ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ವಿವಿಧೆಡೆ 21 ಸರ್ಕಾರಿ ಅಧಿಕಾರಿಗಳ 80 ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆ (ACB raid) ನಡೆಸಿದೆ. 350 ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಅಕ್ರಮ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ಸಾಮಾನ್ಯ ಜನ ಒಂದು ಮನೆ ಕಟ್ಟುವುದೇ ಕಷ್ಟವಾಗಿರುವ ಕಾಲದಲ್ಲಿ ಈ ಅಧಿಕಾರಿಗಳು ಹಲವಾರು ಬಂಗಲೆಗಳನ್ನು ಕಟ್ಟಿ, ಕೋಟ್ಯಂತರ ರೂಪಾಯಿಯ ಆಸ್ತಿ, ಹಣ ಗಳಿಕೆ ಮಾಡಿರುವುದು ಬಯಲಾಗಿದ್ದು, ಇನ್ನೂ ಅಧಿಕಾರಿಗಳ ತನಿಖೆ ಮುಂದುವರಿದಿದೆ.
ಎಸಿಬಿ ದಾಳಿ ನಡೆಸಿರುವ ಅಧಿಕಾರಿಗಳ ಪಟ್ಟಿ ಇಲ್ಲಿದೆ.
೧. ಬಿಡಿಎ ಗಾರ್ಡನರ್ ಕೋಟಿ ಕುಳ
ಬೆಂಗಳೂರಿನ ಬಿಡಿಎ ಮಾಲಿ(ಗಾರ್ಡನರ್) ಶಿವಲಿಂಗಯ್ಯ 100 ಕೋಟಿ ರೂ. ಮೌಲ್ಯದ ಆಸ್ತಿ ಮಾಲೀಕ. ಚನ್ನಪಟ್ಟಣ ಮೂಲದ ಈತನಿಗೆ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಒಟ್ಟು 4 ವಾಸದ ಮನೆ, ದೊಡ್ಡಕಲ್ಲಸಂದ್ರದಲ್ಲಿ 1 ನಿವೇಶನ, 510 ಗ್ರಾಂ ಚಿನ್ನಾಭರಣ, 700 ಗ್ರಾಂ ಬೆಳ್ಳಿ ಸಾಮಗ್ರಿ, ಚನ್ನಪಟ್ಟಣ ತಾಲೂಕಿನ 1 ಎಕರೆ 19 ಗುಂಟೆ ಕೃಷಿ ಜಮೀನು, 2 ಬೈಕ್, 3 ಕಾರು, 86 ಸಾವಿರ ರೂ., ನಗದು 60 ಸಾವಿರ ರೂ ಗಳ ಬ್ಯಾಂಕ್ ಠೇವಣಿ, 10 ಲಕ್ಷ ರೂ., ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೨.ಡಾ.ಕೆ.ಜನಾರ್ದನ್, ರಿಜಿಸ್ಟ್ರಾರ್ ಮೌಲ್ಯಮಾಪನ(ನಿವೃತ್ತ), ಬೆಂಗಳೂರು ಉತ್ತರ ವಿಶ್ವವಿದ್ಯಾಲಯ
ಬೆಂಗಳೂರಿನ ಜಯನಗರದಲ್ಲಿ ವಾಸದ ಮನೆ, ವಿವಿಧ ಕಡೆ 2 ನಿವೇಶನ, ಆಂಧ್ರ ಪ್ರದೇಶದ ಚಿತ್ತೂರು ತಾಲೂಕು ಬಂಗಾರು ಪಾಳ್ಯದಲ್ಲಿ ೧ ಸ್ಕೂಲ್, ಬೆಂಗಳೂರಿನ ಬಿಲೇಕಳ್ಳಿಯಲ್ಲಿ 3 ಫ್ಲ್ಯಾಟ್, 401 ಗ್ರಾಂ ಚಿನ್ನಾಭರಣ, 3.57 ಕೆಜಿ ಗ್ರಾಂ ಬೆಳ್ಳಿ ಸಾಮಗ್ರಿ, ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಿವಿಧೆಡೆ 7 ಎಕರೆ 30 ಗುಂಟೆ ಕೃಷಿ ಜಮೀನು, ವಿವಿಧ ಕಂಪನಿಯ 3 ಬೈಕ್, 4 ಕಾರು, 3.17 ಲಕ್ಷ ರೂ.. ನಗದು, 17.80 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೩. ಭೀಮರಾವ್ ಯಶವಂತ ಪವಾರ, ಅಧೀಕ್ಷಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಬೆಳಗಾವಿ
