Site icon Vistara News

Government Hospital : ಸ್ಕ್ಯಾನಿಂಗ್‌ಗೆ ಲೇಟ್‌ ಆಗಿದ್ದಕ್ಕೆ ಡಾಕ್ಟರ್‌ಗೆ ಬೈದು ಜೈಲುಪಾಲಾದ

Nelamangala govt hospital

ನೆಲಮಂಗಲ : ಸ್ಕ್ಯಾನಿಂಗ್‌ಗೆ ತಡವಾಗಿದ್ದಕ್ಕೆ (late scanning) ವ್ಯಕ್ತಿಯೊಬ್ಬ ಕೂಗಾಡಿ ರಂಪಾಟ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ನಡೆದಿದೆ. ವೈದ್ಯೆಗೆ ಅವಾಚ್ಯ ಶಬ್ಧಗಳಿಂದ ನಿಂದನೆ (defamation case) ಮಾಡಿದ ಕಾರಣಕ್ಕೆ ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲೋಹಿತ್‌ ಎಂಬಾತ ಗರ್ಭಿಣಿಯಾಗಿರುವ ತನ್ನ ಪತ್ನಿಯನ್ನು ಸ್ಕ್ಯಾನಿಂಗ್‌ಗೆ ಕರೆದುಕೊಂಡು ಬಂದಿದ್ದರು. ಆದರೆ ಕೆಲ ಕಾಲ ತಡವಾಗಿದ್ದಕ್ಕೆ ಸಿಟ್ಟೆಗೆದ್ದ ಲೋಹಿತ್‌ ಇನ್ನೂ ಎಷ್ಟು ಸಮಯ ಕಾಯುವುದು ಎಂದು ಏರು ಧ್ವನಿಯಲ್ಲಿ ಮಹಿಳಾ ವೈದ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಇದರಿಂದ ಮನನೊಂದ ವೈದ್ಯೆ ಡಾ.ವಿಜಯಲಕ್ಷ್ಮಿ ರಾಜೀನಾಮೆಗೆ ತೀರ್ಮಾನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಸುಮಾರು 17 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದಾನೆ. ಕೆಲಸವನ್ನು ಮಾಡಿ ಜನರಿಂದ ಬೈಗುಳವನ್ನು ಕೇಳಬೇಕೆಂದು ಆಸ್ಪತ್ರೆಯಲ್ಲಿ ಕಣ್ಣೀರಿಡುತ್ತ ಹಿರಿಯ ವೈದ್ಯಾಧಿಕಾರಿಗಳ ಜತೆಗೆ ನೋವು ತೋಡಿಕೊಂಡಿದ್ದಾರೆ.

ವೈದ್ಯೆ ಡಾ.ವಿಜಯಲಕ್ಷ್ಮಿ ಗೆ ಸಾಥ್‌ ನೀಡಿರುವ ಸಹಪಾಠಿಗಳು

ಇದನ್ನೂ ಓದಿ: Double murder : ಬೆಂಗಳೂರಲ್ಲಿ ಅಪ್ಪ-ಅಮ್ಮನನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ!

ಲೋಹಿತ್‌ ಕೂಗಾಟ ಕೇಳಿ ತಕ್ಷಣವೇ ಹಿರಿಯ ವೈದ್ಯರು ಸ್ಕ್ಯಾನಿಂಗ್ ಕೊಠಡಿಯತ್ತ ಧಾವಿಸಿ ಸಮಾಧಾನಪಡಿಸುವ ಮಾತನ್ನು ಆಡಿದ್ದಾರೆ. ಅವರ ಮಾತಿಗೂ ಬೆಲೆ ಕೊಡದಿದ್ದಾಗ, ಆತನ ವಿರುದ್ಧ ನೆಲಮಂಗಲ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಲೋಹಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೆಲಸ ಸ್ಥಗಿತಗೊಳಿಸಿದ ವೈದ್ಯರು

ಇತ್ತ ಲೋಹಿತ್‌ನ ಆಕ್ರೋಶಕ್ಕೆ ಇಂದು ಇಡೀ ದಿನ ವೈದ್ಯರು ಕೆಲಸವನ್ನು ಸ್ಥಗಿತಗೊಳಿಸಿದ್ದರು. ಸ್ಕ್ಯಾನಿಂಗ್‌ ಸೇವೆಯನ್ನು ನಿಲ್ಲಿಸಿದರು. ಇದರಿಂದಾಗಿ ಇತರೆ ರೋಗಿಗಳು ಆಸ್ಪತ್ರೆಗೆ ಬಂದು ವೈದ್ಯರು ಇದ್ದರೂ ಚಿಕಿತ್ಸೆ ಇಲ್ಲದೆ ಪರದಾಡುವಂತಾಗಯಿತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version