ಬೆಂಗಳೂರು: ಕೇಂದ್ರ ಸರಕಾರ ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆಂದು ನಿಗದಿ ಮಾಡಿದ ೧೦ ಶೇಕಡಾ ಮೀಸಲಾತಿಯಲ್ಲಿ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ವರ್ಗಗಳಿಗೆ ಪಾಲು ನೀಡಲಾಗದು (Reservation Politics) ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಆಶೋಕ್ ಹಾರ್ನಹಳ್ಳಿ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಒಂದೊಮ್ಮೆ ಈ ರೀತಿ ಹಂಚಿದರೆ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳಲು ಅವರು ಕರೆ ನೀಡಿದ್ದಾರೆ.
ರಾಜ್ಯ ಸರಕಾರ ಇಡಬ್ಲ್ಯುಎಸ್‌ನ ಶೇಕಡಾ ಹತ್ತು ಮೀಸಲಾತಿಯಲ್ಲಿ ಒಕ್ಕಲಿಗರು ಮತ್ತು ಪಂಚಮಸಾಲಿಗಳಿಗೆ ಪಾಲು ನೀಡಲು ಸಂಪುಟದಲ್ಲಿ ನಿರ್ಣಯ ಮಾಡಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣ ಮಹಾಸಭಾದ ಈ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.
ʻʻಇಡಬ್ಲ್ಯುಎಸ್ ಮೀಸಲಾತಿಯಲ್ಲಿ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳಿಗೆ ಮೀಸಲಾತಿ ಕೊಡಲು ಆಗಲ್ಲ. ಇದು ಬರೀ ಆರ್ಥಿಕ ಹಿಂದುಳಿದವರಿಗೆ ಮಾತ್ರ ಅನ್ವಯ ಆಗುತ್ತೆ. ಆದರೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದ ಜಾತಿಗಳಿಗೆ ಇಡಬ್ಲ್ಯುಎಸ್‌ನಿಂ ಹಂಚಿಕೆ ಮಾಡಲು ಹೊರಟಿದೆ. ಇದು ಕಾನೂನುಬಾಹಿರʼʼ ಎಂದು ಅವರು ಹೇಳಿದ್ದಾರೆ.
ʻʻರಾಜ್ಯದಲ್ಲಿ ಈಗಾಗಲೇ ಇರುವ ಮೀಸಲಾತಿಯನ್ನು 50ರಿಂದ 56 ಶೇಕಡಾಕ್ಕೆ ಏರಿಕೆ ಮಾಡಿದ್ದಾರೆ. ಇದು ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ವಿರೋಧಿ ನಿಲುವು. ಹೀಗಿದ್ದರೂ ಇಡಬ್ಲ್ಯುಎಸ್‌ನ ಮೀಸಲಾತಿ ಇತರರಿಗೆ ಹಂಚುವ ಮೂಲಕ ಸರ್ಕಾರ ಬ್ರಾಹ್ಮಣ ವಿರೋಧಿ ನೀತಿ ಅನುಸರಿಸುತ್ತಿದೆʼʼ ಎಂದು ಅವರು ಆಪಾದಿಸಿದರು. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳುವಂತೆ ಕರೆ ಕೊಟ್ಟಿದ್ದಾರೆ ಆಶೋಕ್ ಹಾರ್ನಹಳ್ಳಿ.
ಇದನ್ನೂ ಓದಿ | Panchamasali Reservation | 2ಡಿ ಮೀಸಲು ಬೇಡ, 2ಎನಲ್ಲೇ ಕೊಡ್ಬೇಕು: ಜ.12ರೊಳಗೆ ಘೋಷಿಸದಿದ್ದರೆ ಮತ್ತೆ ಹೋರಾಟ