ಬೆಳಗಾವಿಯ ನಗರದ ಟಿಳಕವಾಡಿಯಲ್ಲಿ ಮನೆ, ನಿಪ್ಪಾಣಿಯ ಶಿವಾಜಿನಗರದಲ್ಲಿ ಮನೆ, ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ 2 ನಿವೇಶನ, ನಿಪ್ಪಾಣಿಯಲ್ಲಿ ನಿರ್ಮಾಣ ಹಂತದಲ್ಲಿರುವ 1 ಪೆಟ್ರೋಲ್ ಬಂಕ್, ಜೋರಗಾಂವದಲ್ಲಿ 2 ವಾಣಿಜ್ಯ ಸಂಕೀರ್ಣ, 900ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ಸಾಮಗ್ರಿ, ಜಿಲ್ಲೆಯ ವಿವಿಧೆಡೆ 22 ಎಕರೆ 10 ಗುಂಟೆ ಕೃಷಿ ಜಮೀನು, 3 ದ್ವಿಚಕ್ರ ವಾಹನ, 2 ಕಾರು, 9.50 ಲಕ್ಷ ರೂ. ನಗದು, 22 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೪. ಹರೀಶ್, ಕಿರಿಯ ಎಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ, ಉಡುಪಿ
ಉಡುಪಿಯಲ್ಲಿ ಬಡಗಬೆಟ್ಟು ಗ್ರಾಮದಲ್ಲಿ ಮನೆ, ಉಡುಪಿ ಜಿಲ್ಲೆ ಪೆರ್ಡೂರು ಮತ್ತು ಹಾವಂಜೆ ಗ್ರಾಮದಲ್ಲಿ 2 ನಿವೇಶನ, ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 3 ಎಕರೆ ಕೃಷಿ ಜಮೀನು, 970 ಗ್ರಾಂ ಚಿನ್ನಾಭರಣ, 230 ಗ್ರಾಂ ಬೆಳ್ಳಿ ಸಾಮಗ್ರಿ, 2 ದ್ವಿಚಕ್ರ ವಾಹನ, 2 ಕಾರು, 4 4.03 ಲಕ್ಷ ರೂ., ನಗದು, 7 ಲಕ್ಷ ರೂ.,ಬ್ಯಾಂಕ್ ಠೇವಣಿ ಉಳಿತಾಯ, 8 ಲಕ್ಷ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೫.ರಾಮಕೃಷ್ಣ ಎಚ್.ಇ. ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಹಾಸನ
ಹಾಸನದ ವಿದ್ಯಾನಗರದಲ್ಲಿನ 1 ವಾಸದ ಮನೆ, ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 3 ನಿವೇಶನ, 121 ಗ್ರಾಂ ಚಿನ್ನಾಭರಣ, 1.24 ಕೆಜಿ ಬೆಳ್ಳಿ ಸಾಮಗ್ರಿ, ಹಾಸನ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 25 ಗುಂಟೆ ಕೃಷಿ ಜಮೀನು, 2 ಬೈಕ್, 1 ಕಾರು, 23 ಸಾವಿರ ರೂ.ಗಳು, ವಿವಿಧ ಬ್ಯಾಂಕ್‌ಗಳಲ್ಲಿ ೩7 ಲಕ್ಷ ರೂ., 7 ಲಕ್ಷ ರೂ., ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೬.ರಾಜೀವ್ ಪಿ. ಕಾರ್ಯಪಾಲಕ ಅಭಿಯಂತರರು, ಯೋಜನಾ ವಿಭಾಗ, ಪ್ರಧಾನ ಮಂತ್ರಿ ಗ್ರಾಮ ಸಡಕ್ ವಿಭಾಗ, ಕಾರವಾರ,
