ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ (Haveri News) ಶ್ರೀಕ್ಷೇತ್ರ ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಸೋಮವಾರ ಭವಿಷ್ಯವಾಣಿ ನುಡಿದಿದ್ದಾರೆ. ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣಿ ಕಕ್ಕಿತಲೆ ಪರಾಕ್ ದೈವ ವಾಣಿ ಎಂದು ಗೊರವಯ್ಯ ಹೇಳಿದ್ದಾರೆ.
ಪ್ರತಿ ವರ್ಷದಂತೆ ಕಾರ್ಣಿಕೋರ್ತವದಲ್ಲಿ ಗೊರವಯ್ಯ ಭವಿಷ್ಯವಾಡಿ ನುಡಿದಿದ್ದು, ಇದನ್ನು ರಾಷ್ಟ್ರ, ರಾಜ್ಯ ರಾಜಕೀಯ ಮತ್ತು ಮಳೆ ಬೆಳೆಯ ದೃಷ್ಟಿಯಲ್ಲಿ ಧರ್ಮದರ್ಶಿ ಸಂತೋಷ್ ಭಟ್ ಗುರೂಜಿ ಅವರು ವಿಶ್ಲೇಷಿಸಿದ್ದಾರೆ. ದೈವವಾಣಿ ಪ್ರಕಾರ ʼಮುಕ್ಕೋಟಿ ಚೆಲ್ಲಿತಲೇʼ ಎಂದರೆ ರೈತ ವರ್ಗದವರು ಕೋಟ್ಯಂತರ ರೂ.ಗಳನ್ನು ಕೃಷಿಗೆ ವೆಚ್ಚ ಮಾಡುತ್ತಾರೆ. ಆದರೆ, ಅವರಿಗೆ ಲಾಭವಾಗುವ ನಿರೀಕ್ಷೆಗಳು ಕಡಿಮೆ, ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Ganesh Chaturthi 2022 | ಅರಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಗೌರಿ ಪೂಜೆ ಸಂಭ್ರಮ
ಅದೇ ರೀತಿ ʼಕಲ್ಯಾಣಿ ಕಕ್ಕಿತಲೆʼ ಎಂದರೆ ರಾಜ್ಯದಲ್ಲಿರೋ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ ಇದೆ. ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯದ ರಾಜಕೀಯ ಏರುಪೇರಾಗುವ ಸಾಧ್ಯತೆ ಇದೆ ಎಂದು ಎಂದು ಸಂತೋಷ್ ಗುರೂಜಿ ಅವರು ವಿಶ್ಲೇಷಣೆ ಮಾಡಿದ್ದಾರೆ.