರ್ ತಿಳಿಸಿದ್ದಾರೆ.