ಕಾರವಾರ ಬೃಂದಾವನ್ ಅಪಾರ್ಟ್‌ಮೆಂಟ್‌ನಲ್ಲಿ 1 ಫ್ಲಾಟ್(ವಾಸದ ಮನೆ), ಬೆಂಗಳೂರು ಮತ್ತು ಕಾರವಾರದಲ್ಲಿ ತಲಾ 1 ರಂತೆ ಒಟ್ಟು 2 ನಿವೇಶನಗಳು, ಬೆಂಗಳೂರಿನಲ್ಲಿ 1 ಫ್ಲಾಟ್, 200 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ಸಾಮಗ್ರಿ, ಶಿರಸಿಯಲ್ಲಿ 4 ಗುಂಟೆ ಕೃಷಿ ಜಮೀನು, 9 ದ್ವಿಚಕ್ರ ವಾಹನ, 2 ಕಾರುಗಳು, 4 ಲಕ್ಷ ರೂ., ನಗದು, 3.50 ಲಕ್ಷ ರೂ., ಬ್ಯಾಂಕ್ ಠೇವಣಿ ಉಳಿತಾಯ, ಬ್ಯಾಂಕ್ ಲಾಕರ್‌ನಲ್ಲಿ 150 ಗ್ರಾಂ ಚಿನ್ನಾಭರಣ, 15 ಲಕ್ಷ ರೂ., ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೭.ಮಧುಸೂದನ್, ಪಿ. (ಡಿ.ಐ.ಜಿ.ಆರ್) ಸಹಾಯಕ ಮಹಾನಿರೀಕ್ಷಕರು ನೋಂದಣಿ(ಆಡಿಟ್) ಐಜಿಆರ್ ಆಯುಕ್ತರ ಕಚೇರಿ, ಕಂದಾಯ ಭವನ, ಬೆಂಗಳೂರು
ಬೆಂಗಳೂರಿನ ರಾಜಾಜಿನಗರದಲ್ಲಿ 1 ವಾಸದ ಮನೆ, ದುಬಾಸಿ ಪಾಳ್ಯದಲ್ಲಿ 1 ವಾಸದ ಮನೆ, ಮಹಾಲಕ್ಷ್ಮೀಪುರಂನಲ್ಲಿ 1 ಖಾಲಿ ನಿವೇಶನ, 2.29 ಕೆಜಿ ಚಿನ್ನಾಭರಣಗಳು, 4.11 ಕೆಜಿ ಬೆಳ್ಳಿ ಸಾಮಗ್ರಿ, ಮಂಡ್ಯ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 13 ಎಕರೆ 15 ಗುಂಟೆ ಕೃಷಿ ಜಮೀನು, 2 ಬೈಕ್, ಕಾರು, 39 ಲಕ್ಷ ರೂ., ನಗದು, ವಿವಿಧ ಬ್ಯಾಂಕ್‌ಗಳು 5 ಲಕ್ಷ ಠೇವಣಿ, ಎಸ್.ಬಿ.ಐ. ಪಿಎಫ್ 1.35 ಲಕ್ಷ ರೂ. , 5 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೮.ಪರಮೇಶ್ವರಪ್ಪ, ಸಹಾಯಕ ಅಭಿಯಂತರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ
ಚಿತ್ರದುರ್ಗ ಜಿಲ್ಲೆ ಮೇದೆಹಳ್ಳಿಯಲ್ಲಿ ವಾಸದ ಮನೆ, ಕೂಡ್ಲಿಗಿ ನಗರದ ಕೆಎಚ್ ಕಾಲನಿಯಲ್ಲಿ 1 ಮನೆ, ವಿವಿಧ ಕಡೆಗಳಲ್ಲಿ ಒಟ್ಟು 7 ಖಾಲಿ ನಿವೇಶನ, 23 ವಜ್ರದ ನೆಕ್‌ಲೆಸ್, 892 ಗ್ರಾಂ ಚಿನ್ನಾಭರಣ, 2,688 ಗ್ರಾಂ ಬೆಳ್ಳಿ ಸಾಮಗ್ರಿ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ 4 ಎಕರೆ 72 ಸೇಂಟ್ ಕೃಷಿ ಜಮೀನು, 1 ದ್ವಿಚಕ್ರ ವಾಹನ, 1 ಕಾರು, 1 ವಿಮಾ ಪಾಲಸಿ, ವಿವಿಧ ಬ್ಯಾಂಕ್‌ಗಳಲ್ಲಿ 8.65 ಲಕ್ಷ ರೂ., ಠೇವಣಿ ಉಳಿತಾಯ, 10.33 ಲಕ್ಷ ರೂ., ನಗದು ಪತ್ತೆಯಾಗಿದೆ.
