ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ (SC ST Reservation) ಹೆಚ್ಚಿಸುವ ದಿಸೆಯಲ್ಲಿ ಕರ್ನಾಟಕ ಸರ್ಕಾರ ಮಂಡಿಸಿದ ವಿಧೇಯಕಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದು, ವಿಧೇಯಕ ಈಗ ಕಾಯ್ದೆಯಾಗಿದೆ. ಇದರಿಂದಾಗಿ ರಾಜ್ಯದ ಎರಡೂ ಸಮುದಾಯಗಳ ಬಹುವರ್ಷಗಳ ಮೀಸಲಾತಿ ಬೇಡಿಕೆಯು ಈಡೇರಿದಂತಾಗಿದೆ.
“ಕರ್ನಾಟಕ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ”ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಕುರಿತು ಜನವರಿ 12ರಂದು ವಿಶೇಷ ರಾಜ್ಯಪತ್ರ ಹೊರಡಿಸಿದ್ದಾರೆ.
ಎಸ್‌ಸಿ ಸಮುದಾಯಕ್ಕೆ ಈ ಹಿಂದೆ ಇದ್ದ ಶೇ. 15 ಮೀಸಲಾತಿಯನ್ನು ಶೇ. 17 ಕ್ಕೆ ಹಾಗೂ ಎಸ್‌ಟಿ ಸಮುದಾಯಕ್ಕೆ ಈ ಹಿಂದೆ ಇದ್ದ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದ ಸರ್ಕಾರ, ಈ ಹಿಂದೆಯೇ ಸುಗ್ರೀವಾಜ್ಞೆ ಹೊರಡಿಸಿತ್ತು. ಸುಗ್ರೀವಾಜ್ಞೆಯನ್ನು ಕಾಯ್ದೆಯನ್ನಾಗಿ ಪರಿವರ್ತಿಸುವ ವಿಧೇಯಕಕ್ಕೆ ಬೆಳಗಾವಿ ಅಧಿವೇಶನದ ವೇಳೆ ಅಂಗೀಕಾರ ದೊರೆತಿತ್ತು. ಈಗ ವಿಧೇಯಕಕ್ಕೆ ರಾಜ್ಯಪಾಲರ ಮುದ್ರೆಯೂ ಬಿದ್ದಿದೆ.
ಇದನ್ನೂ ಓದಿ | SC ST Reservation | ಎಸ್‌ಸಿ ಎಸ್‌ಟಿ ಹೊಸ ಮೀಸಲಾತಿಯ ರೋಸ್ಟರ್ ಪ್ರಕಟ; ನೇಮಕಾತಿಗೆ ದಾರಿ ಸುಗಮ