ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಮಾರ್ಚ್ 1 ರಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿಯ ಮುಷ್ಕರಕ್ಕೆ (Govt Employees Strike) ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಬೆಂಬಲ ನೀಡಿದ್ದು, ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳನ್ನು ಸಂಪೂರ್ಣ ಬಂದ್ ಮಾಡಬೇಕೆಂದು ಶಿಕ್ಷಕರಿಗೆ ಕರೆ ನೀಡಿದೆ.
7ನೇ ವೇತನ ಆಯೋಗದ (7th pay commission) ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ನೂತನ ಪಿಂಚಣಿ ಯೋಜನೆಯನ್ನು (NPS) ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರು ಈ ಪ್ರತಿಭಟನೆ ನಡೆಸಲಿದ್ದು, ಇದರಲ್ಲಿ ರಾಜ್ಯದ ಎಲ್ಲ ಶಿಕ್ಷಕರೂ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲ ಶಿಕ್ಷಕರು ಕರ್ತವ್ಯಕ್ಕೆ ಗೈರು ಹಾಜರಾಗಬೇಕು. ಪರೀಕ್ಷಾ ಸಿದ್ಧತೆಯಲ್ಲಾಗಲೀ ಅಥವಾ ಆನ್‌ಲೈನ್ ಕಾರ್ಯಗಳಾದ SATS, SSLC Work, ವಿದ್ಯಾರ್ಥಿ ವೇತನ ಹಾಗೂ ಬಿಸಿಯೂಟದ SMS, ನಿಷ್ಠಾ, ದೀಕ್ಷಾ ತರಬೇತಿ ಹೀಗೆ ಯಾವುದೇ ಆನ್‌ಲೈನ್ ಕಾರ್ಯಗಳಲ್ಲಿ ಭಾಗವಹಿಸಬಾರದು. ಈ ಹೋರಾಟದ ಬಗ್ಗೆ ಪಾಲಕರ ಗಮನಕ್ಕೆ ತಂದು, ನಮ್ಮ ಬೇಡಿಕೆಗಳ ಮಹತ್ವ ಹಾಗೂ ಹೋರಾಟದ ಅನಿವಾರ್ಯತೆ ಬಗ್ಗೆ ತಿಳಿಸಬೇಕು ಎಂದು ಸಂಘ ಶಿಕ್ಷಕರಿಗೆ ಮನವಿ ಮಾಡಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಶಾಲೆಗಳಲ್ಲಿ ಬಿಸಿಯೂಟದ ಸಿಬ್ಬಂದಿಗೆ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರಿಗೆ ನಮ್ಮ ಹೋರಾಟದ ಬಗ್ಗೆ ತಿಳಿಸಿ ಬಿಸಿಯೂಟವನ್ನು ಕೂಡ ಸ್ಥಗಿತಗೊಳಿಸಬೇಕು ಹಾಗೂ ಮಕ್ಕಳು ಶಾಲೆಗೆ ಬರದಂತೆ ನೋಡಿಕೊಳ್ಳಬೇಕೆಂದು ಸೂಚಿಸಿರುವ ಸಂಘವು, ಅತಿಥಿ ಶಿಕ್ಷಕರಿಗೂ ಕೂಡ ಶಾಲೆಗಳಿಗೆ ಬರದಂತೆ ವಿನಂತಿಸಿ, ಸಂಪೂರ್ಣವಾಗಿ ಶಾಲೆಗಳನ್ನು ಬಂದ್ ಮಾಡಬೇಕೆಂದು ಹೇಳಿದೆ.
ಬಿಎಲ್‌ಓಗಳಾಗಿ ಅಥವಾ ಇನ್ನಿತರೆ ಚುನಾವಣೆ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಸ್ಥಳೀಯರಿಗೆ ಹೋರಾಟದ ಮಹತ್ವವನ್ನು ತಿಳಿಸಿ ಹೋರಾಟದಲ್ಲಿ ಭಾಗವಹಿಸಿ ಹೋರಾಟವನ್ನು ಸಂಪೂರ್ಣವಾಗಿ ಸಂಘವು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದೆ.
ಇದನ್ನೂ ಓದಿ : Astrology Tips : ಮದುವೆಗೆ ಕಂಕಣ ಬಲ ಕೂಡಿ ಬರುತ್ತಿಲ್ಲವೇ?; ಜ್ಯೋತಿಷ್ಯ ಶಾಸ್ತ್ರದಲ್ಲಿದೆ ಪರಿಹಾರ