೯.ಯಲಪ್ಪ ಪಡಸಾಲಿ ಆರ್‌ಟಿಒ, ಬಾಗಲಕೋಟೆ
ಧಾರವಾಡ ಜಿಲ್ಲೆ ಕೃಷ್ಣಪುರ ಗ್ರಾಮದಲ್ಲಿ ಮನೆ, ಧಾರವಾಡ ಜಿಲ್ಲೆ ಲಕಮನಹಳ್ಳಿಯಲ್ಲಿ ಮನೆ, ಕೊಪ್ಪಳದ ಭಾಗ್ಯ ನಗರದಲ್ಲಿ ಮನೆ, ಹುಬ್ಬಳ್ಳಿ ತಾಲೂಕು ಅಮರಗೋಳ ಗ್ರಾಮದಲ್ಲಿ 1 ಖಾಲಿ ನಿವೇಶನ, ಧಾರವಾಡ ಜಿಲ್ಲೆ ಬಜಾರ್ ಶಾಪ್‌ನಲ್ಲಿ 3 ವಾಣಿಜ್ಯ ಸಂಕೀರ್ಣ, ಬೆಂಗಳೂರಿನ ದಾಸರಹಳ್ಳಿಯಲ್ಲಿ ಫ್ಲಾಟ್, 824 ಗ್ರಾಂ ಚಿನ್ನಾಭರಣ, 5.7 ಕೆಜಿ ಬೆಳ್ಳಿ ಸಾಮಗ್ರಿ, ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 11 ಎಕರೆ 35 ಗುಂಟೆ ಕೃಷಿ ಜಮೀನು, ವಿವಿಧ ಕಂಪನಿಯ 2 ಬೈಕ್, 3 ಕಾರುಗಳು, ೬2.೫ ಲಕ್ಷ ರೂ., ನಗದು, 12 ಬ್ಯಾಂಕ್ ಖಾತೆಗಳು, ಸುಮಾರು 10 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೧೦.ಶಂಕರಲಿಂಗ ನಾಗಪ್ಪ ಗೋಗಿ, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ
ಬಾಗಲಕೋಟೆ ನಗರದಲ್ಲಿ 1 ವಾಸದ ಮನೆ, ಕೊಪ್ಪಳ ಪಟ್ಟಣ ಮತ್ತು ಧಾರವಾಡ ಜಿಲ್ಲೆಗಳು 2 ಖಾಲಿ ನಿವೇಶನಗಳು, ಇಳಕಲ್ ನಗರದಲ್ಲಿ 2 ವಾಣಿಜ್ಯ ಸಂಕೀರ್ಣಗಳು, 350 ಗ್ರಾಂ ಚಿನ್ನಾಭರಣ, 3ಕೆಜಿ ಬೆಳ್ಳಿ ಸಾಮಗ್ರಿ, 2 ದ್ವಿಚಕ್ರ ವಾಹನ, ಕಾರು, 1.15 ಲಕ್ಷ ರೂ., ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 6 ಉಳಿತಾಯ ಖಾತೆಗಳು, 20 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೧೧.ಪ್ರದೀಪ ಶಿವಪ್ಪ ಆಲೂರ, ಕಾರ್ಯದರ್ಶಿ ಗ್ರೇಡ್-2, ಅಸುಂಡಿ ಗ್ರಾಮ ಪಂಚಾಯಿತಿ, ಗದಗ
ಗದಗ ಜಿಲ್ಲೆಯ ಹುಲಕೋಟ ಗ್ರಾಮದಲ್ಲಿ ಮನೆ, ಬೆಂತೂರ ಗ್ರಾಮದಲ್ಲಿ ಮನೆ, ಧಾರವಾಡ ನಗರದ ಶಾಂತಿ ಕಾಲನಿಯಲ್ಲಿ ಮನೆ, ಧಾರವಾಡ ತಾಲೂಕು ಹೆಬ್ಬಳ್ಳಿ ಗ್ರಾಮದಲ್ಲಿ ಮನೆ/ಆಸ್ಪತ್ರೆ, ಗದಗ ಮತ್ತು ಧಾರವಾಡ ಜಿಲ್ಲೆಯ ವಿವಿಧ ಗ್ರಾಮ ಬಡಾವಣೆಗಳಲ್ಲಿ ಒಟ್ಟು 7 ಬಾರಿ ನಿವೇಶನ, ಗದಗ ಜಿಲ್ಲೆ ವಿವಿಧ ಗ್ರಾಮಗಳಲ್ಲಿ ಒಟ್ಟು 39 ಎಕರೆ 29 ಗುಂಟೆ ಕೃಷಿ ಜಮೀನು, 3 ದ್ವಿಚಕ್ರ ವಾಹನ, 2 ಕಾರು, 2 ಟ್ರ್ಯಾಕ್ಟರ್, 5 ಲಕ್ಷ ಬೆಲೆಬಾಳುವ ವಿಮಾ ಪಾಲಿ, 2.08 ಲಕ್ಷ ನಗದು, 15 ಬ್ಯಾಂಕ್ ಖಾತೆಗಳು, 5.19 ಲಕ್ಷ ರೂ.ಠೇವಣಿ, 5.19 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೧೨. ಡಿ. ಸಿದ್ದಪ್ಪ, ಡೆಪ್ಯೂಟಿ ಚೀಫ್ ಎಲೆಕ್ಟಿಕಲ್ ಇನ್‌ಸ್ಪೆಕ್ಟರ್, ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ, ಬೆಂಗಳೂರು
ಶಿವಮೊಗ್ಗದ ಎಲ್.ಬಿ.ಎಸ್. ನಗರದಲ್ಲಿ 1 ವಾಸದ ಮನೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಗ್ರಾಮದಲ್ಲಿ ಮನೆ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ವಿವಿಧ ಬಡಾವಣೆಗಳಲ್ಲಿ ಒಟ್ಟು 7 ಖಾಲಿ ನಿವೇಶನ, 730 ಗ್ರಾಂ ಚಿನ್ನಾಭರಣ, 3.4 ಕೆ.ಜಿ ಬೆಳ್ಳಿ ಸಾಮಗ್ರಿ, ದಾವಣಗೆರೆ ಜಿಲ್ಲೆ ಎಚ್.ಗೋಪಗೊಂಡನಹಳ್ಳಿಯಲ್ಲಿ 1 ಎಕರೆ 20 ಗುಂಟೆ ಕೃಷಿ ಜಮೀನು, ಬೈಕ್, ಕಾರು, 7.85 ಲಕ್ಷ ರೂ., ವಿವಿಧ ಬ್ಯಾಂಕ್‌ಗಳಲ್ಲಿ 13 ಖಾತೆಗಳು, 15 ಲಕ್ಷ ರೂ., ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೧೩.ತಿಪ್ಪಣ್ಣ ಪಿ. ಸಿರಸಗಿ, ಜಿಲ್ಲಾ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ, ಬೀದರ್
ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 3 ವಾಸದ ಮನೆಗಳು, 200 ಗ್ರಾಂ ಚಿನ್ನಾಭರಣ, 1,417 ಗ್ರಾಂ ಬೆಳ್ಳಿ, ಕಲಬುರಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 4 ಎಕರೆ 19 ಗುಂಟೆ ಕೃಷಿ ಜಮೀನು, 2 ದ್ವಿಚಕ್ರ ವಾಹನ, 1 ಕಾರು, ನಗದು ಹಣ 65 ಸಾವಿರ ರೂ., , 7 ವಿಮಾ ಪಾಲಿಸಿಗಳು, ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 9 ಲಕ್ಷ ರೂ.ಗಳ 7 ಠೇವಣಿ, 6 ಸಾವಿರ ಬೆಲೆ ಬಾಳುವ 2 ಷೇರುಗಳು, ಕೈಸಾಲ ನೀಡಿರುವುದು 5 ಲಕ್ಷ ರೂಗಳು, ಸುಮಾರು 10.7ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೧೪.ಮೃತ್ಯುಂಜಯ ಸಿ. ತಿರಾಣೆ, ಹಿರಿಯ ಸಹಾಯಕ, ಪ್ರಸ್ತುತ ಸಹಾಯಕ ನಿಯಂತ್ರಕರು, ಪಶು ವಿಶ್ವವಿದ್ಯಾಲಯ, ಬಿದರ್
ಬೀದರ್ ನಗರದ ಗುಮ್ಮೆ ಕಾಲನಿಯಲ್ಲಿ 1 ವಾಸದ ಮನೆ, ಜಿಲ್ಲೆಯ ಮಹಾಗಾಂವ ಗ್ರಾಮದಲ್ಲಿ 1 ವಾಸದ ಮನೆ, ಬೀದರ್ ಜಿಲ್ಲೆಯ ವಿವಿಧ ಕಡೆಗಳಲ್ಲಿ 6 ಖಾಲಿ ನಿವೇಶನಗಳು, 717 ಗ್ರಾಂ ಚಿನ್ನಾಭರಣ, 1 ಕೆಜಿ 531 ಗ್ರಾಂ ಬೆಳ್ಳಿ ಸಾಮಗ್ರಿ, ವಿವಿಧ ಕಡೆಗಳಲ್ಲಿ 10 ಎಕರೆ 35 ಗುಂಟೆ ಕೃಷಿ ಜಮೀನು, 1 ದ್ವಿಚಕ್ರ ವಾಹನ, 1.71 ಲಕ್ಷ ರೂ., ನಗದು, 75.5 ಲಕ್ಷ ರೂ. ಠೇವಣಿ, ಸುಮಾರು 9.5 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿ.
೧೫.ಎ.ಮೋಹನ್ ಕುಮಾರ್, ಕಾರ್ಯಪಾಲಕ ಅಭಿಯಂತರರು, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ
ಬೆಂಗಳೂರಿನ ನಾಗರಬಾವಿಯ ಇವರ ಅಣ್ಣನ 1 ವಾಸದ ಮನೆ, ನಾಗರಭಾವಿ 2ನೇ ವಿವಿಧ ಬಡಾವಣೆಗಳಲ್ಲಿ ಒಟ್ಟು 7 ಖಾಲಿ ನಿವೇಶನಗಳು, ವಾಣಿಜ್ಯ ಸಂಕೀರ್ಣಗಳು ಪತ್ತೆಯಾಗಿವೆ. 2 ಕೆಜಿ 279 ಗ್ರಾಂ ಚಿನ್ನಾಭರಣ, 5.6 ಕೆಜಿ ಬೆಳ್ಳಿ ಸಾಮಗ್ರಿ, ಕೆಂಗೇರಿ ಹೋಬಳಿ ಗ್ರಾಮದಲ್ಲಿ 1 ಎಕರೆ 19 ಗುಂಟೆ ಕೃಷಿ ಜಮೀನು, 2 ದ್ವಿಚಕ್ರ ವಾಹನಗಳು, 2 ಕಾರುಗಳು, 13.5 ಲಕ್ಷ ನಗದು, 15 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೧೬. ಶ್ರೀಧರ್.ಬಿ.ಎಸ್, ಜಿಲ್ಲಾ ನೋಂದಣಾಧಿಕಾರಿ, ಕಾರವಾರ
ಕಾರವಾರ ಜಿಲ್ಲಾ ನೋಂದಣಾಧಿಕಾರಿ ಬಿ.ಎಸ್. ಶ್ರೀಧರ್ ಅವರ ಬೆಂಗಳೂರಿನಲ್ಲಿರುವ 3 ವಾಸದ ಮನೆ, ನೆಲಮಂಗಲ ಲಕ್ಕಸಂದ್ರದಲ್ಲಿ 1 ಖಾಲಿ ನಿವೇಶನ, 650 ಗ್ರಾಂ ಬೆಳ್ಳಿ ಸಾಮಾಗ್ರಿ, ಕನಕಪುರದ ಮರಳವಾಡಿಯಲ್ಲಿ 1 ಫಾರ್ಮ್ ಹೌಸ್, ನೆಲಮಂಗಲ ತಾಲೂಕು ಮೈಲನಹಳ್ಳಿಯಲ್ಲಿ 2 ಎಕರೆ ಕೃಷಿ ಜಮೀನು, ವಿವಿಧ ಕಂಪನಿಯ 2 ದ್ವಿಚಕ್ರ ವಾಹನಗಳು, ವಿವಿಧ ಕಂಪನಿಯ 2 ಕಾರುಗಳು, ನಗದು ಹಣ 30 ಸಾವಿರ ರೂಗಳು, ವಿವಿಧ ಬ್ಯಾಂಕ್‌ಗಳಲ್ಲಿ 24 ಲಕ್ಷ ರೂ.ಗಳ ಠೇವಣಿ, ಸುಮಾರು 5 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೧೭.ಮಂಜುನಾಥ ಜಿ. ಅಧೀಕ್ಷಕ ಅಭಿಯಂತರರು (ನಿವೃತ್ತ), ಲೋಕೋಪಯೋಗಿ, ಇಲಾಖೆ, ಬೆಂಗಳೂರು
ಬೆಂಗಳೂರಿನ ಬಸವೇಶ್ವರ ನಗರ, ರಾಜಾಜಿನಗರದಲ್ಲಿ 2 ಮನೆ, ಜಯನಗರ ಮತ್ತು ನಾಗವಾರದಲ್ಲಿ 2 ವಾಣಿಜ್ಯ ಸಂಕೀರ್ಣ, ನಗರದ ವಿವಿಧೆಡೆ 2 ಫ್ಲ್ಯಾಟ್, 3.75 ಕೆಜಿ ಬೆಳ್ಳಿ ಸಾಮಗ್ರಿ, ಬೆಂಗಳೂರು ದಕ್ಷಿಣ ತಾಲೂಕು ಚಿಂಚನಘಟ್ಟದಲ್ಲಿ 4 ಎಕರೆ ಕೃಷಿ ಜಮೀನು, 1 ದ್ವಿಚಕ್ರ ವಾಹನ, 2 ಕಾರು, 1.17 ಲಕ್ಷ ರೂ., ನಗದು, 3 ವಿಮಾ ಪಾಲಸಿ, 10 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೧೮.ಉದಯ ರವಿ, ಪೊಲೀಸ್ ಇನ್‌ಸ್ಪೆಕ್ಟರ್, ಕೊಪ್ಪಳ
ಮುದಗಲ್‌ನಲ್ಲಿ 2 ನಿವೇಶನ, ಕೊಪ್ಪಳ ಜಿಲ್ಲೆಯ ವಿವಿಧ ಕಡೆ ಸಂಬಂಧಿಕರು ಮತ್ತು ಸ್ನೇಹಿತರ ಒಟ್ಟು 79 ಎಕರೆ 23 ಗುಂಟೆ ಕೃಷಿ ಜಮೀನು, 1 ಕೆಜಿ 35 ಗ್ರಾಂ ಚಿನ್ನಾಭರಣ, 1 ಕೆಜಿ 90 ಗ್ರಾಂ ಬೆಳ್ಳಿ ಸಾಮಗ್ರಿ, 1 ಟ್ರ್ಯಾಕ್ಟರ್, 13.96 ಲಕ್ಷ ನಗದು ಪತ್ತೆಯಾಗಿದೆ.
೧೯.ಬಿ.ಜಿ.ತಿಮ್ಮಯ್ಯ, ದ್ವಿತೀಯ ದರ್ಜೆ ಸಹಾಯಕ, ಅಜ್ಜಂಪುರ ಪಟ್ಟಣ ಪಂಚಾಯಿತಿ, ಚಿಕ್ಕಮಗಳೂರು
ಕಡೂರು ತಾಲೂಕಿನಲ್ಲಿ 2 ವಾಸದ ಮನೆ, ಕಡೂರು ಮತ್ತು ಇತರೆ ಕಡೆಗಳಲ್ಲಿ 3 ಖಾಲಿ ನಿವೇಶನ, ಕಡೂರು ತಾಲೂಕಿನಲ್ಲಿ ಮೂರು ಅಂತಸ್ತಿನ 1 ವಾಣಿಜ್ಯ ಸಂಕೀರ್ಣ, ವಿವಿಧ ಕಡೆಗಳಲ್ಲಿ ಒಟ್ಟು 21 ಎಕರೆ ಕೃಷಿ ಜಮೀನು, 100 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಸಾಮಗ್ರಿ, ಬೈಕ್, ಕಾರು, 2 ಟ್ರ್ಯಾಕ್ಟರ್, 1 ಕುರಿ ಶೆಡ್, ಸುಮಾರು 5 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
20.ಚಂದ್ರಪ್ಪ ಸಿ. ಓಲೇಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ತುಂಗ ಮೇಲ್ದಂಡೆ ಯೋಜನೆ, ರಾಣೆಬೆನ್ನೂರು
ರಾಣೆಬೆನ್ನೂರು ಸಿದ್ಧಾರೂಡ ನಗರದ ಮನೆ, ರಾಣೆಬೆನ್ನೂರು ಮತ್ತು ಬ್ಯಾಡಗಿ ತಾಲೂಕಿನ ವಿವಿಧ ಕಡೆ 5 ನಿವೇಶನ, 400 ಗ್ರಾಂ ಚಿನ್ನಾಭರಣ, 1.60 ಕೆಜಿ ಬೆಳ್ಳಿ ಸಾಮಗ್ರಿ, ಮೈದೂರು ಗ್ರಾಮದಲ್ಲಿ ಒಟ್ಟು 25 ಎಕರೆ 22 ಗುಂಟೆ ಕೃಷಿ ಜಮೀನು, 4 ದ್ವಿಚಕ್ರ ವಾಹನ, ಕಾರು, ಟ್ರಾಕ್ಟರ್, 13.39 ಲಕ್ಷ ರೂ., 19 ಎಲ್.ಐ.ಸಿ ವಿಮಾ ಪಾಲಿಸಿ, ಅಣೂರ ಗ್ರಾಮದಲ್ಲಿ ಕೋಳಿ ಫಾರ್ಮ್, 25 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
೨೧. ಓಬಯ್ಯ, ಸಹಾಯಕ ಅಭಿಯಂತರರು, ಜಿಲ್ಲಾ ಪಂಚಾಯಿತಿ, ಪಂಚಾಯತ್ ರಾಜ್ ಉಪ ವಿಭಾಗ, ವಿರಾಜಪೇಟೆ,
ಹುಣಸೂರು ತಾಲೂಕಿನ ವಿವಧೆಡೆ 3 ಮನೆ, 342 ಗ್ರಾಂ ಚಿನ್ನಾಭರಣ, 2.83 ಕೆಜಿ ಗ್ರಾಂ ಬೆಳ್ಳಿ ಸಾಮಗ್ರಿ, ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 9 ಎಕರೆ 14 ಗುಂಟೆ ಕೃಷಿ ಜಮೀನು, 1 ಕಾರು, ಬ್ಯಾಂಕ್ ಖಾತೆಯಲ್ಲಿ 3.33 ಲಕ್ಷ ರೂ., ಸುಮಾರು 30 ಸಾವಿರ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಇದನ್ನೂ ಓದಿ | ACB raid | ಭ್ರಷ್ಟಾಚಾರಿಗೆ ಕೊನೆಯ ಚಾಟಿಯೇ ದಾಳಿ: ಎಸಿಬಿ ರೇಡ್ ಮಾಡೋದ್ಯಾಕೆ? ಇಲ್ಲಿದೆ ವಿವರ